ಸುಂಟಿಕೊಪ್ಪ, ಜೂ. ೩೦: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಯುವ ನಿಯೋಗ ಹಾಗೂ ವೈಟ್ ಫೆದರ್ ಟ್ರಸ್ಟ್ ವತಿಯಿಂದ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಯುವ ನಿಯೋಗದ ಸಂಸ್ಥಾಪಕ ಎಸ್.ಎಂ. ಕಿರಣ್ ‘ಜವಾಬ್ದಾರಿಯುತ ಸಮಾಜದೆಡೆಗೆ ವಿದ್ಯಾರ್ಥಿ ಸಮುದಾಯದ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಇಂದಿನ ಸಾಮಾಜಿಕ ಅಗತ್ಯಗಳಿಗೆ ಶೀಘ್ರದಲ್ಲಿ ಸ್ಪಂದಿಸುವAತಹ ನಾಯಕತ್ವ ಗುಣ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರಬೇಕೆಂದರು.

ಸ್ವಾತAತ್ರö್ಯ ಹೋರಾಟಗಾರರ ಕಣ್ಣೀರು, ಬೆವರು, ರಕ್ತ ನಮ್ಮ ದೇಶದ ಮಣ್ಣಿಗೆ ಹೊಸ ಶಕ್ತಿಯನ್ನು ತುಂಬಿದೆ. ಈ ಶಕ್ತಿಯನ್ನು ಪಡೆದಿರುವ ನಾವು ಸಮಾಜದ ಒಳಿತಿಗಾಗಿ ಬದುಕಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ದೇಶ ಪ್ರಜೆಗಳು. ಚಾರಿತ್ರö್ಯವಂತ ವಿದ್ಯಾರ್ಥಿ ಸಮುದಾಯದ ಅವಶ್ಯಕತೆ ದೇಶಕ್ಕೆ ಇಂದು ತುರ್ತು ಅಗತ್ಯವಾಗಿದೆ.

ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸೂಕ್ತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಯುವ ಕೈಪಿಡಿ ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭ ಸ್ವಸ್ಥ ಶಾಲೆಯ ಸಿಬಿಆರ್ ಮುರುಗೇಶ್, ಉಪನ್ಯಸಕರಾದ ಎಸ್. ಈಶ, ಫಿಲಿಪ್ ವಾಸ್, ಕೆ.ಸಿ. ಕವಿತಾ, ಪದ್ಮಾವತಿ ಕವಿತಾಭಕ್ತ್, ಜಯಶ್ರೀ, ಕೆ.ಎಸ್. ಮಂಜುಳ, ಸುಕನ್ಯಾ, ನದಿಯಾ ದೀಕ್ಷಿತಾ ಹಾಜರಿದ್ದರು.