ಕೂಡಿಗೆ, ಜೂ. ೨೯: ಕೂಡಿಗೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪೋಷಕರ ಸಭೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮೊದಲಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪನವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೋಷಕರ ಸಹಕಾರ ಪ್ರಮುಖವಾಗಿರುತ್ತದೆ. ಅಲ್ಲದೆ ಪೋಷಕರು ಕಾಲೇಜಿಗೆ ಬಂದು ತಮ್ಮ ಮಕ್ಕಳ ಕಲಿಕೆಯ ಮತ್ತು ಹಾಜರಾತಿ ಬಗ್ಗೆ ಮಾಹಿತಿ ಪಡೆಯಬೇಕೆಂದರು.
ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಸರಕಾರಿ ಕಾಲೇಜು ಅಭಿವೃದ್ಧಿಗೆ ಪೋಷಕರ ಮತ್ತು ದಾನಿಗಳ ಸಹಕಾರ ಮುಖ್ಯ ಎಂದರು. ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಂ.ಬಿ. ಮಹೇಶ್, ಜನಾರ್ಧನ್, ಹಿರಿಯ ಉಪನ್ಯಾಸಕರುಗಳಾದ ಕಾವೇರಮ್ಮ, ನಾಗಪ್ಪ, ರಮೇಶ್, ಹೇಮರಾಜ್, ಸೂಸಿ ತಂಗಚ್ಚನ್, ಪಾವನ, ಲಿವೇಟ್ಸ್, ಪಲ್ಲವಿ, ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.