ಸೋಮವಾರಪೇಟೆ,ಜೂ.೨೭: ಬೆಂಗಳೂರಿನ ಹೋಲಿಸ್ಟಿಕ್ ಮೆಡಿಸನ್ ರಿಸರ್ಚ್ ಫೌಂಡೇಷನ್ ವತಿಯಿಂದ ನಡೆದ ೨ನೇ ‘ವರ್ಲ್ಡ್ ಕಾಂಗ್ರೆಸ್ ಆನ್ ಟ್ರೆಡೀಷನಲ್ ಮೆಡಿಸನ್’ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿ ನಿವಾಸಿ, ಸೂಜಿ ಚಿಕಿತ್ಸಾ ತಜ್ಞರಾದ ಜಿ.ಎಂ. ಅರ್ಚನಾ ಅವರಿಗೆ ‘ಆರೋಗ್ಯ ರತ್ನ-೨೦೨೨’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಇತರರು ಪ್ರಶಸ್ತಿ ಪ್ರದಾನ ಮಾಡಿದರು.
ಕೊಡ್ಲಿಪೇಟೆ ಸಮೀಪದ ಕಲ್ಲಳ್ಳಿ ಗ್ರಾಮ ನಿವಾಸಿ, ಪೊಲೀಸ್ ಅಧಿಕಾರಿಯಾಗಿದ್ದ ಜಿ.ಆರ್. ಮಲ್ಲಿಕಾರ್ಜುನ ಹಾಗೂ ಜಿ.ಎಂ. ಸುನೀತಾ ಅವರ ಪುತ್ರಿಯಾಗಿರುವ ಅರ್ಚನಾ, ಎಂ.ಎಸ್ಸಿ ಮನೋ ವಿಜ್ಞಾನ, ಡಿ.ಆಕ್ಯೂ, ಎಂ. ಆಕ್ಯೂ (ಎಲ್ಎಲ್ಬಿ) ಪದವಿ ಪಡೆದಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಸ್ವಿಜರ್ಲೆಂಡ್ನ ರಾಷ್ಟಿçÃಯ ಸಂಶೋಧಕ ಡಾ. ಜಾಕ್ವಲೀನ್ ಜಾಕ್ವೀಸ್, ಆಲ್ ಇಂಡಿಯಾ ಫಿಸಿಯೋಥೆರಫಿಸ್ಟ್ ಅಧ್ಯಕ್ಷ ಡಾ. ಆಲಿ ಇರಾನಿ, ಭಾರತೀಯ ಆಯುಷ್ ಇಲಾಖೆಯ ನಿರ್ದೇಶಕ ಡಾ. ಅಬ್ದುಲ್ ಸೇರಿದಂತೆ ಇತರರು ಹಾಜರಿದ್ದರು.