ಮಡಿಕೇರಿ, ಜೂ. ೨೬: ಮೈಸೂರು ಶ್ರೀರಾಂಪುರದ ಬೆಮೆಲ್ ಬಡಾವಣೆಯ ವೈದ್ಯ ದಂಪತಿಯ ಪುತ್ರನ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ಐವರು ಆರೋಪಿಗಳನ್ನು ವೀರಾಜಪೇಟೆಯ ಹೋಂಸ್ಟೇಯೊAದರಲ್ಲಿ ಬಂಧಿಸಲಾಗಿದೆ.
ಮೈಸೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಹಾಗೂ ಬೆಂಗಳೂರು ಮೂಲದ ಆರೋಪಿಗಳಾದ ಸನು (೨೩), ಕಿರಣ್ (೨೦), ನಿತಿನ್ (೨೧), ನಿಶಾಂತ್ (೨೧) ಚೇತನ್ (೨೨) ಇವರುಗಳು ಬಂಧನಕ್ಕೊಳಗಾದವರಾಗಿದ್ದಾರೆ.
ಜೂ. ೨೩ ರಂದು ಸಂಜೆ ೭ ಗಂಟೆ ಸುಮಾರಿಗೆ ಅಪಹರಣಕಾರರು ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಪೊಲೀಸರು ತಂತ್ರ ರೂಪಿಸಿ ಅಪಹರಣಕಾರರೇ ಬಾಲಕನನ್ನು ಬಿಟ್ಟು ಹೋಗುವಂತೆ ಮಾಡಲಾಗಿತ್ತು.
ಬಳಿಕ ಆರೋಪಿಗಳು ವೀರಾಜಪೇಟೆಯ ಹೋಂಸ್ಟೇಯೊAದಕ್ಕೆ ಬಂದಿದ್ದು, ಪೊಲೀಸರು ಚುರುಕಿನ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಅಪಹರಣಕ್ಕಾಗಿ ಬಳಿಸಿದ್ದ ೨ ಬಾಡಿಗೆ ಕಾರು, ೫ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಓರ್ವ ಆರೋಪಿ ಬಾಲಕನ ತಾತನ ಆರೈಕೆ ಮಾಡುತ್ತಿದ್ದ. ಇಬ್ಬರು ಚಾಲಕರಾಗಿ ಹಾಗೂ ಡೇ ಕೇರ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನಿಬ್ಬರಿಗೆ ಕೆಲಸ ಇರಲಿಲ್ಲ ಎಂದು ತಿಳಿದು ಬಂದಿದೆ.