ವೀರಾಜಪೇಟೆ, ಜೂ. ೨೯: ಸರಕಾರದ ಅನುದಾನ ಅರ್ಹ ಫಲಾನುಭವಿಗಳಿಗೆ ದೊರಕು ವಂತಾಗಬೇಕು. ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಯ ಬಾರದು ಎಂದು ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಎಂ.ಸಿ. ಸತೀಶ್ ಹೇಳಿದರು.
ವೀರಾಜಪೇಟೆ ಬಳಿಯ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಯಿಂದ ಸಿದ್ಧಪಡಿಸಿರುವ ಯೋಜನೆಗಳನ್ನು ಕ್ರಿಯಾರೂಪಕ್ಕೆ ತರಬೇಕು. ಈ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುದಾನವನ್ನು ಬಳಸುವಂತಾಗ ಬೇಕು ಎಂದ ಸತೀಶ್ ಅವರು ಪ್ರತಿಯೊಂದು ಮನೆಯಲ್ಲಿ ಉಪಯೋಗಿಸುವಂತಹ (ತೊಳೆದ) ನೀರು ಹರಿದು ಹೋಗದಂತೆ ಮನೆಯ ಆವರಣದಲ್ಲಿಯೇ ಇಂಗುಗುAಡಿ ಮಾಡಿ ನೀರನ್ನು ಇಂಗಿಸುವAತಹ ಕಾರ್ಯವನ್ನು ಮಾಡಬೇಕೆಂದರು.
ಜಿಲ್ಲಾ ಪಂಚಾಯಿತಿ ಜಲಜೀವನ್ ಮಿಷನ್ ತಾಲೂಕು ಸಂಯೋಜಕ ನಿರಂಜನ್ ಅವರು ಮಾತನಾಡಿ, ಗ್ರಾಮಗಳಲ್ಲಿ ಗುಂಪು ಮನೆಗಳಿದ್ದಲ್ಲಿ ಕೂಡಲೇ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಹಾಗೂ ಸರಕಾರಿ ಜಾಗ ಇದ್ದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ನಂತರ ಪೈಪ್ ಅಳವಡಿಸಿ ಎಲ್ಲಾ ಜನತೆಗೂ ಹಂತ ಹಂತವಾಗಿ ಕುಡಿಯುವ ನೀರು ಸೌಲಭ್ಯ ನೀಡಲಾಗುವುದು.
ಆದರೆ ನೀರನ್ನು ಮಿತವಾಗಿ ಬಳಸಲೆಂದು ಮೀಟರ್ ಅಳವಡಿಸಬೇಕಾಗಿದೆ ಎಂದರು.
ನೋಡಲ್ ಅಧಿಕಾರಿ ವಿಶಾಲಾಕ್ಷಿ ಅವರ ಮುಂದಾಳತ್ವದಲ್ಲಿ ನಡೆದ, ಸಭೆಯ ಅಧ್ಯಕ್ಷತೆಯನ್ನು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಅವರು ಮಾತನಾಡಿ ಪ್ರತಿಯೋಬ್ಬ ಮನುಷ್ಯನಿಗೂ ಕುಡಿಯುವ ನೀರಿನ ಅವಶ್ಯ ಇರುವುದರಿಂದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸರಕಾರದ ಯೋಜನೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಲಾಗಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿಯ ರವಿ ತಮ್ಮಯ್ಯ, ಬೇಟೋಳಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂತಿ ಹಾಗೂ ಎಲ್ಲಾ ಸದಸ್ಯರುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.