ಮಡಿಕೇರಿ, ಜೂ. ೨೮: ಪರಿಶಿಷ್ಟ ವರ್ಗ ದೌರ್ಜನ್ಯ ವಿರೋಧಿ ಕಾನೂನಿನನ್ವಯ ಮಹಿಳಾ ವಕೀಲರೊಬ್ಬರು ಹಾಗೂ ಅವರ ಪತಿಯನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವೀರಾಜಪೇಟೆ ಸನಿಹದ ಅಂಬಟ್ಟಿ ಗ್ರಾಮದ ಪರಿಶಿಷ್ಟ ವರ್ಗದ ಕಾರ್ಮಿಕ ಮಹಿಳೆ ಗೀತಾ ಎ.ಎಸ್. (ದಿ. ಶಿವು ಅವರ ಪತ್ನಿ) ಎಂಬ ಮಹಿಳೆ ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ನೀಡಿದ್ದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಆರೋಪಿಗಳು ಹಣಕಾಸು ವ್ಯವಹಾರದ ವಿಚಾರದಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದ ಹಿನ್ನೆಲೆಯಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಎಸ್ಐ ರವಿಕುಮಾರ್ ಮತ್ತು ಸಿಬ್ಬಂದಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಮಹಿಳಾ ವಕೀಲೆ ನಿಶಾ ಹಾಗೂ ಅವರ ಪತಿ ಮಲೆಯಾಳಿ ಪ್ರಕಾಶ್ ಎಂಬವರುಗಳು ಹಣಕಾಸು ವ್ಯವಹಾರವೊಂದಕ್ಕೆ ಸಂಬAಧಿಸಿದAತೆ ಈ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಈ ಕುರಿತು ವಿವರ ತನಿಖೆ ನಡೆಸುತ್ತಿದ್ದರೂ ಕೂಡ ಪರಿಶಿಷ್ಟ ವರ್ಗದ ದೌರ್ಜನ್ಯ ವಿರೋಧಿ ಕಾನೂನಿನನ್ವಯ ಈ ಈರ್ವರನ್ನು ಬಂಧಿಸಿ ಕ್ರಮಕೈಗೊಂಡಿರುವುದಾಗಿ ತಿಳಿದು ಬಂದಿದೆ.