ಮಡಿಕೇರಿ, ಜೂ. ೩೦: ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಯು. ಪವಿತ್ರ ಹಾಗೂ ಕಾರ್ಯದರ್ಶಿಯಾಗಿ ಎಂ. ಆಶಾಲತ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವನಜ, ಖಜಾಂಚಿಯಾಗಿ ಬಿ.ಬಿ. ಜಯಂತಿ ರೈ, ಮೆನಕೆ ಕ್ಷೇಮ ನಿಧಿ ಕಾರ್ಯದರ್ಶಿಯಾಗಿ, ಉಪಕಾರ್ಯದರ್ಶಿಯಾಗಿ ಧರಣಿ, ಕ್ಷೇಮನಿಧಿ ಅಧ್ಯಕ್ಷೆಯಾಗಿ ಸುಮತಿ, ಸದಸ್ಯರುಗಳನ್ನಾಗಿ ಗೋಪಮ್ಮ, ಮಾಲಿನಿ, ಕುಸುಮ ಹಾಗೂ ಶಾಮಲ ಅವರನ್ನು ನೇಮಕ ಮಾಡಲಾಯಿತು.
ನಗರದ ಹಿಲ್ ರಸ್ತೆಯ ಅಂಗವಾಡಿ ಕೇಂದ್ರದಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.