ಕುಶಾಲನಗರ, ಜೂ. ೨೯: ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಅಂರ್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕರೆ ನೀಡಿದರು.
ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಮೃತ ಮಹೋತ್ಸವ ಅಂಗವಾಗಿ ಆರ್ಯವೈಶ್ಯ ಜನಾಂಗದ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ತಿಮ್ಮಯ್ಯ, ದೇಶದಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿರುವುದರಿಂದ ಅದರ ಸದುಪಯೋಗವನ್ನು ಯುವಕರು ಪಡೆಯುವಂತಾಗಬೇಕು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಎಲ್ಲಾ ರೀತಿಯಲ್ಲಿ ಪೋಷಕರು ಕೈಜೋಡಿಸಬೇಕು. ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುವಂತೆ ಕರೆ ನೀಡಿದರು.
ಆರ್ಯವೈಶ್ಯ ಜನಾಂಗದ ಕ್ರೀಡಾ ಸ್ಫೂರ್ತಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಸಿಂಗಲ್ಸ್ಗೆ ೨೯ ಆಟಗಾರರು ಮತ್ತು ಡಬ್ಬಲ್ಸ್ಗೆ ೩೨ ತಂಡಗಳು ಭಾಗವಹಿಸಿದ್ದವು. ನಾಗಮಂಗಲದ ಸೂರಜ್ ಅದೃಷ್ಟ ವ್ಯಕ್ತಿಯಾಗಿ ಲಾಟರಿ ಮೂಲಕ ಆಯ್ಕೆಯಾದರು.
ಬಹುಮಾನ ವಿಜೇತರ ವಿವರ
ಡಬಲ್ಸ್ನಲ್ಲಿ ಕುಶಾಲನಗರದ ಎ.ಎಸ್. ಕುಮಾರ್ ಮತ್ತು ಬೆಂಗಳೂರಿನ ದೀಪಕ್ ರಾಜ್ ವಿಜೇತರಾಗಿ ರೂ. ೧೦ ಸಾವಿರ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಹುಣಸೂರಿನ ಕಾರ್ತಿಕ್ ಮತ್ತು ಸಾಗರ್ ತಂಡ ದ್ವಿತೀಯ ಬಹುಮಾನ ಪಡೆದಿದ್ದು, ರೂ. ೫ ಸಾವಿರ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಮೂರನೇ ಬಹುಮಾನವನ್ನು ಕೊಳ್ಳೇಗಾಲದ ಕರಣ್ ಮತ್ತು ಸೂರ್ಯ ತಂಡ ಗೆದ್ದು ರೂ. ೩ ಸಾವಿರ ಮತ್ತು ಟ್ರೋಫಿ ಪಡೆದಿದ್ದಾರೆ.
ಸಿಂಗಲ್ಸ್ ವಿಜೇತರ ವಿವರ
ಬೆಂಗಳೂರಿನ ಶುಭಾಷ್ ಶ್ರೀನಾಥ್ ಪ್ರಥಮ, ದ್ವಿತೀಯ ಮೈಸೂರಿನ ಎಂ.ಕೆ. ಕಿರಣ್, ಮೂರನೇ ಸ್ಥಾನವನ್ನು ಅರಸೀಕೆರೆ ಸಮೀಪದ ಬಾಣಾವಾರದ ಅಭಿನಂದನ್ ಪಡೆದಿದ್ದಾರೆ. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಪಂದ್ಯಾವಳಿ ಆಯೋಜಕ ಎ.ಎಸ್. ಕುಮಾರ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ. ಪ್ರವೀಣ್, ಅಂಜನ್, ಗೌತಮ್ಮ, ಮತ್ತಿತರರು ಇದ್ದರು.