ವೀರಾಜಪೇಟೆ, ಜೂ. ೨೯: ರಾಜ್ಯ ಸರ್ಕಾರಿ ನೌಕರರ ವೀರಾಜಪೇಟೆ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆ ಜುಲೈ ೨ ರಂದು ಅಪರಾಹ್ನ ೧ ಗಂಟೆಗೆ ವೀರಾಜಪೇಟೆ ಗಾಂಧಿ ನಗರದಲ್ಲಿರುವ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಗುರುರಾಜ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ವೀರಾಜಪೇಟೆ ಪ್ರೆಸ್ ಕ್ಲಬ್ನಲ್ಲಿ ಕರೆದಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಮಹಾಸಭೆಗೆ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮಹಾಸಭೆಯಲ್ಲಿ ವೀರಾಜಪೇಟೆ ತಾಲೂಕು ಶಾಖೆಯ ಕುಂದು ಕೊರತೆಗಳನ್ನು ಚರ್ಚಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಈ. ಸುರೇಂದ್ರ, ಕಾರ್ಯದರ್ಶಿ ಬಿ.ಟಿ. ದೇವರಾಜ್, ಖಜಾಂಚಿ ಎ.ಬಿ. ಲಲಿತಾ, ಸಂಘಟನಾ ಕಾರ್ಯದರ್ಶಿ ಹೆಚ್.ಬಿ. ಅಶ್ವಿನ್ ಕುಮಾರ್, ನಿರ್ದೇಶಕರಾದ ಕೆ.ಎಂ. ಸೋಮಣ್ಣ, ಎ.ವಿ. ಮಂಜುನಾಥ್, ಎಂ.ಎಲ್. ಹರೀಶ್ ಉಪಸ್ಥಿತರಿದ್ದರು.