ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು
ಕೂಡಿಗೆ: ಕೂಡಿಗೆಯ ಸರಕಾರಿ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶದಲ್ಲಿ ಕಾಲೇಜಿನ ೨೫ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇದರಲ್ಲಿ ವಿಜ್ಞಾನ ವಿಭಾಗದಲ್ಲಿ ಆಸ್ಟನ್ ಗೊನ್ಸಾಲ್ವಸ್ (೫೮೬), ಕಲಾ ವಿಭಾಗದಲ್ಲಿ ಕೆ.ಎಸ್. ರಕ್ಷಿತ್ (೫೫೫) ವಾಣಿಜ್ಯ ವಿಭಾಗದಲ್ಲಿ ಕೆ.ಎಸ್. ಸಿಂಚನ (೫೪೨), ಕೆ.ಎಂ. ವಿಷ್ಣು (೫೪೨) ಅಂಕಗಳನ್ನು ಗಳಿಸಿದ್ದಾರೆ.
ಕಾಲೇಜಿನ ೧೬೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಇದರಲ್ಲಿ ೧೧೦ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಶನಿವಾರಸAತೆ ಕಾವೇರಿ, ಭಾರತಿ, ವಿಘ್ನೇಶ್ವರ ಕಾಲೇಜು
ಶನಿವಾರಸಂತೆ: ಪಟ್ಟಣದ ಕಾವೇರಿ ಕಾಲೇಜಿಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೨ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ೩೬ ವಿದ್ಯಾರ್ಥಿಗಳಲ್ಲಿ ೩೩ ಮಂದಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ಕೆ.ಸಿ. ಕೀರ್ತಿ ೫೩೩, ಹೆಚ್.ವಿ. ಕೀರ್ತನಾ ೫೩೦, ಬಿ.ಕೆ. ಕೀರ್ತನಾ ೫೨೩ ಅಂಕಗಳೊAದಿಗೆ ಕಾಲೇಜಿಗೆ ಪ್ರಥಮ ೩ ಸ್ಥಾನಗಳನ್ನು ಪಡೆದಿದ್ದಾರೆ.
ಶ್ರೀ ವಿಘ್ನೇಶ್ವರ ಬಾಲಿಕಾ ಪಿ.ಯು. ಕಾಲೇಜಿಗೆ ಶೇ. ೮೭ ಫಲಿತಾಂಶ ದೊರೆತಿದೆ. ೬೬ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ೬೧ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಎನ್.ಪಿ. ಕವನಾ ಶೇ. ೯೬, ಟಿ.ಎ. ಸುನೈನಾ ಶೇ. ೯೫.೧೩, ಸಿ.ಎಸ್. ಅನುಷಾ ಶೇ. ೯೪.೮೩ ಅಂಕಗಳನ್ನು ಗಳಿಸಿ ಕಾಲೇಜಿಗೆ ೩ ಸ್ಥಾನಗಳನ್ನು ಪಡೆದಿದ್ದಾರೆ.
ಭಾರತಿ ವಿದ್ಯಾಸಂಸ್ಥೆ ಪಿ.ಯು. ಕಾಲೇಜಿಗೆ ಶೇ. ೯೧ ಫಲಿತಾಂಶ ಲಭಿಸಿದೆ. ವಿದ್ಯಾರ್ಥಿಗಳಾದ ಎಸ್.ಜಿ. ಕಿರಣ್ ಶೇ. ೯೨, ವಿ.ಜೆ. ಸೌಂದರ್ಯ, ಶೇ. ೯೧ ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಹೊದವಾಡ ರಾಫೆಲ್ಸ್ ಇಂಟರ್ನ್ಯಾಷನಲ್ ಪಿ.ಯು. ಕಾಲೇಜು
ಮಡಿಕೇರಿ: ನಾಪೋಕ್ಲು ಸಮೀಪದ ಹೊದವಾಡ ರಾಫೆಲ್ಸ್ ಇಂಟರ್ನ್ಯಾಷನಲ್ ಪಿ.ಯು. ಕಾಲೇಜಿಗೆ ಶೇ. ೮೭ ರಷ್ಟು ಫಲಿತಾಂಶ ಲಭಿಸಿದೆ.
ಒಟ್ಟು ೩೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೪ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ೧೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಫಾತಿಮ ಮತ್ತು ಸುನೈನಾ ಪಿ.ಎನ್. ೫೬೨ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ವೇತ ಎ.ಯು. ೫೬೦ ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಫ್ರೀನಾ ಪಿ.ಹೆಚ್. ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು
ಸೋಮವಾರಪೇಟೆ: ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. ೭೨, ಕಲಾ ವಿಭಾಗದಲ್ಲಿ ಶೇ. ೫೫ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೫೫ ವಿದ್ಯಾರ್ಥಿಗಳ ಪೈಕಿ ೪೦ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಕಲಾ ವಿಭಾಗದಲ್ಲಿ ೨೭ ವಿದ್ಯಾರ್ಥಿಗಳ ಪೈಕಿ ೧೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಂತ ಜೋಸೆಫರ ಪದವಿಪೂರ್ವ ಕಾಲೇಜಿಗೆ ಶೇ. ೯೦ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೧೧೪ ವಿದ್ಯಾರ್ಥಿಗಳ ಪೈಕಿ ೧೦೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. ೯೪, ವಿಜ್ಞಾನ ವಿಭಾಗದಲ್ಲಿ ೩೯ ವಿದ್ಯಾರ್ಥಿಗಳ ಪೈಕಿ ೩೦ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. ೭೭ ರಷ್ಟು ಫಲಿತಾಂಶ ಪಡೆದಿದೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಮೌಲ್ಯ ಕೆ.ಯು. ೫೭೫ ಅಂಕ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ದೀಪಾಲಿ ೫೮೦ ಅಂಕ ಗಳಿಸಿದ್ದಾಳೆ.
ಬಿಟಿಸಿಜಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ೬ ವಿದ್ಯಾರ್ಥಿಗಳ ಪೈಕಿ ೨ ಮಂದಿ ಉತ್ತೀರ್ಣರಾಗುವ ಮೂಲಕ ಶೇ. ೩೩, ವಾಣಿಜ್ಯ ವಿಭಾಗದಲ್ಲಿ ೫೩ ವಿದ್ಯಾರ್ಥಿಗಳ ಪೈಕಿ ೩೭ ಮಂದಿ ಉತ್ತೀರ್ಣರಾಗುವ ಮೂಲಕ ಶೇ. ೭೦ ಫಲಿತಾಂಶ ಲಭಿಸಿದೆ.
ಮೊರಾರ್ಜಿ ದೇಸಾಯಿ ಪಿ.ಯು. ಕಾಲೇಜು
ಹೆಬ್ಬಾಲೆ: ಸಮೀಪದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿಜ್ಞಾನ ಪಿಯು ಕಾಲೇಜು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೭.೨೬ ಫಲಿತಾಂಶ ಗಳಿಸಿದೆ.
ಶಾಲೆಯ ಒಟ್ಟು ೭೩ ವಿದ್ಯಾರ್ಥಿಗಳ ಪೈಕಿ ೩೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೩೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿ ಕೆ.ಎಸ್. ಲೋಹಿತ್ ೫೮೧ ಅಂಕಗಳಿಸಿ ಶೇ. ೯೮ ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.