ಮಡಿ ಕೇರಿ, ಜೂ. ೨೬: ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲೆಯ ಯೋಜನಾ ಬೈಠಕ್ ಮಡಿಕೇರಿಯಲ್ಲಿ ನಡೆಯಿತು. ಜಾಗರಣಾ ವೇದಿಕೆಯ ಸಂಘಟನಾತ್ಮಕ ಕಾರ್ಯದ ಅವಲೋಕನ ಮತ್ತು ಈ ವರ್ಷದ ಯೋಜನೆಯನ್ನು ಮಾಡಲಾಯಿತು. ಜಿಲ್ಲೆಯ ೫ ತಾಲೂಕುಗಳಿಂದ ೮೦ ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬೈಠಕ್‌ನ ಕೊನೆಯಲ್ಲಿ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ ಕಾರ್ಯಕರ್ತರ ಜವಾಬ್ದಾರಿಯ ಘೋಷಣೆಯನ್ನು ವಿಭಾಗ ಸಂಯೋಜಕರಾದ ಮಹೇಶ್ ಕಡಗದಾಳು ಪ್ರಾಂತ ಸಂಘಟಕ ಪ್ರಶಾಂತ್ ಬಂದ್ಯೋಡು ಅವರ ಉಪಸ್ಥಿತಿಯಲ್ಲಿ ಮಾಡಲಾಯಿತು.

ಹಿಂದೂ ಜಾಗರಣಾ ವೇದಿಕೆ ಮಡಿಕೇರಿ ನಗರ ಸಂಯೋಜಕರಾಗಿ ದುರ್ಗೇಶ್, ಸಹ ಸಂಯೋಜಕರಾಗಿ ಪ್ರಮೋದ್, ಸಂದೀಪ್ ತ್ಯಾಗರಾಜ ಕಾಲೋನಿ, ಮಡಿಕೇರಿ ತಾಲೂಕು ಸಂಯೋಜಕರಾಗಿ ಮುಗೇರನ ಬೆಳ್ಳಿಯಪ್ಪ, ಸಹ ಸಂಯೋಜಕರಾಗಿ ಮನು ರೈ, ಚೇತನ್ ಚೆಟ್ಟಳ್ಳಿ, ಸೋಮವಾರಪೇಟೆ ತಾಲೂಕು ಸಂಯೋಜಕರಾಗಿ ರಂಜನ್ ಗೌಡ, ಸಹ ಸಂಯೋಜಕರಾಗಿ ವಿನು ಮಾದಾಪುರ, ಸಂದೀಪ್ ಶನಿವಾರಸಂತೆ, ಕುಶಾಲನಗರ ತಾಲೂಕು ಸಂಯೋಜಕರಾಗಿ ಎಲ್. ಹರೀಶ್, ಸಹ ಸಂಯೋಜಕರಾಗಿ ಪ್ರವೀಣ್, ಮಧು ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ನಗರ ಸಂಯೋಜಕರಾಗಿ ದಿನೇಶ್ ನಾಯರ್, ಸಹ ಸಂಯೋಜಕರಾಗಿ ಚಂಗಪ್ಪ, ಸಹ ಸಂಯೋಜಕರಾಗಿ ಸೋಮಣ್ಣ, ವೀರಾಜಪೇಟೆ ತಾಲೂಕು ಸಂಯೋಜಕರಾಗಿ ಅನಿಲ್, ಸಹ ಸಂಯೋಜಕರಾಗಿ ನಾಗೇಶ್, ಲೋಹಿತ್. ಪೊನ್ನಂಪೇಟೆ ತಾಲೂಕು ಸಂಯೋಜಕರಾಗಿ ಶರತ್ ನಾಲ್ಕೇರಿ, ಸಹ ಸಂಯೋಜಕರಾಗಿ ತಿಮ್ಮಯ್ಯ ಕಿರುಗೂರು, ಪ್ರವೀಣ್. ಇದರೊಂದಿಗೆ ತಾಲೂಕು ಹಾಗೂ ವಲಯ ಸಮಿತಿಗಳಿಗೆ ಸದಸ್ಯರುಗಳಾಗಿ ೫೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಆಯ್ಕೆ ಮಾಡಲಾಯಿತು. ಮಂಗಳೂರು ವಿಭಾಗ ಸಂಯೋಜಕ ಆಗಿ ಮಹೇಶ್ ಕಡಗದಾಳು, ಜಿಲ್ಲಾ ಸಂಯೋಜಕರಾಗಿ ಕುಕ್ಕೆರ ಅಜಿತ್, ಸಹ ಸಂಯೋಜಕರಾಗಿ ಚೇತನ್ ಶಾಂತಿನಿಕೇತನ, ಮಂಜು ಕುಶಾಲನಗರ, ಯೋಗೇಶ ಬಿಟ್ಟಂಗಾಲ ಆಯ್ಕೆ ಆಗಿದ್ದಾರೆ.

ಆರ್ಥಿಕ ಸ್ವಾವಲಂಬನ ಪ್ರಮುಖ್ ಸುಭಾಷ್ ಸೋಮವಾರಪೇಟೆ, ಆರ್ಥಿಕ ಸ್ವಾವಲಂಬನ ಸಹ ಪ್ರಮುಖ್ ಆಗಿ ಚಾಮೆರ ಪ್ರದೀಪ್, ಮಾತೃ ಸುರಕ್ಷಾ ಪ್ರಮುಖ್ ಆಗಿ ಲಕ್ಷಿö್ಮÃ ನಾರಾಯಣ (ನಾಣಿ), ಮಾತೃ ಸುರಕ್ಷಾ ಸಹ ಪ್ರಮುಖ್ ಆಗಿ ಸುನಿಲ್ ಮಾದಾಪುರ, ಹಿಂದೂ ಯುವವಾಹಿನಿ ಪ್ರಮುಖ್ ವಿನಯ್ ಮಡಿಕೇರಿ, ಹಿಂದು ಯುವವಾಹಿನಿ ಸಹ ಪ್ರಮುಖ್ ಆಗಿ ಚೇತನ್ ಕುಶಾಲನಗರ, ಭೂ ಸುರಕ್ಷಾ ಪ್ರಮುಖ್ ಆಗಿ ಎಂ.ಬಿ. ಉಮೇಶ್ ಸೋಮವಾರಪೇಟೆ, ಭೂ ಸುರಕ್ಷಾ ಸಹ ಪ್ರಮುಖ್ ಆಗಿ ಶಾಂತೆಯAಡ ತಿಮ್ಮಯ್ಯ, ಸಂಪರ್ಕ ಪ್ರಮುಖ್ ಆಗಿ ರಾಜೀವ್ ಕುಶಾಲನಗರ, ಸಹ ಸಂಪರ್ಕ ಪ್ರಮುಖ್ ಆಗಿ ಕಮಲ್ ಮಡಿಕೇರಿ, ಮಾಹಿತಿ ಸಂಗ್ರಹಣೆಗೆ ಗಣೇಶ್ ಕೆಎಸ್, ಮಾಹಿತಿ ಸಂಗ್ರಹಣೆ ಸಹ ಪ್ರಮುಖ್ ಆಗಿ ಜೋಯಪ್ಪ ಕಿರುಗೂರು, ನ್ಯಾಯ ಜಾಗರಣಾ ಪ್ರಮುಖ್ ಆಗಿ ಕಪಿಲ್ ಮಡಿಕೇರಿ, ನಿಧಿ ಪ್ರಮುಖ್ ಆಗಿ ಮೇವಡ ಅಯ್ಯಣ್ಣ, ಮಹಿಳಾ ಜಾಗರಣಾ ಪ್ರಮುಖ್ ಆಗಿ ಭವ್ಯ ಚೇರಂಬಾಣೆ, ಮಹಿಳಾ ಜಾಗರಣಾ ಸಹ ಪ್ರಮುಖ್ ಆಗಿ ಪವಿತ್ರ ಸುಂಟಿಕೊಪ್ಪ, ಪ್ರಚಾರ ಪ್ರಮುಖ್ ಆಗಿ ಕುಮಾರ್ ಮೇಕೇರಿ ಇವರುಗಳನ್ನು ನೇಮಕ ಮಾಡಲಾಗಿದೆ.