*ಗೋಣಿಕೊಪ್ಪ, ಜೂ. ೨೯: ವಿವಿಧ ಜಾತಿಯ ೨೦೦೧ ಹಣ್ಣಿನ ಗಿಡಗಳ ನಾಟಿ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆಸಲಾಯಿತು.

ಬಾಲೆಂಬಿ ಚೆಂಬುವಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವೀರಾಜಪೇಟೆ, ಮಡಿಕೇರಿ ತಾಲೂಕು ಮತ್ತು ಸಂಪಾಜೆ ವಲಯ ಅರಣ್ಯ ಇಲಾಖೆ ಆಯೋಜನೆಯಲ್ಲಿ ರಸ್ತೆಯ ಬದಿಗಳಲ್ಲಿ ಗಿಡ ನಾಟಿಯನ್ನು ಮಾಡಲಾಯಿತು.

ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕಿ ಲೀಲಾವತಿ ಚಾಲನೆ ನೀಡಿದರು.

ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಟ ೫ ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ದಶಲಕ್ಷ ಗಿಡಗಳನ್ನು ಅರಣ್ಯ ಸಚಿವರ ಸಮ್ಮುಖದಲ್ಲಿ ನೆಡಲು ಚಾಲನೆ ನೀಡಲಾಗಿದೆ ಎಂದು ಹೇಳಿದರು.

ವಲಯ ಅರಣ್ಯಾಧಿಕಾರಿ ಮಧುಸೂದನ್, ಸಾರ್ವಜನಿಕರು ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕೆಂದು ಮನವಿ ಮಾಡಿದರು.

ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎ. ಕುಸುಮಾ, ಉಪಾಧ್ಯಕ್ಷೆ ಶಶಿಕಲಾ, ಸಂಪಾಜೆ ಕಂದಾಯಾ ಧಿಕಾರಿ ವೆಂಕಟೇಶ್, ವೀರಾಜಪೇಟೆ, ಮಡಿಕೇರಿ ತಾಲೂಕಿನ ಯೋಜನಾಧಿ ಕಾರಿ ದಿನೇಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯಯ, ಚೆಂಬು ಗ್ರಾ.ಪಂ. ಪಿ.ಡಿ.ಓ ಕುಮಾರ್, ಅರಣ್ಯ ಪಾಲಕ ಕಾರ್ತಿಕ್, ಸಂಪಾಜೆ ಅರಣ್ಯಪಾಲಕ ಚಂದ್ರಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಧವ ಪೊಯ್ಯೆಮಜಲು, ಗ್ರಾ.ಪಂ. ಸದಸ್ಯರುಗಳಾದ ವಸಂತಕುಮಾರ್, ರಮೇಶ್ ಹುಲ್ಲುಬೆಂಕಿ, ಗಿರೀಶ್ ಹೊಸೂರು, ಮಾಜಿ ಸದಸ್ಯರಾದ ಸುಮಿತ್ರಾ, ಶ್ರೀನಿವಾಸ್, ರಮೇಶ್ ಕುಮಾರ್ ಕೆ.ಜಿ., ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಅಧ್ಯಕ್ಷ ಲಿಂಗಪ್ಪ, ಚೆಂಬು ಒಕ್ಕೂಟದ ಅಧ್ಯಕ್ಷ ಕೃಷ್ಣವೇಣಿ, ಜಯಶ್ರೀ, ರಮೇಶ್ ಕುಮಾರ್ ಕೆ.ಜಿ., ಕೃಷಿ-ಮೇಲ್ವಿಚಾರಕ ರಾಮ್‌ಕುಮಾರ್ ಹಾಜರಿದ್ದರು.