*ಗೋಣಿಕೊಪ್ಪ, ಜೂ. ೨೯: ವಾಲ್ಮಿಕಿ ನಿಗಮ ವತಿಯಿಂದ ಪರಿಶಿಷ್ಟ ವರ್ಗ ಫಲಾನುಭವಿಗಳಿಗೆ ಕುರಿ ಹಾಗೂ ಮೇವುಗಳನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯ್ದ ೨೬ ಫಲಾನುಭವಿಗಳಿಗೆ ತಲಾ ೪ ಕುರಿಗಳು ಮತ್ತು ೫೦ ಕೆ.ಜಿ.ಯ ಮೇವುಗಳನ್ನು ನೀಡಲಾಯಿತು.
ಪರಿಶಿಷ್ಟ ವರ್ಗದವರು ಆರ್ಥಿಕವಾಗಿ ಬಲಾಢ್ಯರಾಗಲು ಹೈನುಗಾರಿಕೆಯಂತಹ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ನಿಗಮದ ವತಿಯಿಂದ ಕುರಿ ಸಾಕಾಣೆಗೆ ಅನುಕೂಲ ಕಲ್ಪಿಸಲಾಗಿದೆ. ಸರಿಯಾದ ಕ್ರಮದಲ್ಲಿ ಕುರಿ ಸಾಕುವ ಮೂಲಕ ಆರ್ಥಿಕ ಸಂಕಷ್ಟದಿAದ ಪಾರಾಗಬಹುದಾಗಿದೆ. ಕುರಿಗಳಿಗೆ ವಿಮೆ ಸೌಲಭ್ಯವಿರುವುದರಿಂದ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರು ಹೇಳಿದರು.
ವಾಲ್ಮೀಕಿ ನಿಗಮದ ಜಿಲ್ಲಾ ಅಧಿಕಾರಿ ಚಂದ್ರಶೇಖರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಮಹಿಳಾ ಮೋರ್ಚ ತಾಲೂಕು ಅಧ್ಯಕ್ಷೆ ಕವಿತಾ ಬೋಜಪ್ಪ ಮತ್ತು ಫಲಾನುಭವಿಗಳು ಇದ್ದರು.