ಮಡಿಕೇರಿ, ಜೂ. ೨೮: ಇತ್ತೀಚೆಗೆ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ೧೦ನೇ ವರ್ಷದ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೧೦೮ ಶೂರ‍್ಸ್ ಭಾಗವಹಿಸಿದ್ದು, ಈ ಸ್ಪರ್ಧೆ ಯಲ್ಲಿ ಕೊಡಗಿನ ಗೋಣಿಕೊಪ್ಪದ ಕಾಲ್ಸ್ - ಎಎಸ್‌ಎಫ್‌ನಿಂದ ೯ ಏರ್ ರೈಫಲ್ ಶೂರ‍್ಸ್ ಭಾಗವಹಿಸಿದ್ದು, ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುವು ದರೊಂದಿಗೆ ೧೫ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯೂತ್ ವುಮೆನ್, ಸಬ್ ಯೂತ್ ವುಮೆನ್ ವಿಭಾಗದಲ್ಲಿ ಆಯಿರ ಬೋಪಣ್ಣ, ಬೆಳ್ಳಿಯ ಪದಕ, ಆಂಚಲ್ ಗಂಗ ಕಂಚು ಪದಕ ಪಡೆದಿದ್ದಾರೆ. ಜೂನಿಯರ್ ವಿಭಾಗ ಟೀಮ್ ಇವೆಂಟ್‌ನಲ್ಲಿ ಆಯಿರ ಬೋಪಣ್ಣ, ಆದ್ಯ ಚೋಂದಮ್ಮ, ವಿಹಾ ಪೊನ್ನಮ್ಮ ಭಾಗವಹಿಸಿ ಸುವರ್ಣ ಪದಕ ಪಡೆದುಕೊಂಡಿದ್ದಾರೆ. ಸಬ್ ಯೂತ್ ಮೆನ್ ಟೀಮ್ ವಿಭಾಗದಲ್ಲಿ ಗಿರಿವರ್ ಎಸ್. ದೇವಯ್ಯ, ಕ್ರಿಷ್ ಗಣಪತಿ ಕಂಚಿನ ಪದಕ ಪಡೆದಿದ್ದಾರೆ. ವಿದ್ಯಾಸಂಸ್ಥೆಯ ಆಯುಷ್ ಪೊನ್ನಮ್ಮ ಭಾಗವಹಿಸಿದ್ದರು.