ಪೊನ್ನಂಪೇಟೆ, ಜೂ. ೩೦: ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಿವೃತ್ತ ಸೈನಿಕರ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ೧೦೦ಕ್ಕೂ ಹೆಚ್ಚು ಮಾಜಿ ಸೈನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ಜಮೀನು ಸಂಬAಧ ಸಮರ್ಪಕ ದಾಖಲೆ ನೀಡಿದ ಬಳಿಕ, ನಿವೃತ್ತ ಸೈನಿಕರಿಗೆ ಜಾಗದ ಪಹಣಿ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದು ನಿವೃತ್ತ ಸೈನಿಕರಿಗೆ ಭರವಸೆ ನೀಡಿದರು. ತಹಶೀಲ್ದಾರ್ ಪ್ರಶಾಂತ್ ಕುಮಾರ್ ಮಾತನಾಡಿ, ಹಿಂದಿ ನಿಂದಲೂ ಕೃಷಿಗೆ ಬಳಸಿಕೊಂಡು ಸ್ವಾಧೀನದಲ್ಲಿರುವ ಗರಿಷ್ಠ ೫ ಎಕರೆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಡಲು ಇರುವ ಅವಕಾಶವನ್ನು ಅನುಷ್ಠಾನಗೊಳಿ ಸಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ನಿವೃತ್ತ ಸೈನಿಕರು ೫೦ ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಕೃಷಿ ಮಾಡುತ್ತಿದ್ದರೂ ಜಾಗದ ಪಹಣಿ ಲಭಿಸಿಲ್ಲ. ಇದರಿಂದ ಭವಿಷ್ಯದಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಮಾಜಿ ಸೈನಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ತೋರ-ಮಾಕುಟ್ಟ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಜಿಲ್ಲೆಯ ಹೊರಗಿನ ರಾಜಕಾರಣಿಗಳಿಗೆ ನೀಡಲಾಗುತ್ತಿದೆ. ಇದನ್ನು ದೇಶ ಸೇವೆ ಮಾಡಿದ ಸೈನಿಕರಿಗೆ ಗೌರವ ಯುತವಾಗಿ ನೀಡಲು ಮುಂದಾಗ ಬೇಕು ಎಂದು ಒತ್ತಾಯಿಸಿದರು.

ಹೊರಗಿನವರಿಗೆ ನೀಡುವ ಜಾಗವನ್ನು ಸೈನಿಕ ಕುಟುಂಬಕ್ಕೆ ನೀಡಲು ತಾತ್ಸಾರ ಯಾಕೆ?' ಎಂದು ಪ್ರಶ್ನಿಸಿದರು. ಪೌತಿಖಾತೆ ಪಹಣಿಯಲ್ಲಿ ಹೆಚ್ಚಿರುವುದರಿಂದ ಹೆಸರು ತೆಗೆಯಲು ತುರ್ತು ಕ್ರಮಕೈಗೊಳ್ಳಬೇಕು ಎಂದು ನಿವೃತ್ತ ಸೈನಿಕರು ಒತ್ತಾಯಿಸಿದರು. ಹಿಂದಿನಿAದಲೂ ನಮ್ಮ ಕುಟುಂಬ ಸ್ವಾಧೀನದಲ್ಲಿರುವ ಸಾಗುವಳಿ ಜಾಗ ನಮ್ಮ ಕುಟುಂಬದ ಯಾರ ಹೆಸರಿಗೂ ಬಂದಿಲ್ಲ ಎಂದು ಮಾಜಿ ಸೈನಿಕ ಚಂದ್ರಶೇಖರ್ ಗಮನ ಸೆಳೆದರು.

ಇದರ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಪ್ರಶಾಂತ್ ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಸೈನಿಕ ಕೋಲತಂಡ ಕುಟ್ಟಪ್ಪ, ಗಂಗಮ್ಮ ದಂಪತಿ, ಇನ್ನಿತರರು ಇದ್ದರು.