ವ್ಯಕ್ತಿಯ ಹತ್ಯೆ-ಪ್ರಧಾನಿಗೆ ಜೀವ ಬೆದರಿಕೆ-ಬಂಧನ

ಉದಯಪುರ, ಜೂ. ೨೮: ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಸ್ಥಳೀಯ ಟೈಲರ್ ಅನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿ ಪ್ರಧಾನಿ ಮೋದಿಯವರ ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ೧೦ ದಿನಗಳ ಹಿಂದೆ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಎಂಬವರು ಈ ಪೋಸ್ಟ್ ಮಾಡಿದ್ದು ಅಂದಿನಿAದ ಬೆದರಿಕೆಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಇಂದು ಹಗಲು ಕನ್ಹಯ್ಯಾ ಅವರ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲವು ಬಾರಿ ಹಲ್ಲೆ ನಡೆಸಿ ಕತ್ತು ಸೀಳಿದರು. ಈ ದಾಳಿಯ ವೀಡಿಯೋವನ್ನು ಆನ್‌ಲೈನ್‌ನಲ್ಲಿ ದುಷ್ಕರ್ಮಿಗಳು ಪೋಸ್ಟ್ ಮಾಡಿದ್ದರು. ೪೦ ವರ್ಷದ ಕನ್ಹಯ್ಯಾಲಾಲ್ ತೇಲಿ ಅವರು ಧನ್ಮಂಡಿಯಲ್ಲಿರುವ ಭೂತ ಮಹಲ್ ಬಳಿ ಸುಪ್ರೀಂ ಟೈಲರ್ಸ್ ಹೆಸರಿನ ಅಂಗಡಿಯನ್ನು ಹೊಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅಂಗಡಿಗೆ ನುಗ್ಗಿ ಧಾಳಿ ನಡೆಸಿದ್ದು, ತೇಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊAಡಿದ್ದ ಹಂತಕರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ತುರ್ತು ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಹಿAದೂ ದೇವತೆ ವಿರುದ್ಧ ಪೋಸ್ಟ್: ಪೊಲೀಸ್ ಕಸ್ಟಡಿ ನಾಲ್ಕು ದಿನ ವಿಸ್ತರಣೆ

ನವದೆಹಲಿ, ಜೂ. ೨೮: ಹಿಂದೂ ದೇವತೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ನ್ಯಾಯಾಲಯವು ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಇಂದು ವಾದ-ವಿವಾದಗಳ ಆಲಿಸಿದ ನಂತರ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಈ ಆದೇಶ ನೀಡಿದರು. ಜುಬೇರ್‌ನ ಕಸ್ಟಡಿ ಅವಧಿಯನ್ನು ಐದು ದಿನ ವಿಸ್ತರಿಸುವಂತೆ ಪೊಲೀಸರು ಕೋರಿದ್ದರು. ೨೦೧೮ರ ಜುಬೇರ್ ಮಾಡಿದ್ದ ಆಕ್ಷೇಪಾರ್ಹ ಟ್ವೀಟ್ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಾಗಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುದ್ವಾರದ ಮೇಲಿನ ದಾಳಿ ಹೊಣೆಹೊತ್ತ ಐಸಿಸ್

ಕಾಬೂಲ್, ಜೂ. ೨೮: ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದು, ಇದು ಪ್ರವಾದಿ ಮೊಹಮ್ಮದ್ ಅವರಿಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ಎಂದು ಹೇಳಿದೆ. ತನ್ನ ಹೋರಾಟ ಗಾರರೊಬ್ಬರು ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅದರ ಸಿಬ್ಬಂದಿಯನ್ನು ಕೊಂದ ನಂತರ ಮತ್ತು ಅದರೊಳಗಿದ್ದವರ ಮೇಲೆ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್‌ಗಳಿಂದ ದಾಳಿ ನಡೆಸಲಾಯಿತೆಂದು ಐಸಿಸ್ ಹೇಳಿದೆ. ಗುರುದ್ವಾರದಲ್ಲಿ ನಿನ್ನೆ ದಾಳಿ ವೇಳೆ ಇಬ್ಬರು ಸಾವನ್ನಪ್ಪಿದ್ದು ಕನಿಷ್ಟ ಏಳು ಮಂದಿ ಗಾಯಗೊಂಡಿದ್ದಾರೆ. ಭಾರತದಿಂದ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ವಿತರಣೆಯ ಕುರಿತು ಚರ್ಚಿಸಲು ಭಾರತೀಯ ನಿಯೋಗವು ಕಾಬೂಲ್‌ಗೆ ಭೇಟಿ ನೀಡಿದ ನಂತರ ಈ ದಾಳಿ ನಡೆದಿದೆ.

