ಮುಳ್ಳೂರು: ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ್ ದಿವಸ್ ನೆನಪಿನ ದಿನದ ಅಂಗವಾಗಿ ಸಮೀಪದ ನಿಡ್ತ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಿಡ್ತ ಗ್ರಾ.ಪಂ. ಪ್ರಮುಖರಾದ ಮಲ್ಲೇಶ್, ಮನೋಜ್ ಗ್ರಾಮ ಪಂಚಾಯಿತಿಯ ೪ ಬೂತ್ನ ಸಮಿತಿ ಅಧ್ಯಕ್ಷರುಗಳಾದ ದುರ್ಗೇಶ್, ಸಂದೀಪ್, ಲಿಂಗರಾಜ್, ಮೋಹನ್ರಾಜ್ ಸಮಿತಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.
ಈ ಸಂದರ್ಭ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ್ ದಿವಸ್ ನೆನಪಿನ ದಿನದ ಕುರಿತು ಪ್ರಮುಖರು ಮಾತನಾಡಿದರು.
ಗುಡ್ಡೆಹೊಸೂರು ಬಿ.ಜೆ.ಪಿ. ಶಕ್ತಿ ಕೇಂದ್ರ ಗುಡ್ಡೆಹೊಸೂರು: ಇಲ್ಲಿನ ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನವನ್ನು ಗುಡ್ಡೆಹೊಸೂರು ಶಕ್ತಿ ಕೇಂದ್ರದ ಪ್ರಮುಖರಾದ ಕುಡೆಕ್ಕಲ್ ನಿತ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಪುಷ್ಪ ನಾಗೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಸದಸ್ಯ ರಮೇಶ್, ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಕಾರ್ಯದರ್ಶಿ ಪುಷ್ಪ ನಾಗೇಶ್ ಮುಖರ್ಜಿಯವರ ಜೀವನ ಚರಿತ್ರೆಯ ಬಗ್ಗೆ ವಿವರಿಸಿದರು.
ಪೊನ್ನಂಪೇಟೆ ಬಿ.ಜೆ.ಪಿ. ಶಕ್ತಿ ಕೇಂದ್ರ ಪೊನ್ನಂಪೇಟೆ: ಪೊನ್ನಂಪೇಟೆ ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಆಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾಡಲಾಯಿತು.
ಈ ಸಂದರ್ಭ ಬಿಜೆಪಿ ಹಿರಿಯ ಕಾರ್ಯಕರ್ತ ಚಿರಿಯಪಂಡ ರಾಜ ನಂಜಪ್ಪ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧುಕುಮಾರ್, ಕೊಟೇರ ಕಿಸನ್ ಉತ್ತಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಶಮಿ, ಸದಸ್ಯರಾದ ಅಡ್ಡಂಡ ನಿಲನ್ ಮಂದಣ್ಣ, ರಾಮಕೃಷ್ಣ, ಬಸ್ ರಮೇಶ್, ಬಿಜೆಪಿ ಮುಖಂಡರಾದ ಮತ್ರಂಡ ಕಬೀರ್ ದಾಸ್, ತೋರಿರ ವಿನು, ಮೂಕಳೇರ ಕಾವ್ಯ ಮಧು, ವಿನು ಕೆಬಿ, ಸುಬ್ರಮಣಿ, ಪ್ರಧಾನ್, ಚೆಪ್ಪುಡೀರ ರಾಧಿಕಾ, ರಜನಿ, ವೆಂಕಟೇಶ್ ಹಾಜರಿದ್ದರು.