ಮಡಿಕೇರಿ, ಜೂ. ೩೦: ಮೈಕ್ರೋ ಕ್ರೆಡಿಟ್ ಯೋಜನೆಯಡಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಜಾತಿಯ ಮಹಿಳಾ ಸ್ವ ಸಹಾಯ ಸಂಘದ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ರಚಿಸಿಕೊಂಡಿರುವ ಮಹಿಳಾ ಸ್ವ ಸಹಾಯ ಸಂಘದ ಕನಿಷ್ಟ ೧೦ ಮತ್ತು ೨೦ ಮಹಿಳಾ ಸದಸ್ಯರನ್ನು ಹೊಂದಿರುವ ಸಂಘಕ್ಕೆ ಗುಂಪು ಚಟುವಟಿಕೆಗಾಗಿ ಪ್ರತಿ ಸದಸ್ಯರಿಗೆ ಸಹಾಯಧನ ರೂ. ೧೫ ಸಾವಿರ ಮತ್ತು ಬೀಜಧನ ರೂ. ೧೦ ಸಾವಿರಗಳು ಆಗಿದೆ. ಹೀಗೆ ಪ್ರತಿ ಸದಸ್ಯರಿಗೆ ರೂ. ೨೫ ಸಾವಿರಗಳಂತೆ ಸದಸ್ಯತ್ವ ಹೊಂದಿರುವ ಸ್ವ-ಸಹಾಯ ಸಂಘಕ್ಕೆ ಆರ್ಥಿಕ ನೆರವನ್ನು ಒದಗಿಸಲಾಗುವುದು.

ಆಸಕ್ತ ಮಹಿಳಾ ಸ್ವ ಸಹಾಯ ಸಂಘದವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕಳೆದ ೧೫ ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ೧೮ ವರ್ಷದಿಂದ ೬೦ ವರ್ಷದೊಳಗಿನ ವಯೋಮಾನದವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶವಾದಲ್ಲಿ ರೂ. ೧,೫೦,೦೦೦ ಹಾಗೂ ನಗರ ಪ್ರದೇಶವಾದಲ್ಲಿ ರೂ. ೨ ಲಕ್ಷ ಮಿತಿಯೊಳಗಿರಬೇಕು. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.

ರಾಷ್ಟಿçÃಕೃತ, ಷೆಡ್ಯೂಲ್ಡ್, ಗ್ರಾಮೀಣ ಬ್ಯಾಂಕಿನಲ್ಲಿ ಸಂಘದ ಸದಸ್ಯರುಗಳು ಉಳಿತಾಯ ಖಾತೆಯನ್ನು ಹೊಂದಿರಬೇಕು. ಅರ್ಜಿದಾರರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಾಗಿರಬೇಕು ಅಥವಾ ಹೊಸದಾಗಿ ಸದಸ್ಯತ್ವವನ್ನು ಪಡೆಯಬೇಕು. ಸ್ವ-ಸಹಾಯ ಸಂಘವು ನೋಂದಣಿಯಾಗಿರಬೇಕು. ಅರ್ಜಿದಾರರು ಸ್ವ-ಸಹಾಯ ಸಂಘದ ಭಾಗವಾಗಿ ಇರುವ ಬಗ್ಗೆ ಮತ್ತು ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಾಪಾರ ವಹಿವಾಟನ್ನು ನಿರ್ವಹಿಸಿ ಆದಾಯವನ್ನು ಮಾತ್ರ ಪಡೆಯುವ ಬಗ್ಗೆ ಲಿಖಿತ ಒಪ್ಪಿಗೆ ನೀಡಬೇಕು. ನಿಗಮ ನೀಡುವ ಬೀಜಧನ ಸಾಲ ಮತ್ತು ಸಹಾಯಧನವನ್ನು ಮೂಲ ಬಂಡವಾಳವನ್ನಾಗಿ ಬಳಸಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಸೌಲಭ್ಯ ಪಡೆಯಲು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ/ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ, ಸಂಘದ ನೋಂದಣಿ ಪ್ರತಿ, ಸಂಘದ ಬ್ಯಾಂಕ್ ಪಾಸ್ ಪುಸ್ತಕ, ಸಂಘದ ಹಾಜರಾತಿ ವಹಿ ಮತ್ತು ಸಭೆಯ ನಡವಳಿ ಹಾಗೂ ಸಂಘದ ಸದಸ್ಯರ ಗ್ರೂಫ್ ಪೋಟೋ ದಾಖಲಾತಿಗಳನ್ನು ಸಲ್ಲಿಸಬೇಕು.

