*ಗೋಣಿಕೊಪ್ಪ, ಜೂ. ೨೮: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜುಲೈ ೧ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಹೇರಲಾಗಿದ್ದು, ಈ ನಿಯಮ ಉಲ್ಲಂಘಿಸಿದರೆ ಪರಿಸರ ಕಾಯ್ದೆ ೧೯೮೬ ರಡಿಯಲ್ಲಿ ಉತ್ಪನ್ನಗಳನ್ನು ವಶಪಡಿಸಿಕೊಂಡು ವ್ಯಾಪಾರ ಮಳಿಗೆಗಳನ್ನು ಮುಚ್ಚುವ ಸೂಚನೆ ಹೊರಡಿಸಿದೆ.

ಗ್ರಾಮ ಪಂಚಾಯಿತಿ ಸಭಾಂಗಣ ದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅವರು ಪಟ್ಟಣದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಕ್ಕೆ ಜುಲೈ ಒಂದರಿAದ ಚಾಲನೆ ದೊರೆಯಲಿದೆ. ಇದರಂತೆ ಜುಲೈ ಒಂದರಿAದ ಯಾವ ರೀತಿಯ ಪ್ಲಾಸ್ಟಿಕ್ ನಿಷೇಧವಾಗಲಿದೆ ಎಂಬುದಾಗಿ ವರ್ತಕರು ಹಾಗೂ ಸಾರ್ವಜನಿಕರಿಗೆ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ.

ಪರಿಸರಕ್ಕೆ ಹಾನಿ ಉಂಟು ಮಾಡುವ ಇಯರ್ ಭಡ್ಸ್ಗಳು, ಬಲೂನ್‌ಗಳು, ಪ್ಲಾಸ್ಟಿಕ್‌ಗಳು ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಐಸ್‌ಕ್ರೀಮ್ ಸ್ಟಿಕ್‌ಗಳು, ಅಲಂಕಾರಿಕವಾಗಿ ಬಳಸುವ ಪ್ಲಾಸ್ಟಿಕ್ ಹೂ ಮತ್ತು ಕುಂಡಗಳು, ಥರ್ಮಕೋಲ್, ಪ್ಲಾಸ್ಟಿಕ್ ತಟ್ಟೆ ಲೋಟ, ಚಾಕು, ಟ್ರೇ, ಚಮಚ, ಸ್ವೀಟ್ ಬಾಕ್ಸ್, ಪ್ಯಾಕಿಂಗ್ ಫಿಲ್ಮ್, ಆಮಂತ್ರಣ ಪತ್ರ, ಸಿಗರೇಟ್ ಪ್ಯಾಕ್, ಸೇರಿದಂತೆ ೧೦೦ ಮೈಕ್ರಾನ್ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು ಸೇರಿದಂತೆ ಇನ್ನಿತರ ಪರಿಸರ ಮಾರಕ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸ ಲಾಗಿದೆ. ನಿಯಮ ಉಲ್ಲಂಘಿಸಿ ಉತ್ಪನ್ನಗಳ ಮಾರಾಟ ಮತ್ತು ಬಳಕೆಯಲ್ಲಿ ತೊಡಗಿಸಿಕೊಂಡರೆ ೫ ಸಾವಿರ ರೂಪಾಯಿ ದಂಡ ವಿಧಿಸಲಾ ಗುವುದು ಎಂದು ತಿಳಿಸಿದ್ದಾರೆ.

ಹೊರ ರಾಜ್ಯದಿಂದ ಬರುವ ಕಾರ್ಮಿಕರ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಪಂಚಾಯಿತಿ ವ್ಯಾಪ್ತಿಯ ತೋಟದ ಮಾಲೀಕರುಗಳು ತಮ್ಮ ಕಾರ್ಮಿಕರ ಗುರುತಿನ ಚೀಟಿಯ ದಾಖಲೆಗಳನ್ನು ಪಂಚಾಯಿತಿಗೆ ನೀಡುವಂತೆ ಸೂಚಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಂತೆ ಜಿಲ್ಲೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ್, ಒಡಿಸಾ ರಾಜ್ಯದಿಂದ ಕೆಲಸಗಳಿಗೆ ಕಾರ್ಮಿಕರಾಗಿ ಬರುತ್ತಿದ್ದಾರೆ. ಇಂತವರಿAದ ಕೆಲವು ಅಹಿತಕರ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆ ಅಥವಾ ಪಂಚಾಯಿತಿಗೆ ದಾಖಲೆಗಳನ್ನು ಒದಗಿಸುವಂತೆ ಮನವಿ ಮಾಡಿದರು.

