ಪೆರಾಜೆ, ಜೂ. ೨೯: ಗಡಿಗುಡ್ಡೆ ಸ್ಮಾö್ಯಶರ್ಸ್ ಬ್ಯಾಡ್ಮಿಂಟನ್ ಕ್ಲಬ್ ಆಯೋಜಿಸಿದ ಬ್ಯಾಡ್ಮಿಂಟನ್ ಪಂದ್ಯಾಟವು ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ೨೧ ತಂಡಗಳು ಭಾಗವಹಿಸಿದ್ದವು. ಅನಿಲ್ ಮತ್ತು ಲೋಚನ್ ವಿಜೇತರಾಗಿ ವಿನ್ನರ್ ಟ್ರೋಫಿಯನ್ನು ಪಡೆದರೆ. ನಿತಿನ್ ಹಾಗೂ ಭವಿತ್ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಸುಮನ್ ಮತ್ತು ಜೀವನ್ ತಂಡ ಪಡೆದುಕೊಂಡಿತು.

ಸAಜೆ ಬಹುಮಾನ ವಿತರಣೆ ಕಾರ್ಯಕ್ರಮವು ಕ್ಲಬ್‌ನ ಅಧ್ಯಕ್ಷÀ ಪ್ರದೀಪ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ದೈಹಿಕ ಶಿಕ್ಷಕ ವಸಂತ ಅಮೆಚೂರ್, ರವಿ ಬಂಗಾರಕೋಡಿ, ಅಶೋಕ್ ಪೀಚೆಮನೆ, ಗ್ರಾಮ ಪಂಚಾಯಿತಿ ಸದಸ್ಯ ಉದಯ ಚಂದ್ರ ಕುಂಬಳಚೇರಿ, ಪಂಚಾಯಿತಿ ಮಾಜಿ ಸದಸ್ಯ ಚಿನ್ನಪ್ಪ ಅಡ್ಕ, ಪ್ರವೀಣ ಕುಂದಲ್ಪಾಡಿ, ಅರೆಭಾಷೆ ಅಕಾಡೆಮಿ ಸದಸ್ಯ ಕಿರಣ್ ಕುಂಬಳಚೇರಿ ಉಪಸ್ಥಿತರಿದ್ದರು.

ಪಂದ್ಯಾಟದ ವೀಕ್ಷಕ ವಿವರಣೆಯನ್ನು ಶ್ರೀನಾಥ್ ಪಡುಮಜಲು ನೀಡಿದರು.