ಪೊನ್ನಂಪೇಟೆ, ಜೂ. ೩೦: ಇಲ್ಲಿಗೆ ಸಮೀಪದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಾದ ಅರಮಣಮಾಡ ಮೋಹನ್ ಮತ್ತು ಕುಟುಂಬ ಕೊಡೆ, ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು. ಅದೇ ದಿನ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.

ಈ ಸಂದÀರ್ಭ ಮಂಡೆಚAಡ ಬೇಬಿಯವರು ತಮ್ಮ ಪತಿ ದಿ. ಮಂಡೆಚAಡ ಪೂಣಚ್ಚ ಅವರ ಜ್ಞಾಪಕಾರ್ಥವಾಗಿ ೫ ಸಾವಿರ ರೂಪಾಯಿ ದತ್ತಿನಿಧಿ, ನಿವೃತ್ತ ಶಿಕ್ಷಕಿ ಮತ್ರಂಡ ಹರಿಣಾಕ್ಷಿಯವರು ತಮ್ಮ ಪತಿ ದಿ. ಮತ್ರಂಡ ಅಪ್ಪಯ್ಯ ಅವರ ಜ್ಞಾಪಕಾರ್ಥ ೫ ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪನೆ ಮಾಡಿದರು. ಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಇ.ಎಸ್. ಸುಜಾತ, ಸಹ ಶಿಕ್ಷಕಿಯರಾದ ಕೆ.ಇ. ಸಪೂರ, ಎನ್.ಸಿ. ಅನಿತ ಕುಮಾರಿ, ಈಶ್ವರ ಸ್ವಸಹಾಯ ಸಂಘದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ, ಅರಮಣಮಾಡ ಪ್ರತಾಪ್, ಅಕ್ಷರ ದಾಸೋಹ ಸಿಬ್ಬಂದಿ ಹಾಜರಿದ್ದರು.