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ನಡೆಸುತ್ತಿರುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಲು ಪಂಚಾಯಿತಿ ತೀರ್ಮಾನ ತೆಗೆದುಕೊಂಡಿದ್ದು, ಸಂಸ್ಥೆಗಳು ವಾಣಿಜ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಪಂಚಾಯಿತಿ ಅನುಮತಿಯನ್ನು ಪಡೆದುಕೊಳ್ಳತಕ್ಕದ್ದು ಎಂದು ತಿಳಿಸಿದ ಅವರು ವಸತಿ ಪ್ರದೇಶದಲ್ಲಿನ ಮನೆಯ ಮಾಲೀಕರು ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಗೆ ಬಾಡಿಗೆ ನೀಡದಂತೆ ಸೂಚಿಸಿದ್ದು, ಇಂತಹ ಚಟುವಟಿಕೆ ಕಂಡುಬAದಲ್ಲಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ನಗರದ ಬಸ್ ನಿಲ್ದಾಣದಲ್ಲಿರುವ ತಂಗುದಾಣದಲ್ಲಿ ಭಿಕ್ಷÄಕರು, ಮದÀ್ಯವ್ಯಸನಿಗಳು ಹೆಚ್ಚಾಗಿ ಇರುವುದರಿಂದ ಇಲ್ಲಿನ ಶುಚಿತ್ವ ಹಾಳಾಗುತ್ತಿದೆ. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲು ಸಾಧ್ಯವಾಗುತ್ತಿಲ್ಲ. ಭಿಕ್ಷಕರು ನಗರದಲ್ಲಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಗರದ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ತರಕಾರಿ, ಹಣ್ಣು ಹಂಪಲು, ಟೊಮೆಟೊ, ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ವ್ಯಾಪಾರದಿಂದ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಸ್ತೆ ಬದಿ ವ್ಯಾಪಾರವನ್ನು ನಿಷೇಧಿಸಲಾಗಿದೆ. ಪಂಚಾಯಿತಿಯ ನಿಯಮ ಮೀರಿ ಈ ರೀತಿ ವ್ಯಾಪಾರ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಇಂತಹ ವ್ಯಾಪಾರಸ್ಥರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಬೇಕೆಂದರು.

ಗ್ರಾಮ ಪಂಚಾಯಿತಿಯ ವಿವಿಧ ಸಾಧನೆಗಳಿಗೆ ಮೂರು ಪ್ರಶಸ್ತಿಗಳು ಕೊಡಗು ಜಿಲ್ಲಾ ಪಂಚಾಯಿತಿಯಿAದ ಲಭಿಸಿದೆ. ಉದ್ಯೋಗ ಖಾತ್ರಿಯಲ್ಲಿ ಹೆಚ್ಚಿನ ಕಾಮಗಾರಿಯನ್ನು ಪೂರೈಸಲಾಗಿದೆ ಎಂದು ಚೈತ್ರ ಮಾಹಿತಿ ಒದಗಿಸಿದರು.

ಸದಸ್ಯರುಗಳಾದ ಚೆಪುö್ಪಡೀರ ದ್ಯಾನ್‌ಸುಬ್ಬಯ್ಯ, ಮಂಜುಳಾ, ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ, ಪುಷ್ಪಾಮನೋಜ್, ಜಿ.ಕೆ. ಗೀತಾ, ಮನ್ನಕಮನೆ ಸೌಮ್ಯಬಾಲು, ನೂರೇರ ರತಿ ಅಚ್ಚಪ್ಪ, ರಾಮಕೃಷ್ಣ ಉಪಸ್ಥಿತರಿದ್ದರು.