ಸಿಬಿಲ್ ಸ್ಕೋರ್ ಪರಿಗಣನೆ ರದ್ದು ಮಾಡುವಂತೆ ರೈತರ ಪ್ರತಿಭಟನೆ

ಬೆಂಗಳೂರು, ಜೂ. ೨೮: ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್‌ಬಿಐ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಕರ್ನಾಟಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ರೈತರು ಕೃಷಿ ಚಟುವಟಿಕೆ ನಡೆಸಲು ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದಾಗ ಸಾಲಗಾರರ ಸಿಬಿಲ್ ಪರೀಕ್ಷೆ ಮಾಡಿ ನಂತರ ಸಾಲ ಕೊಡಬೇಕೆ ಬೇಡವೆ ಎಂದು ತಿಳಿಸುತ್ತೇವೆ ಎನ್ನುತ್ತಾರೆ. ಇದರಿಂದ ಬಹುತೇಕ ರೈತರಿಗೆ ಸಾಲ ಸಿಗದಂತೆ ಆಗುತ್ತದೆ. ರೈತ ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ಸಲುವಾಗಿ ಬೆಳೆ ಬೆಳೆಯಲು, ವ್ಯವಸಾಯ ಚಟುವಟಿಕೆಗಾಗಿ ಸಾಲ ತೆಗೆದುಕೊಳ್ಳುತ್ತಾನೆ. ಕೆಲವು ಸಂದರ್ಭ ಪ್ರಕೃತಿಯ ವಕ್ರದೃಷ್ಟಿಯಿಂದ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಹಾನಿ, ಬರಹಾನಿ ಸಿಲುಕಿ ಬೆಳೆ ನಷ್ಟ ಅನುಭವಿಸುತ್ತಾನೆ. ಇದರಿಂದ ಕೆಲವು ಸಂದರ್ಭಗಳಲ್ಲಿ ನಿಯಮಗಳ ಪ್ರಕಾರ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತನ ಸಿಬಿಲ್ ಸ್ಕೋರ್ ಉತ್ತಮವಾಗಿರಲು ಸಾಧ್ಯವಾಗುವುದಿಲ್ಲ. ಎಲ್ಲ ವಿಷಯಗಳನ್ನು ಗಮನಿಸಿ ರೈತರ ಕೃಷಿ ಚಟುವಟಿಕೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಮನವಿ ಸ್ವೀಕರಿಸಿದ ರಿಸರ್ವ್ ಬ್ಯಾಂಕ್ ಬ್ಯಾಂಕ್ ಇಂಡಿಯಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆನಂದ ಕಿಶೋರ್ ಪಾಟೀಲ್ ಸಮ್ಮುಖದಲ್ಲಿ ಹತ್ತು ಜನ ರೈತ ಪ್ರತಿನಿಧಿಗಳ ಸಭೆ ನಡೆಯಿತು. ರೈತರ ಒತ್ತಾಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯಪಾಲರಿಗೆ ವರದಿ ನೀಡುವುದಾಗಿ ಹಾಗೂ ರೈತರ ಇನ್ನಿತರ ವಿಚಾರಗಳ ಬಗ್ಗೆ ೧೫ ದಿವಸದಲ್ಲಿ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ರೈತ ಪ್ರತಿನಿಧಿಗಳನ್ನು ಸಭೆಗೆ ಆಮಂತ್ರಣ ನೀಡುವುದಾಗಿ ತಿಳಿಸಿದರು.

