ಕೂಡಿಗೆ, ಜೂ ೨೮: ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದ ಮೂರು ವಿಭಾಗಗಳಾದ ಹಸುಗಳ ಸಾಕಾಣೆ, ಹಂದಿ ಸಾಕಾಣೆ ಮತ್ತು ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಸಮರ್ಪಕವಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪರಿಶೀಲನೆ ಸಂದರ್ಭ ಜಾನುವಾರು ಕೇಂದ್ರದಲ್ಲಿರುವ ಹಸುಗಳನ್ನು ವೀಕ್ಷಣೆ ನಡೆಸಿ ಹಸುವೊಂದಕ್ಕೆ ಹೂವಿನ ಹಾರ ಹಾಕಿ ಗೋಪೂಜೆ ಸಲ್ಲಿಸಿದರು. ಬಳಿಕ ಅಧಿಕಾರಿಗಳಿಂದ ಜಾನುವಾರುಗಳ ಸಮಗ್ರವಾದ ಮಾಹಿತಿ, ದೇಶೀಯ ತಳಿಯಾದ ಸಾಹಿವಲ್ ಹಸುಗಳನ್ನು ಈ ಸಾಲಿನಿಂದ ಸಾಕಾಣಿಕೆ ಮಾಡುತ್ತಿರುವ ಬಗ್ಗೆ ಸಮಗ್ರ ಮಾಹಿತಿ ಮತ್ತು ಅಮೃತಧಾರೆ ಸಿರಿ ಯೋಜನೆಯಡಿ ವಿತರಣೆ ಮಾಡಲಾದ ಹಸುಗಳ ವಿವರ ಪಡೆದರು.
ಬಳಿಕ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಳಿದ ಸಚಿವರು ಕೋಳಿ ಸಾಕಾಣಿಕೆ ಕೇಂದ್ರದ ಅಭಿವೃದ್ಧಿ ಬಗ್ಗೆ ವಿಷಯ ಸಂಗ್ರಹಿಸಿದರು. ನಂತರ ಹಂದಿ ಸಾಕಾಣಿಕೆ ಕೇಂದ್ರಕ್ಕೆ ತೆರಳಿ ನೂತನವಾಗಿ ಅಂರ್ರಾಷ್ಟಿçÃಯ ಮಟ್ಟದ ಹಂದಿ ಸಾಕಾಣಿಕೆಯ ಹೊಸ ತಂತ್ರಜ್ಞಾನದ ಕೇಂದ್ರದ ಬಗ್ಗೆ ಮಾಹಿತಿ ಪಡೆದು, ಹಂದಿಗೆ ಬೇಡಿಕೆಯಿರುವುದ ರಿಂದ ಇನ್ನೂ ಹೆಚ್ಚಿನ ಪ್ರಗತಿಗೆ ಪೂರಕವಾಗುವ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಅದಕ್ಕೆ ಸಂಬAಧಿಸಿದ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಶುಪಾಲನಾ ಇಲಾಖೆಗೆ ಸೇರಿರುವ ೧೩೬ ಎಕರೆ ಪ್ರದೇಶದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಕೂಡಿಗೆಯ ಪಶುಪಾಲನಾ ಕೇಂದ್ರವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರಕಾರಕ್ಕೆ ಮನವಿ ಮಾಡುವಂತೆ ತಿಳಿಸಿದರು.
ಈ ಸಂದರ್ಭ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ವೀರಭದ್ರಯ್ಯ, ಅಪರ ವಿಶೇಷ ಅಧಿಕಾರಿ ಶಿವರುದ್ರಪ್ಪ, ವಿಶೇಷ ಅಧಿಕಾರಿ ಭಾಸ್ಕರ್ ನಾಯಕ್, ಜಿಲ್ಲಾ ಉಪನಿರ್ದೇಶಕ ಸುರೇಶ್ ಭಟ್, ಕೂಡಿಗೆ ಕೇಂದ್ರದ ಉಪನಿರ್ದೇಶಕ ಡಾ. ಶಶಿಧರ್ ಸೇರಿದಂತೆ ಇಲಾಖೆಯ ಜಿಲ್ಲೆಯ ಸಹಾಯಕ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಹಾಜರಿದ್ದರು.
ನಂತರ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಪಶುಪಾಲನಾ ಇಲಾಖೆ ಅಧೀನದ ಜಿಲ್ಲಾ ಕೋಳಿ ಸಾಕಾಣಿಕೆ ಕೇಂದ್ರದ ಸಭಾಂಗಣದಲ್ಲಿ ಪಶುಪಾಲನಾ ಇಲಾಖೆ ಅಧಿಕಾರಿಗಳ ಸಭೆಯು ಪಶುಪಾಲನಾ ಸಚಿವ ಪ್ರಭು ಬಿ. ಚೌವ್ಹಾಣ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೂಡಿಗೆಯ ಪಶುಪಾಲನಾ ಇಲಾಖೆಯ ೧೩೬ ಎಕರೆ ವಿಸ್ತೀರ್ಣ ಜಾಗದಲ್ಲಿ ಹೆಚ್ಚುವರಿ ಜಾಗವನ್ನು ಬಳಕೆ ಮಾಡಿಕೊಂಡು ಹಂದಿ ಸಾಕಾಣಿಕೆ ಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಬೇಕಾಗುವ ಕ್ರಿಯಾಯೋಜನೆಯ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಇದಕ್ಕೆ ಪೂರಕವಾಗಿ ಇಲಾಖೆಯ ಉನ್ನತ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು.
ಅದೇ ರೀತಿಯಲ್ಲಿ ಕೋಳಿ ಮತ್ತು ಹಸುಗಳ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಕಳುಹಿಸಿದ್ದಲ್ಲಿ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ಸಭೆಯನ್ನು ಕರೆದು ಅಭಿವೃದ್ಧಿಗೆ ಬೇಕಾಗುವ ವಿಷಯಕ್ಕೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಇದಕ್ಕೆ ಪೂರಕ ಯೋಜನೆಗಳನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಬೇಕಾಗುವ ಪೂರಕ ಯೋಜನೆಗಳನ್ನು ರೂಪಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇಲಾಖೆ ಮೂಲಕ ವಿವಿಧ ತರಬೇತಿಗಳನ್ನು ನೀಡಿ ಅಭಿವೃದ್ಧಿಪಡಿಸಲು ಸಹಕಾರ ನೀಡಲಾಗುವುದು ಎಂದರು.
ಈಗಾಗಲೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೇ. ೫೦ ನೇಮಕವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಹುದ್ದೆಗಳನ್ನು ಹಂತಹAತವಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೦೧೬ ರಲ್ಲಿ ಶಂಕುಸ್ಥಾಪನೆಗೊAಡ ಮೇಕೆ ಹಾಲು ಘಟಕದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದು, ಮೇಕೆ ಹಾಲು ಘಟಕದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮವಹಿಸುವ ಭರವಸೆ ನೀಡಿದರು.