ಮಡಿಕೇರಿ, ಜೂ. ೨೯: ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮೊ ಕೋರ್ಸ್ ಕಲಿಕೆಗಾಗಿ ೪೪ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. ೨,೫೦೦ ವರೆಗೆ ಶಿಷ್ಯ ವೇತನ ನೀಡಲಾಗುವುದು ಹಾಗೂ ವಸತಿ ನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುವುದು.

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್ ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ೨೦೨೨ ರ ಜುಲೈ ೧ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ೧೫ ರಿಂದ ೨೩ರ ವಯೋಮಿತಿಯಲ್ಲಿರಬೇಕು ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ೧೫ ರಿಂದ ೨೫ರ ವಯೋಮಿತಿಯಲ್ಲಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೂಢೀಕೃತ ಅಂಕಗಳು ಮೆರಿಟ್ ಲೆಕ್ಕಚಾರಕ್ಕೆ ಆಧಾರವಾಗಿರುತ್ತದೆ.

ಡಿಪ್ಲೋಮಾ ಕೋರ್ಸಿಗಾಗಿ ಲಭ್ಯವಿರುವ ಸಂಸ್ಥೆಗಳ ವಿವರ: ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ (ಕರ್ನಾಟಕ) ೨೨ ಅಭ್ಯರ್ಥಿಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಸೇಲಂ (ತಮಿಳುನಾಡು) ೧೭ ಅಭ್ಯರ್ಥಿಗಳು, ಎಸ್‌ಪಿಕೆಎಂ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ವೆಂಕಟಗಿರಿ ೩ ಅಭ್ಯರ್ಥಿಗಳು (ನೆಲ್ಲೂರು ಜಿಲ್ಲೆ, ಆಂಧ್ರಪ್ರದೇಶ). ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು (ಕೇರಳ) ೨ ಅಭ್ಯರ್ಥಿಗಳು ಒಟ್ಟು ೪೪ ಅಭ್ಯರ್ಥಿಗಳು.

ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾಯ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸಿಲಿಂಗ್‌ಗೆ ಕರೆಯಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಮತ್ತು ಫಾರಂಗಳಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ ದೂ. ೦೮೩೭೨-೨೯೭೨೨೧, ಮೊ.ಸಂ. ೯೪೪೯೧೮೯೧೭೦ ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ(ಡಿಐಸಿ), ಕೊಹಿನೂರು ರಸ್ತೆ, ಮಡಿಕೇರಿ ದೂ. ೦೮೨೭೨-೨೨೦೩೬೫ ನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಆನ್‌ಲೈನ್ hಣಣಠಿs://ಞhಣigಚಿಜಚಿg.ಚಿಛಿ.iಟಿ/ಂಜmissioಟಿಈoಡಿm.ಠಿಜಜಿ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪೂರ್ಣವಾಗಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟ್ಟಗೇರಿ ೫೦೨೧೦೨ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ ೧೧ ಕೊನೆಯ ದಿನವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.