ಫಲಾಪೇಕ್ಷಿಗಳು ಅರ್ಜಿ ಮತ್ತು ದಾಖಲಾತಿಗಳನ್ನು ಜುಲೈ ೧೫ ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಡಿಕೇರಿ, ಕೊಡಗು ಜಿಲ್ಲೆ ೫೭೧೨೦೧ ದೂ. ೦೮೨೭೨-೨೨೮೮೫೭ ನ್ನು ಸಂಪರ್ಕಿಸಬಹುದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಹಕಾರ ಡಿಪ್ಲೋಮಾ ತರಬೇತಿಗೆ

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ವತಿಯಿಂದ ಡಿಪ್ಲೋಮಾ ತರಬೇತಿ ಅಧಿವೇಶನ ಜುಲೈ ೧ ರಿಂದ ಆರಂಭವಾಗಲಿದೆ. ತರಬೇತಿ ಪಡೆಯಲು ಇಚ್ಛಿಸುವವರು ಮಡಿಕೇರಿಯ ಮುತ್ತಪ್ಪ ದೇವಸ್ಥಾನದ ಬಳಿ ಇರುವ ಪ್ರಾಂಶುಪಾಲರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಪ್ರಾಂಶುಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್, ಮುತ್ತಪ್ಪ ದೇವಸ್ಥಾನ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸಬೇಕಿದೆ. ತರಬೇತಿ ಅವಧಿಯಲ್ಲಿ ಮಾಹೆಯಾನ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. ೪೦೦, ಪರಿಶಿಷ್ಟರಿಗೆ ರೂ. ೫೦೦ ರಂತೆ ಶಿಷ್ಯವೇತನ ನೀಡಲಾಗುವದು.

ದೂರಶಿಕ್ಷಣ ಡಿಸಿಎಂಗೆ ಪ್ರವೇಶಾತಿ

ಸಹಕಾರ ಸಂಘ, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳಿಗೆ ಇತ್ತೀಚಿನ ಸಹಕಾರ ನಿಯಮಗಳ ೧೭(೨)(ಎ) ಮತ್ತು (ಬಿ) ಪ್ರಕಾರ ಪದೋನ್ನತಿ ಹೊಂದಲು ದೂರಶಿಕ್ಷಣ ಡಿಸಿಎಂ ತರಬೇತಿ ಕಡ್ಡಾಯವಾಗಿರುತ್ತದೆ. ಆನ್‌ಲೈನ್ ಲಿಂಕ್ ತಿತಿತಿ.ಞsಛಿಜಿಜಛಿm.ಛಿo.iಟಿ ಬಳಸಿ ಪ್ರವೇಶಾತಿ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೪೪೯೨೪೫೦೨೪, ೮೭೬೨೧೧೦೯೫೨ ಸಂಪರ್ಕಿಸಬಹುದಾಗಿದೆ.

ಸಾಲ ಸೌಲಭ್ಯಕ್ಕೆ

ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ಮಹಿಳಾ ಅಭಿವೃದ್ಧಿ ನಿಗಮದ ಸಹಾಯಧನದೊಂದಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ರಾಷ್ಟಿçÃಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ, ಆಡು, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿಪಾರ್ಲರ್, ಟೈಲರಿಂಗ್, ವ್ಯಾಪಾರ, ಮತ್ತಿತರ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ವಾರ್ಷಿಕ ಆದಾಯ ರೂ. ೧.೫೦ ಲಕ್ಷ ಮೀರಬಾರದು. ಪರಿಶಿಷ್ಟ ಪಂಗಡ ಮಹಿಳೆಯರಿಗೆ ಕುಟುಂಬದ ವಾರ್ಷಿಕ ಆದಾಯ ರೂ. ೨ ಲಕ್ಷ ಮೀರಬಾರದು. ಹಾಗೆಯೇ ೧೮ ರಿಂದ ೫೫ ವರ್ಷ ವಯೋಮಿತಿಗೊಳಪಟ್ಟ ಅರ್ಹ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಮಹಿಳೆಯರಿಗೆ (ವಿಧವೆಯರು, ಸಂಕಷ್ಟಕ್ಕೊಳಗಾದ, ವಿಶೇಷಚೇತನ ಮಹಿಳೆಯರು ಹಾಗೂ ದೇವದಾಸಿ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು) ಅವಕಾಶವಿದೆ.

ಅರ್ಜಿ ಭರ್ತಿ ಮಾಡಿ ಕಚೇರಿಗೆ ಸಲ್ಲಿಸಲು ತಾ. ೧೫ ಕೊನೆಯ ದಿನವಾಗಿದೆ. ಅರ್ಜಿ ಫಾರಂಗೆ ಹಾಗೂ ಇತರೆ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೋಮವಾರಪೇಟೆ ಇಲ್ಲಿ ಕಚೇರಿ ವೇಳೆಯಲ್ಲಿ ದೂ. ೦೮೨೭೬-೨೮೨೨೮೧ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಜಿಮ್ ಸ್ಥಾಪನೆಗೆ ಸಹಾಯಧನಕ್ಕೆ

ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸರ್ಕಾರದ ಸಹಾಯಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಅರ್ಹ ಕ್ರೀಡಾಪಟುಗಳು ಕೊಡಗು ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿಯಲ್ಲಿ ಪಡೆದು ತಾ. ೧೫ ರೊಳಗಾಗಿ ಪ್ರಸ್ತಾವನೆಯನ್ನು ಈ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೮೯೮೫ ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.