ಶ್ರೀಮಂಗಲ, ಜೂ. ೨೮: ಶ್ರೀಮಂಗಲದಲ್ಲಿನ ಕಂದಾಯ ಇಲಾಖಾ ಕಚೇರಿ ಶಿಥಿಲಾವಸ್ಥೆ ಯಲ್ಲಿದ್ದು, ಇದೀಗ ರೂ. ೧೮.೫೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ತಲೆ ಎತ್ತಿದೆ. ಈ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭದಲ್ಲಿ ಕಳಪೆಯಾಗಿದ್ದ ಬಗ್ಗೆ ಅರಿತ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ನಡೆಯುತ್ತಿದ್ದ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು.

ಯೋಜನಾ ಅಭಿವೃದ್ಧಿ ಮಂಡಳಿಯ ನಿರ್ಮಿತಿ ಕೇಂದ್ರದ ಮೂಲಕ ಈ ಕಟ್ಟಡ ನಿರ್ಮಾಣಕ್ಕೆ ರೂ. ೧೮.೫೦ ಲಕ್ಷ ಮಂಜೂರಾಗಿತ್ತು. ಈ ಕೆಲಸಕ್ಕೆ ಅಡಿಪಾಯ ಹಾಕುತ್ತಿ ದ್ದಾಗಲೇ ಇದು ಕಳಪೆ ಕೆಲ¸ Àವಾಗಲಿದ್ದು, ಉಪಯೋಗಕ್ಕೆ ಬರುವುದಿಲ್ಲ ಎಂಬ ಬಗ್ಗೆ ಸ್ಥಳೀಯ ವಿಎಸ್‌ಎಸ್‌ಎನ್ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಮತ್ತಿತರ ಸಾರ್ವ ಜನಿಕರು ಆಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ವೀರಾಜ ಪೇಟೆ ತಹಶೀಲ್ದಾರ್ ಯೋಗಾನಂದ್ ಅವರ ಗಮನ ಸೆಳೆದು ಕಾಮಗಾರಿಯ ಪೂರ್ಣ ವಿವರ ಹಾಗೂ ನೀಲಿನಕ್ಷೆ ಯನ್ನು ಸಾರ್ವಜನಿಕವಾಗಿ ಪ್ರಕಟಿಸು ವಂತೆ ಒತ್ತಾಯಿಸಿದ್ದರು.

ಬಳಿಕ ಸ್ಥಳ ಪರಶೀಲನೆ ನಡೆಸಿದ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಕೆಲಸ ಸ್ಥಗಿತಗೊಳಿಸಿ ದ್ದರು. ಇದೀಗ ಈ ಕೆಲಸವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸ ಲಾಗಿದ್ದು, ಕಟ್ಟಡ ಎಲೆ ಎತ್ತಿದೆ. ಸಾರ್ವಜನಿಕರಿಗೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಈ ಕಟ್ಟಡ ಇದೀಗ ಪ್ರಯೋಜನವಾಗಲಿದೆ.

ಈ ಕಟ್ಟಡದ ಉದ್ಘಾಟನೆ ತಾ. ೩೦ ರಂದು ನಡೆಯಲಿದೆ. ಸಾರ್ವಜನಿಕರ ಒತ್ತಡಕ್ಕೆ ಈ ಹಿಂದೆ ಜಿಲ್ಲಾಡಳಿತ ಸ್ಪಂದಿಸಿದ್ದು, ಇದರ ಫಲವಾಗಿ ಉತ್ತಮ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದು ಸ್ಥಳೀಯರಾದ ಚಂಗಪ್ಪ ಮತ್ತಿರರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.