*ಗೋಣಿಕೊಪ್ಪ, ಜೂ. ೩೦: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ದೇಶದ ಕಟ್ಟುವ ಕಾಯಕದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಭವಿಷ್ಯವನ್ನು ಮಕ್ಕಳಲ್ಲಿ ರೂಪಿಸುವ ಕಾರ್ಯ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃತಗ್ಯಾತ ಟ್ರಸ್ಟ್ ವತಿಯಿಂದ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ೨೪೦ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಗಣಕಯಂತ್ರಗಳನ್ನು ಮತ್ತು ಪುಸ್ತಕ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ವ್ಯವಸ್ಥೆಗಳು ಅತ್ಯುತ್ತಮವಾಗಿರುತ್ತದೆ. ನುರಿತ ಶಿಕ್ಷಕರು ಬೋಧಿಸುವುದರಿಂದ ಶಿಕ್ಷಣದ ಗುಣಮಟ್ಟವು ಹೆಚ್ಚಿರುತ್ತದೆ ಎಂದು ಹೇಳಿದರು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಆತ್ಮಸ್ಥೆöÊರ್ಯದಿಂದ ಬದುಕುವ ಶಕ್ತಿಯನ್ನು ಹೊಂದಿರುತ್ತಾರೆ. ಬದುಕು ನಡೆಸಲು ಯಾವುದೇ ತೊಳಲಾಟಗಳಿಗೆ ಮತ್ತು ಒತ್ತಡಗಳಿಗೆ ಒಳಗಾಗುವುದಿಲ್ಲ ಎಂದರು.
ನAತರ ಗೋಣಿಕೊಪ್ಪ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಅವರನ್ನು ಮತ್ತು ಕುಟ್ಟ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಶಿಧರ್ ಅವರನ್ನು ಉತ್ತಮ ಸೇವೆಗಾಗಿ ಟ್ರಸ್ಟ್ ವತಿಯಿಂದ ಶಾಸಕರು ಸನ್ಮಾನಿಸಿದರು. ತದನಂತರ ಶಾಲೆಯ ಅಡುಗೆ ಕೊಠಡಿ, ಆಹಾರ ಗೋದಾಮುಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರತೀಶ್ ಗಣಪತಿ, ಉಪಾಧ್ಯಕ್ಷೆ ದಿವ್ಯಾ, ಸದಸ್ಯೆ ತೀತಿರ ತೀರ್ಥ ಮಂಜುನಾಥ, ಶಕ್ತಿಕೇಂದ್ರದ ಪ್ರಮುಖ ತೀತಿರ ಮಂಜುನಾಥ್, ಶಾಲಾ ಮುಖ್ಯೋಪಾಧ್ಯಾಯ ಶಶಿಧರ್, ಸಹ ಶಿಕ್ಷಕರುಗಳಾದ ಶಕುಂತಲ, ಸಜನಿ, ಲವಿನ್, ಸವಿತ ಕುಮಾರಿ, ಕೃತಗ್ಯಾತ ಟ್ರಸ್ಟ್ನ ಟ್ರಸ್ಟಿಗಳಾದ ಅರುಣ್ ದಿವಾಕರ್, ಮುರುಳಿಧರ್ ಪ್ರಮುಖರಾದ ಪೆಮ್ಮಾಣಮಾಡ ನವೀನ್, ಶಾಸಕ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.