*ಗೋಣಿಕೊಪ್ಪ, ಜೂ. ೨೭: ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಲು ಆ ಕುಟುಂಬ ವಸತಿಯ ಆಶ್ರಯ ಹೊಂದುವುದು ಪ್ರಮುಖವಾಗಿದ್ದು, ಯೋಜನೆಯ ಫಲಾನುಭವಿಗಳು ನಿಯಮಾನುಸಾರ ೯೦ ದಿನದೊಳಗೆ ವಸತಿ ನಿರ್ಮಿಸಲು ಗಮನ ಹರಿಸಬೇಕೆಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಸಲಹೆ ನೀಡಿದರು.

ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಆಯೋಜಿಸಿದ ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ೩೮ ಗ್ರಾಮಪಂಚಾಯಿತಿ ವ್ಯಾಪ್ತಿಯ ೩೨೦ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಬಸವ ವಸತಿ ಯೋಜನೆಯಡಿ ೨೫೪ ಮತ್ತು ಅಂಬೇಡ್ಕರ್ ಯೋಜನೆಯಡಿ ೬೬ ಮನೆಗಳ ನಿರ್ಮಾಣಕ್ಕೆ ಆದೇಶ ಪತ್ರವನ್ನು ನೀಡಲಾಗುತ್ತಿದೆ. ಕಳೆದ ಬಾರಿ ನೀಡಿದ ೯೦೦ಕ್ಕೂ ಹೆಚ್ಚು ಅರ್ಜಿಗಳಿಗೆ ಯೋಜನೆಯ ಆದೇಶ ಬಂದಿದ್ದರೂ, ನಿಯಮಾನುಸಾರ ಮನೆ ನಿರ್ಮಿಸದೇ ಇರುವುದರಿಂದ ಫಲಾನುಭವಿಗಳಿಗೆ ಬಂದ ಅನುದಾನ ಹಿಂದಿರುಗಿದೆ.

ಪದೇ ಪದೇ ಈ ರೀತಿಯ ಅವ್ಯವಸ್ಥೆಯನ್ನು ರೂಪಿಸದೇ ಮನೆ ನಿರ್ಮಿಸುವಲ್ಲಿ ಗಮನ ಹರಿಸಬೇಕು. ೨೦೨೪ಕ್ಕೆ ವಸತಿ ರಹಿತ ದೇಶವಾಗಿ ನಿರ್ಮಿಸುವ ಮೋದಿ ಕನಸು ನನಸಾಗಲು ಈ ಕಾರ್ಯ ಜವಾಬ್ದಾರಿ ಯುತವಾಗಿ ನಡೆಯಬೇಕಾಗಿದೆ. ಮತ್ತು ಸಲ್ಲಿಸಿದ ಅರ್ಜಿಗಳನ್ನು ಗುರಿ ತಲುಪಿಸಲು ಪ್ರತಿಯೊಬ್ಬರು ಹಂತ ಹಂತವಾಗಿ ಮನೆ ನಿರ್ಮಿಸಿ ಅನುದಾನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಬಿಪಿಎಲ್ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ಗಳಲ್ಲಿ ಯಾವುದೇ ಲೋಪದೋಷಗಳನ್ನು ಹೊಂದಿರದೇ ಸರಿಯಾದ ಕ್ರಮದೊಂದಿಗೆ ಇದ್ದಾಗ ಯೋಜನೆಗಳ ಫಲಾನುಭವಿಗಳಾಗಲು ಅರ್ಜಿ ಪುರಸ್ಕöÈತಗೊಳ್ಳುತ್ತದೆ ಎಂದು ತಿಳಿಸಿದರು.

ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಲು ನಿರ್ಲಕ್ಷ÷್ಯ ತಾಳಿದರೆ ಮುಂದೆ ೧೫ ವರ್ಷದವರೆಗೆ ಅರ್ಜಿ ಗಣಕ ಯಂತ್ರದಲ್ಲಿ ಪುರಸ್ಕöÈತ ಗೊಳ್ಳುವುದಿಲ್ಲ. ಹೀಗಾಗಿ ತಕ್ಷಣವೇ ಮನೆ ನಿರ್ಮಿಸಿಕೊಳ್ಳಲು ಮನಸ್ಥಿತಿಯನ್ನು

(ಮೊದಲ ಪುಟದಿಂದ) ದೃಡಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ವಿತರಿಸಿದ ನಂತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ತೊಂದರೆ ನೀಡಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಿ ನಿರಾಶ್ರೀತರಿಗೆ ವಸತಿ, ವಿದ್ಯುತ್ ಇನ್ನಿತರ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ೫ ಲಕ್ಷದವರೆಗೆ ಫಲಾನುಭವಿಗಳಾಗಲು ಅವಕಾಶವಿದೆ. ಆದರೆ, ಈ ಮೊದಲು ಖಾಸಗಿ ಆಸ್ಪತ್ರೆಯ ದಾಖಲಾಗದೇ ತುರ್ತು ಪರಿಸ್ಥಿತಿಯಲ್ಲಿಯೂ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಾಯಿಸಿಕೊAಡ ನಂತರ ಇತರ ಅನುಕೂಲಕರ ಆಸ್ಪತ್ರೆಗಳಿಗೆ ತೆರಳುವುದು ಉತ್ತಮ ಮಾರ್ಗವಾಗಿದೆ ಎಂದು ಸಲಹೆ ನೀಡಿದರು.

ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ವಸತಿ ನೋಡೆಲ್ ಅಧಿಕಾರಿ ಅಕ್ರಂ ಪಾಷ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷ ಗಿರಿಜಾ ವೆಂಕಟೇಶ್, ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೋಡಮಾಡ ಸುಖೇಶ್, ನಿಟ್ಟೂರು ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಹಾತೂರು ಅಧ್ಯಕ್ಷ ಗುಮ್ಮಟೀರ ದರ್ಶನ್ ನಂಜಪ್ಪ, ತಿತಿಮತಿ ಅಧ್ಯಕ್ಷೆ ಆಶಾ, ಪೊನ್ನಂಪೇಟೆ ಪಿಡಿಓ ಪುಟ್ಟರಾಜು, ಪಾಲಿಬೆಟ್ಟ ಪಿಡಿಓ ವಿಶ್ವನಾಥ್, ತಿತಿಮತಿ ಪಿಡಿಓ ಮಮತಾ ಜಗದೀಶ್ ಸೇರಿದಂತೆ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಿಡಿಓ ಮತ್ತು ಫಲಾನುಭವಿಗಳು ಹಾಜರಿದ್ದರು.