ಮಡಿಕೇರಿ, ಜೂ. ೨೯ : ನೇಚರ್ ಫ್ರೆಂಡ್ಸ್ ಯುವಕ ಸಂಘ ಗುಹ್ಯ ಇವರ ವತಿಯಿಂದ ಮೊದಲನೆ ವರ್ಷದ ೬೦ ಕೆ.ಜಿ. ಒಳಗಿನವರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ ಜುಲೈ ೩ರಂದು ಗುಹ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೭,೦೦೦ ನಗದು ಹಾಗೂ ಆಕರ್ಷಕ ಟ್ರೋಪಿ, ದ್ವೀತಿಯ ಸ್ಥಾನ ಪಡೆಯುವ ತಂಡಕ್ಕೆ ರೂ. ೩,೫೦೦ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. ೨,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ದೊರಕಲಿದ್ದು, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರರಿಗೂ ವಿಶೇಷ ಬಹುಮಾನ ನೀಡಲಾಗುತ್ತದೆ.
ಈ ಪಂದ್ಯಾವಳಿಯಲ್ಲಿ ೬೦ ಕೆ.ಜಿ. ಒಳಗಿನ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಒಂದು ತಂಡದಲ್ಲಿ ಆಟವಾಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡಲು ಅವಕಾಶ ಇರುವುದಿಲ್ಲ. ಪಂದ್ಯಾವಳಿಯ ವೇಳೆ ಅಂಕಣದ ಒಳಗೆ ಅಶಿಸ್ತು ತೋರುವ ತಂಡವನ್ನು ಪಂದ್ಯಾವಳಿಯಿAದ ಹೊರ ಹಾಕಲಾಗುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳು ಜುಲೈ ೩ ರಂದು ಬೆಳಗ್ಗೆ ೮ ಗಂಟೆಗೆ ಮೈದಾನದಲ್ಲಿ ಹಾಜರಾಗಿರಬೇಕು. ಆಸಕ್ತ ತಂಡಗಳು ತಮ್ಮ ತಂಡದ ಹೆಸರನ್ನು ಜುಲೈ ೨ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಣಿ : ೭೨೫೯೫೩೭೮೩೬ , ಸಂಜು: ೮೧೨೩೨೩೧೮೬೪, ಪ್ರಕಾಶ್ : ೯೯೦೨೪೪೦೧೧೪ ಇವರುಗಳನ್ನು ಸಂಪರ್ಕಿಸುವAತೆ ಕೋರಲಾಗಿದೆ.