ಕಣಿವೆ, ಜೂ. ೨೬: ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದ ಸೋಮೇಶ್ವರ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ಕುಶಾಲನಗರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಮೇಧಾಶ್ರೀ (೧೯) ಮೃತ ದುರ್ದೈವಿ.
ಕೊಡ್ಲಿಪೇಟೆ ಮೂಲದ ಅರ್ಚಕ ಸೋಮಶೇಖರ ಶಾಸ್ತಿç ಎಂಬವರ ಪುತ್ರಿಯಾಗಿದ್ದು, ಕುಶಾಲನಗರದ ಸೋಮೇಶ್ವರ ಬಡಾವಣೆಯ ಕಾಳಿಂಗಪ್ಪ ಎಂಬವರಿಗೆ ಸೇರಿದ ಮನೆಯೊಂದರ ಪಿಜಿಯಲ್ಲಿ ಇದ್ದ ಈಕೆ ತಾನಿದ್ದ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.