ವೀರಾಜಪೇಟೆ, ಜೂ. ೨೭: ಕೇಂದ್ರ ಸರ್ಕಾರ ಸೇನಾ ನೇಮಕಾತಿ ಯಲ್ಲಿ ಮಹತ್ತರ ಬದಲಾವಣೆ ಮಾಡಿ ಅಗ್ನಿಪಥ್ ಯೋಜನೆ ಯನ್ನು ಜಾರಿಗೆ ತಂದಿರುವುದು ಉತ್ತಮ ಹಾಗೂ ಶ್ಲಾಘನೀಯ. ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.

ವೀರಾಜಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಭಾರತದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಅಗ್ನಿವೀರರಿಗೆ ನಾಲ್ಕು ವರ್ಷದÀ ಸೇವೆಯಾಗಿದೆ. ಅಗ್ನಿಪಥ್ ಯೋಜನೆ ಸಾಮಾನ್ಯ ಕೇಡರ್‌ನಲ್ಲಿ ಸೇವೆ ಸಲ್ಲಿಸಲು ಒಂದು ಒಳ್ಳೆಯ ಅವಕಾಶವಾಗಿದೆ. ನಾಲ್ಕು ವರ್ಷಗಳ ಸೇವೆ ಬಳಿಕ ಶೇ. ೨೫ರಷ್ಟು ಅಗ್ನಿವೀರ ರನ್ನು ಸೇನೆಯಲ್ಲಿಯೇ ಉಳಿಸಿಕೊಂಡು ಅರ್ಹತೆ, ಇಚ್ಚೆ ಹಾಗೂ ವೈದ್ಯಕೀಯ ಸದೃಢತೆ ಆಧಾರದ ಮೇಲೆ ಮರುಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದ ಅವರು, ಈಗಾಗಲೇ ೫೬ ಸಾವಿರ ಯುವಕರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿ ಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಅಗ್ನಿಪಥ್ ಯೋಜನೆಯ ವಿರುದ್ಧ ರಾಷ್ಟಿçÃಯ ಪಕ್ಷ, ಕೆಲವು ಸಂಘ ಸಂಸ್ಥೆಗಳು ಪ್ರತಭಟನೆ ನಡೆಸುತ್ತಿರು ವುದು ಹಾಸ್ಯಾಸ್ಪದ ಹಾಗೂ ಖಂಡನೀಯ. ಅವರುಗಳಿಗೆ ದೇಶದ ಭದ್ರತೆ ಹಾಗೂ ಯುವಜನಾಂಗದ ಭವಿಷ್ಯ ಮುಖ್ಯವಲ್ಲ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಪ್ರತಿಭಟನೆಯಲ್ಲಿ ಭಾಗಿಯಾದ ಯುವಜನತೆಯನ್ನು ಅಗ್ನಿಪಥ್ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ಪುಗ್ಗೆರ ನಂದಾ, ಕಾವಡಿಚಂಡ ಯು ಗಣಪತಿ, ನಿರ್ದೇಶಕ ತೋರೆರ ರಾಜ ಪೂವಯ್ಯ ಉಪಸ್ಥಿತರಿದ್ದರು.