ಕರಿಕೆ, ಜೂ. ೨೮: ಕಳೆದ ತಡ ರಾತ್ರಿ ಬೃಹತ್ ಬಂಡೆ ಕಲ್ಲೊಂದು ಉರುಳಿ ಮನೆ ಹಾಗೂ ಗೃಹಬಳಕೆ ವಸ್ತುಗಳಿಗೆ ಹಾನಿಯಾದ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ಕರಿಕೆ ಚೆತ್ತುಕಾಯ ಕುಂಡತಿಕಾನ ನಿವಾಸಿ ಜಾನಕಿ ಎಂಬವರ ಮನೆ ಮೇಲೆ ಹಿಂಭಾಗದ ಬೆಟ್ಟದಿಂದ ಕಲ್ಲು ಉರುಳಿದ ಪರಿಣಾಮ ಮೇಲ್ಚಾವಣಿ, ಗೋಡೆ, ಸೇರಿದಂತೆ ಮನೆಯೊಳಗಿನ ನಿತ್ಯ ಉಪಯೋಗಿಸುವ ವಸ್ತುಗಳು ಸಂಪೂರ್ಣ
(ಮೊದಲ ಪುಟದಿಂದ) ಹಾನಿಯಾಗಿದ್ದು, ಮನೆಯ ಹಿಂಭಾಗಕ್ಕೆ ಕಲ್ಲು ಬಿದ್ದಿದೆ. ಅದೃಷ್ಟವಶಾತ್ ಮನೆ ಮಂದಿ ಪ್ರಾಣಪಾಯದಿಂದ ಪಾರಾಗಿ ದ್ದಾರೆ. ಇನ್ನೂ ಎರಡು ಬಂಡೆಗಳು ಉರುಳುವ ಸ್ಥಿತಿಯಲ್ಲಿದ್ದು ಮನೆ ಮಂದಿ ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಭಾಗಮಂಡಲ ಕಂದಾಯ ನಿರೀಕ್ಷಕ ಸದಾಶಿವ, ಗ್ರಾಮ ಲೆಕ್ಕಿಗ ಜಟ್ಟಪ್ಪ ಹಾಗೂ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.