ವೀರಾಜಪೇಟೆ, ಜೂ. ೨೯: ಪಟ್ಟಣ ಪಂಚಾಯಿತಿ ಅಭಿಯಂತರರ ಗೈರು ಹಾಜರಿಯಿಂದಾಗಿ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ನಡೆದ ವಿಶೇಷ ಸಭೆಯನ್ನು ಮುಂದೂಡಲಾಯಿತು.
ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ ೭೧ ಲಕ್ಷ ಅನುದಾನದಲ್ಲಿ ೧೮ ವಾರ್ಡ್ಗಳಿಗೆ ಕ್ರೀಯಾಯೋಜನೆ ತಯಾರಿಸಿರುವ ಪತ್ರವನ್ನು ಮುಖ್ಯಾಧಿಕಾರಿ ಚಂದ್ರಕುಮಾರ್ ಎಲ್ಲಾ ಸದಸ್ಯರಿಗೆ ನೀಡಿ ಚರ್ಚೆಗೆ ಆಹ್ವಾನಿಸಿದರು.
ಸದಸ್ಯ ಮತೀನ್ ಮಾತನಾಡಿ, ಅಭಿವೃದ್ಧಿ ಕಾವiಗಾರಿಗಳ ಸಭೆಗೆ ಅಭಿಯಂತರರ ಉಪಸ್ಥಿತಿ ಬೇಕು. ತಾಂತ್ರಿಕವಾಗಿ ಯಾರ ಬಳಿ ನಾವು ಚರ್ಚೆ ನಡೆಸುವುದು ನಾವು ಕೇಳುವ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಯಾವ ಸದಸ್ಯರ ಗಮನಕ್ಕೆ ತಾರದೆ ಕ್ರಿಯಾಯೋಜನೆ ನಡೆಸಲಾಗಿದೆ. ತನ್ನ ವಾರ್ಡ್ನಲ್ಲಿ ಹಲವಾರು ಸಮಸ್ಯೆ ಗಳಿದ್ದರು ಕ್ರಿಯಾ ಯೋಜನೆಯಲ್ಲಿ ಸೇರಿಸಿಲ್ಲ ಎಂದು ಸಭೆಗೆ ತಿಳಿಸಿದರು.
ಪಕ್ಷೇತರ ಸದಸ್ಯೆ ದೇಚಮ್ಮ ಕಾಳಪ್ಪ ಮಾತನಾಡಿ, ಮೊಗರಗಲ್ಲಿ ಮತ್ತು ನೆಹರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ವಾರಕ್ಕೆ ಒಂದು ಬಾರಿ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ. ಅಕ್ಕಪಕ್ಕದಲ್ಲಿಯೇ ಒಂದು ಬೋರ್ವೆಲ್ ಕೊರೆಸಿ ನೀರು ನೀಡಬಹುದು ಎಂದು ಸಭೆಗೆ ತಿಳಿಸಿದಾಗ ಮುಖ್ಯಾಧಿಕಾರಿ ಚಂದ್ರಕುಮಾರ್ ಭೂವಿಜ್ಞಾನಿಗಳನ್ನು ಕರೆಸಿ ಜಾಗ ಗುರುತು ಮಾಡಿಸುವುದಾಗಿ ತಿಳಿಸಿದರು.
ಇವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಅಭಿಯಂತರ ಹೇಮಕುಮಾರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಗೆ ತೆರಳಿದ್ದಾರೆ. ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಎಂದು ಹೇಳಿದಾಗ ಬಹುತೇಕ ಸದಸ್ಯರು ಸಭೆ ನಡೆಸಲು ಒಪ್ಪಿಗೆ ಸೂಚಿಸದ ಕಾರಣ ಸಭೆಯನ್ನು ಮುಂದೂಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಮಂಡೇಪAಡ ವಿನಾಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.