ಮುಖೇಶ್ ಅಂಬಾನಿ ರಾಜೀನಾಮೆ-ಆಕಾಶ್ ನೂತನ ಅಧ್ಯಕ್ಷ

ನವದೆಹಲಿ, ಜೂ. ೨೮: ರಿಲಯನ್ಸ್ ಇಂಡಸ್ಟಿçÃಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಮ್ಮ ಸಮೂಹದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಮಂಡಳಿಗೆ ರಾಜೀನಾಮೆ ನೀಡಿದ್ದು, ಜಿಯೋ ಕಂಪೆನಿಯ ಆಡಳಿತವನ್ನು ತಮ್ಮ ಹಿರಿಯ ಮಗ ಆಕಾಶ್‌ಗೆ ಹಸ್ತಾಂತರಿಸಿದ್ದಾರೆ. ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ತಾ. ೨೭ ರಂದು ನಡೆದ ಸಭೆಯಲ್ಲಿ ಕಂಪೆನಿಯ ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿದ್ದ ಆಕಾಶ್ ಎಂ. ಅಂಬಾನಿ ಅವರನ್ನು ಕಂಪೆನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ. ಮುಕೇಶ್ ಅಂಬಾನಿ ಅವರು ತಮ್ಮ ಪುತ್ರ ಆಕಾಶ್ ಅಂಬಾನಿ ಅವರಿಗೆ ರಿಲಯನ್ಸ್ ಜಿಯೋ ಸಂಸ್ಥೆಯನ್ನು ಮುನ್ನೆಡೆಸಲು ಅವಕಾಶ ಕಲ್ಪಿಸಿಕೊಡಲು ತಾ. ೨೭ ರಂದು ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಕಾಶ್ ಅಂಬಾನಿ ಕಂಪೆನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿರಿವAತ ಕೈಗಾರಿಕೋದ್ಯಮಿ ಶಾಪೂರ್ಜಿ ಪಾಲೋಂಜಿ ಮಿಸ್ತಿç ಇನ್ನಿಲ್ಲ

ನವದೆಹಲಿ, ಜೂ. ೨೮: ಕೈಗಾರಿಕೋದ್ಯಮಿ, ಶಾಪೂರ್ಜಿ ಪಾಲೋಂಜಿ ಸಮೂಹದ ಮುಖ್ಯಸ್ಥರಾಗಿದ್ದ ಪದ್ಮಭೂಷಣ ಪುರಸ್ಕೃತ ಪಾಲೋಂಜಿ ಮಿಸ್ತಿç (೯೩) ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾದರು. ದೇಶದ ಹಿರಿಯ ಸಿರಿವಂತ ವ್ಯಕ್ತಿಯಾಗಿಯೂ ಹೆಸರಾಗಿದ್ದ ಪಾಲೋಂಜಿ ಅವರಿಗೆ ೨೦೧೬ರಲ್ಲಿ ಭಾರತ ಸರ್ಕಾರ ‘ಪದ್ಮ ಭೂಷಣ’ ನೀಡಿ ಗೌರವಿಸಿತ್ತು. ಪಾಲೋಂಜಿ ಅವರ ಒಟ್ಟು ಸಂಪತ್ತು ರೂ. ೧ ಲಕ್ಷ ಕೋಟಿಗಿಂತಲೂ ಅಧಿಕ ಎಂದು ಇತ್ತೀಚೆಗೆ ಫೊರ್ಬ್ಸ್ ಹೇಳಿತ್ತು. ನೂರಾಐವತ್ತು ವರ್ಷ ಇತಿಹಾಸವುಳ್ಳ ಶಾಪೂರ್ಜಿ ಪಾಲೋಂಜಿ ಸಂಸ್ಥೆ ೧೮೬೫ರಲ್ಲಿ ಸ್ಥಾಪನೆಯಾಗಿತ್ತು. ಈ ಸಮೂಹ ಸಂಸ್ಥೆ ಐವತ್ತಕ್ಕೂ ಹೆಚ್ಚು ರಾಷ್ಟçಗಳಲ್ಲಿ ಇಂಜಿನಿಯರಿAಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಜಲ, ಇಂಧನ ಹಾಗೂ ಹಣಕಾಸು ಸೇವೆಗಳನ್ನು ನೀಡುತ್ತಿದೆ. ಪಾಲೋಂಜಿ ಗುಜರಾತ್‌ನ ಪಾರ್ಸಿ ಕುಟುಂಬಕ್ಕೆ ಸೇರಿದವರು. ಈಗ ಶಾಪೂರ್ಜಿ ಪಾಲೋಂಜಿ ಸಮೂಹದ ಕಂಪೆನಿಗಳಿಗೆ ಪಾಲೋಂಜಿ ಅವರ ಹಿರಿಯ ಮಗ ಶಾಪೂರ್ಜಿ ಮಿಸ್ತಿç ಅಧ್ಯಕ್ಷರಾಗಿದ್ದಾರೆ. ಅವರ ಕಿರಿಯ ಮಗ ಸೈರಸ್ ಮಿಸ್ತಿç ಅವರು ೨೦೧೨ರಿಂದ ೨೦೧೬ರವರೆಗೂ ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದರು.