ಮಡಿಕೇರಿ, ಜೂ. ೩೦: ಪ್ರಾರಂಭಿಕ ಹಂತದಲ್ಲಿ ಕ್ಷೀಣಗೊಂಡAತಿದ್ದ ಮುಂಗಾರು ಮಳೆ ಇದೀಗ ತೀವ್ರತೆ ಪಡೆಯುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ನಿನ್ನೆಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ನಿರಂತರ ಮಳೆಯಾಗುತ್ತಿದೆ.ಈಗಾಗಲೇ ಜೂನ್ ತಿಂಗಳು ಮುಕ್ತಾಯಗೊಂಡಿದ್ದು, ಇದೀಗ ಜುಲೈ ತಿಂಗಳು ಆರಂಭಗೊಳ್ಳುತ್ತಿರುವAತೆ ಜಿಲ್ಲೆಯಲ್ಲಿ ನೈಜ ಮುಂಗಾರಿನ ಸನ್ನಿವೇಶ ಕಾಣುವಂತಾಗಿದೆ. ಕಳೆದ ರಾತ್ರಿಯಿಂದ ಬಹುತೇಕ ಜಿಲ್ಲೆಯ ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ದಿಢೀರನೆ ವಾತಾವರಣದಲ್ಲಿ ಬದಲಾವಣೆ ಕಂಡುಬAದಿದ್ದು, ಜಲಾನಯನ ಪ್ರದೇಶಗಳಲ್ಲಿ ಮೆಲ್ಲ ಮೆಲ್ಲನೆ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಆಶಾದಾಯಕ ಮಳೆಯಿಂದಾಗಿ ರೈತರೂ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೋರುತ್ತಿದ್ದಾರೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಸೇರಿದಂತೆ ವಿವಿಧ ನದಿ - ತೊರೆಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ಕಂಡು ಬಂದಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯ ರಭಸ ಹೆಚ್ಚಳವಾಗುತ್ತಿರುವ ಕುರಿತು ವರದಿಯಾಗಿದೆ. ಮಳೆ - ಚಳಿಯಿಂದಾಗಿ ಜನಜೀವನದಲ್ಲೂ ಬದಲಾವಣೆ ಕಂಡುಬರುತ್ತಿದ್ದು, ಜಿಲ್ಲೆಯ ಜನರು ಮಳೆಗಾಲಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.
ವಿವಿಧೆಡೆಗಳ ಮಾಹಿತಿ
ಮಳೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಲವೆಡೆ ಅಪಾಯದ ಮುನ್ಸೂಚನೆಗಳೂ ಎದುರಾಗುತ್ತಿವೆ. ಆಯಕಟ್ಟಿನ ಪ್ರದೇಶದಲ್ಲಿ ಅಲ್ಲಲ್ಲಿ ಬರೆ ಜರಿತವಾಗುವ ಅಪಾಯ ಕಂಡು ಬಂದಿದೆ.
ತಲಕಾವೇರಿಗೆ ೩೦ ಇಂಚು ಮಳೆ ಕಡಿಮೆ
ಭಾಗಮಂಡಲ: ಬುಧವಾರದಿಂದ ಮಳೆ ಹೆಚ್ಚಾಗಿದ್ದು, ಭಾಗಮಂಡಲ ವ್ಯಾಪ್ತಿಯ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಲ್ಲಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿವೆ. ಜಲಮೂಲಗಳಲ್ಲಿ ನೀರು ಆಗಿಲ್ಲ. ಕೆಲವೆಡೆ ರೈತರು ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಇಂದು ಬಿರುಸುಗೊಂಡ ಮಳೆಯಿಂದಾಗಿ ನದಿ ತೆÆರೆ ತೋಡುಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ. ತ್ರಿವೇಣಿ ಸಂಗಮದ ಅಶ್ವತ್ಥಕಟ್ಟೆಯವರೆಗೆ ನೀರು ಹರಿಯುತ್ತಿದೆ.
ಆದರೆ ಈ ವರ್ಷ ಭಾಗಮಂಡಲ - ನಾಪೋಕ್ಲು ರಸ್ತೆಯಲ್ಲಿ ಮೇಲ್ಸೇತುವೆಗಾಗಿ ರಚಿಸಲಾಗಿದ್ದ ಭೀಮುಗಳಿದ್ದು ನೀರಿನ ಪ್ರಮಾಣ ಹೆಚ್ಚಾದಲ್ಲಿ ಸ್ಥಳೀಯ ಅಂಗಡಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ನಿನ್ನೆ ದಿನ ತಲಕಾವೇರಿಗೆ ೧.೭೨ ಇಂಚು ಮಳೆ ದಾಖಲಾಗಿದ್ದು, ಈ ವರ್ಷ ತಲಕಾವೇರಿಗೆ ಒಟ್ಟು ೪೨.೨ ಇಂಚು ಮಳೆ ದಾಖಲಾಗಿದೆ.(ಮೊದಲ ಪುಟದಿಂದ) ಕಳೆದ ವರ್ಷ ಇದೇ ಅವಧಿಗೆ ೭೫.೨೩ ಇಂಚು ಮಳೆ ದಾಖಲಾಗಿದ್ದು ಈ ವರ್ಷ ಕಳೆದ ವರ್ಷಕ್ಕಿಂತ ೩೦ ಇಂಚು ಮಳೆ ಕಡಿಮೆ ಆಗಿದೆ. ಇದರಿಂದಾಗಿ ಕೆಲವು ದಿನ ತಡವಾಗಿ ರೈತರು ಬಿತ್ತನೆ ಮಾಡಿದ್ದಾರೆ. ಭಾಗಮಂಡಲ ತಣ್ಣಿಮಾನಿ ತಾವೂರು ವ್ಯಾಪ್ತಿಯಲ್ಲಿ ಭತ್ತದ ಬಿತ್ತನೆ ಆಗಿದೆ. ಭಾಗಮಂಡಲಕ್ಕೆ ಈ ವರ್ಷ ೪೪ ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೮೦.೩ ಇಂಚು ಮಳೆಯಾಗಿತ್ತು. ಕಳೆದ ವರ್ಷಕ್ಕಿಂತ ಸುಮಾರು ೪೦ ಇಂಚು ಮಳೆ ಕಡಿಮೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿರುವುದು ಕಂಡುಬAತು.
ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಪಂಚಾಯಿತಿ ವತಿಯಿಂದ ಮುಖ್ಯರಸ್ತೆಯ ಚರಂಡಿ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ.ಸೋಮವಾರಪೇಟೆ : ಈ ತಿಂಗಳ ಆರಂಭದಿAದಲೂ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ಮಳೆ ಇಂದು ಬೆಳಗ್ಗಿನಿಂದಲೇ ಬಿರುಸುಗೊಂಡಿದ್ದು, ಮಳೆಗಾಲದ ವಾತಾವರಣವನ್ನು ಸೃಷ್ಟಿಸಿದೆ. ಬೆಳಗ್ಗಿನಿಂದ ಬಿಟ್ಟೂ ಬಿಡದಂತೆ ಮಳೆ ಸುರಿಯುತ್ತಿದ್ದು, ಪ್ರಸಕ್ತ ವರ್ಷದ ಮಳೆಗಾಲ ಅಧಿಕೃತವಾಗಿ ಆರಂಭಗೊಳ್ಳುತ್ತಿರುವ ಮುನ್ಸೂಚನೆ ನೀಡಿದೆ. ನಿನ್ನೆ ದಿನ ಬಿಸಿಲಿನ ವಾತಾವರಣದ ನಡುವೆಯೂ ಕೆಲವೊಮ್ಮೆ ಮಳೆ ಸುರಿಯುತ್ತಿತ್ತು. ಇಂದು ಇಡೀ ವಾತಾವರಣ ಸಂಪೂರ್ಣ ಬದಲಾಗಿದೆ. ಗಾಳಿಯ ಆರ್ಭಟ ಇಲ್ಲದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಸೂರ್ಯರಶ್ಮಿ ಮಾಯವಾಗಿದೆ.
ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಚುರುಕುಗೊಂಡಿದ್ದು, ಗದ್ದೆ ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ. ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಸಣ್ಣಪುಟ್ಟ ನದಿತೊರೆ, ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಸಣ್ಣ ತೊರೆಗಳು, ಹೊಳೆಗಳಲ್ಲಿ ನೀರು ಹರಿಯಲಾರಂಭಿಸಿದ್ದು, ಕೃಷಿಕರಿಗೆ ಸದ್ಯದ ಮಳೆ ಹರ್ಷ ತಂದಿದೆ.
ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ, ಹರಗ, ಕುಂದಳ್ಳಿ, ಜಕ್ಕನಳ್ಳಿ, ಕುಡಿಗಾಣ, ತಡ್ಡಿಕೊಪ್ಪ, ಮಲ್ಲಳ್ಳಿ, ಬೆಂಕಳ್ಳಿ, ಬೀಕಳ್ಳಿ, ಕೊತ್ನಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ, ಹರಗ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಗಾಳಿಯ ರಭಸವಿಲ್ಲದೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಅನಾಹುತಗಳು ಎದುರಾಗಿಲ್ಲ. ಆರಂಭದಲ್ಲಿ ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿದ್ದರೆ ಹಲವಷ್ಟು ಮರಗಳು ಬಿದ್ದು ಹಾನಿ ಸಂಭವಿಸುತಿತ್ತು ಎಂದು ಹರಗ ಗ್ರಾಮದ ಕೃಷಿಕ ಶರಣ್ ಅಭಿಪ್ರಾಯಿಸಿದ್ದಾರೆ. ಗದ್ದೆಗಳಲ್ಲಿ ಉಳುಮೆ ಕಾರ್ಯ, ಸಸಿಮಡಿ ತಯಾರಿ ಆರಂಭಗೊAಡಿದ್ದು, ಗದ್ದೆ ಕೃಷಿಗೆ ಈ ಮಳೆ ಅನುಕೂಲಕರವಾಗಿದೆ ಎಂದು ಶರಣ್ ತಿಳಿಸಿದ್ದಾರೆ.
ಇನ್ನು ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲೂ ಎಡಬಿಡದೇ ಮಳೆ ಸುರಿಯುತ್ತಿದೆ. ಐಗೂರು, ಮಾದಾಪುರ, ಗೋಣಿಮರೂರು, ಗೌಡಳ್ಳಿ ಭಾಗದಲ್ಲಿ ಮಳೆಯ ತೀವ್ರತೆ ಕೊಂಚ ಕಡಿಮೆಯಿದೆ. ಕಳೆದ ೧೫ ದಿನಗಳಿಂದ ಕೆಲವೊಮ್ಮೆ ಮಾತ್ರ ಸುರಿಯುತ್ತಿದ್ದ ಮಳೆ ಇಂದು ಎಡಬಿಡದೇ ಆರಂಭಗೊAಡಿದ್ದು, ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅರೋಗ್ಯವಾಗಿ ಪರಿಣಮಿಸುತ್ತಿವೆ. ರಸ್ತೆಯಲ್ಲಿನ ಗುಂಡಿಗಳಲ್ಲಿ ಕೆಸರಿನ ನೀರು ಸಂಗ್ರಹವಾಗುತ್ತಿವೆ. ಒಟ್ಟಾರೆ ಈ ವರ್ಷದ ಮಳೆಗಾಲ ಅಧಿಕೃತವಾಗಿ ಆರಂಭವಾಗಿರುವ ಮುನ್ಸೂಚನೆಯನ್ನು ನೀಡಿದೆ.