ಮಡಿಕೇರಿ, ಜೂ. ೩೦: ಮಕ್ಕಂದೂರು ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ವಾತಾವರಣವಿತ್ತು. ಶಾಲೆಯ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಶಾಲಾ ಸಂಸತ್ತಿನ ರಚನೆಗಾಗಿ ಚುನಾವಣೆ ನಡೆಸಲಾಯಿತು.
ಚುನಾವಣಾ ಘೋಷಣೆಯೊಂದಿಗೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆ ನೈಜ ಸಾರ್ವತ್ರಿಕ ಚುನಾವಣೆಯಂತೆ ನಡೆಸಲಾಯಿತು. ಮತದಾರರ ಸಾಕ್ಷರತಾ ಸಂಘದಿAದ ಪರಿಷ್ಕೃತ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ, ಮತಯಂತ್ರ, ಚುನಾವಣಾ ಅಧಿಕಾರಿಗಳ ನೇಮಕ ಇವುಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗಿತ್ತು.
ಈ ವರ್ಷದ ಚುನಾವಣೆಯಲ್ಲಿ ಇದುವರೆಗೆ ಬಳಸುತ್ತಿದ್ದ ಮತಪೆಟ್ಟಿಗೆ, ಮತ ಚೀಟಿಗಳ ಬದಲು ಮೊಬೈಲ್ನಲ್ಲಿ ಮತಯಂತ್ರಗಳನ್ನು ಬಳಸಿ ಮಕ್ಕಳು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. ಒಂದು ಮೊಬೈಲನ್ನು ಇವಿಎಂ ಓಟಿಂಗ್ ಮಿಷಿನ್ ಬ್ಯಾಲೆಟ್ ಯೂನಿಟ್ ಆಗಿ, ಇನ್ನೊಂದು ಮೊಬೈಲನ್ನು ಕಂಟ್ರೋಲ್ ಯೂನಿಟ್ ಆಗಿ ಬಳಸಲಾಯಿತು. ನಂತರದಲ್ಲಿ ಮತ ಎಣಿಕೆಯೂ ಮತ ಎಣಿಕೆ ಯಂತ್ರದಲ್ಲೇ ನಡೆಯಿತು.
ಮತ ಎಣಿಕೆಯ ನಂತರ ಶಾಲಾ ನಾಯಕರಾಗಿ ಸಂಜಯ್ ಹಾಗೂ ನಾಯಕಿಯಾಗಿ ಶೃತಿ ಆಯ್ಕೆಯಾಗಿ ತಮ್ಮ ಸಚಿವರನ್ನು ನೇಮಕ ಮಾಡಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕ ಸುಕ್ರು ದೇವೂ ಗೌಡ ಅವರು ಕಾರ್ಯನಿರ್ವಹಿಸಿದರು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ನೋಡೆಲ್ ಅಧಿಕಾರಿ, ಆರ್. ಗೀತಾ ಸಂಚಾಲಕರಾಗಿ ಲೀಲಾವತಿ, ಪಿಆರ್ಓ ಆಗಿ ಅಪ್ರೊ ಆಗಿ, ವನಜಾಕ್ಷಿ ಮೈಕ್ರೋ ಅಬ್ಸರ್ವರ್ ಆಗಿ, ಪ್ರವೀಣ್ ಮತಗಟ್ಟೆ ರಕ್ಷಣಾಧಿಕಾರಿಯಾಗಿ, ರಾಘವೇಂದ್ರ ಶೆಟ್ಟಿ ಅವರು ಚುನಾವಣೆ ನಡೆಸಿಕೊಟ್ಟರು.
ಮಕ್ಕಂದೂರು ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಚುನಾವಣೆ ಭಾವಿ ಮತದಾರರು ಮತ್ತು ನಾಯಕರನ್ನು ತಯಾರು ಮಾಡುವ ನಿಟ್ಟಿನಲ್ಲಿತ್ತು.