ಸಿದ್ದಾಪುರ, ಜೂ.೨೯: ರಾಜಸ್ತಾನ್‌ನಲ್ಲಿ ನಡೆದ ಹಿಂದೂ ಕಾರ್ಯಕರ್ತ ಕನ್ಹಯ್ಯ ಬರ್ಬರ ಹತ್ಯೆ ಹಾಗೂ ಪ್ರಧಾನಿ ಮೋದಿಯವರಿಗೆ ಕೊಲೆ ಬೆದರಿಕೆ ಖಂಡಿಸಿ ನೆಲ್ಲಿಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದಿAದ ಪ್ರತಿಭಟನೆ ನಡೆಯಿತು. ಪಕ್ಷದ ಶಕ್ತಿ ಕೇಂದ್ರ ಪ್ರಮುಖ್ ಬೆಳ್ಯಪ್ಪ, ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಜಿಲ್ಲಾ ಸಮಿತಿ ಸದಸ್ಯ ಶರಣ್ ಪ್ರಕಾಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಯುವ ಮೋರ್ಚಾ ಶಕ್ತಿ ಕೇಂದ್ರ ಅಧ್ಯಕ್ಷ ಸಚಿನ್, ಸತೀಶ್ ಕಳತಿಲ್, ಪ್ರಮೋದ್, ಚಂದ್ರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.