ಸಿದ್ದಾಪುರ, ಜೂ. ೨೭: ನೆಲ್ಯಹುದಿಕೇರಿ ಖಾಸಗಿ ಕಾಫಿ ತೋಟಗಳ ಕಾರ್ಮಿಕರಿಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮದ ವತಿಯಿಂದ ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭ ಚೆಸ್ಕಾಂನ ಲೈನ್‌ಮ್ಯಾನ್ ನಾಗರಾಜ್ ಹಾಗೂ ಇನ್ನಿತರÀ ಸಿಬ್ಬಂದಿಗಳು ಕಾರ್ಮಿಕರಿಗೆ ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ಅಗತ್ಯ ಮುಂಜಾಗ್ರತೆ ಬಗ್ಗೆ ಹಾಗೂ ವಿದ್ಯುತ್ ತಂತಿಗಳು ಹಾದುಹೋಗಿರುವ ಜಾಗದಲ್ಲಿ ಹಾಗೂ ಮರಗಳ ಬಳಿ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಬೇಕು, ವಿದ್ಯುತ್ ಕಂಬಗಳನ್ನು ಮುಟ್ಟಬಾರದೆಂದು ಮಾಹಿತಿ ನೀಡಿದರು.