ಶಿವಸೇನಾ ಬಂಡಾಯ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ
ಮುಂಬೈ, ಜೂ. ೨೬: ಕೇಂದ್ರ ಸರ್ಕಾರವು ಶಿವಸೇನಾದ ೧೫ ಮಂದಿ ಬಂಡಾಯ ಶಾಸಕರಿಗೆ ‘ವೈ+’ ಶ್ರೇಣಿಯ ಸಿಆರ್ಪಿಎಫ್ ಭದ್ರತೆ ಒದಗಿಸಿದೆ. ಮಹಾರಾಷ್ಟçದಲ್ಲಿ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ರಾಜಕೀಯ ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದ ಸಿಎಂ ಉದ್ಧವ್ ಠಾಕ್ರೆ ಶಾಸಕರಿಗೆ ಹಾಗೂ ಅವರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ ರೆಬೆಲ್ ಶಾಸಕರ ಭದ್ರತೆ ಆತಂಕಕ್ಕೀಡಾಗಿತ್ತು. ಠಾಕ್ರೆ ಅವರ ಈ ಕ್ರಮ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ಇದೀಗ ಶಿವಸೇನಾದ ೧೫ ಮಂದಿ ಬಂಡಾಯ ಶಾಸಕರಿಗೆ ‘ವೈ+’ ಶ್ರೇಣಿಯ ಸಿಆರ್ಪಿಎಫ್ ಭದ್ರತೆ ಒದಗಿಸಿದೆ. ಮಹಾರಾಷ್ಟçದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ನೇತೃತ್ವದ ೪೦ಕ್ಕೂ ಹೆಚ್ಚು ಶಾಸಕರ ತಂಡ ಗುವಾಹಟಿಯ ರ್ಯಾಡಿಸನ್ ಬ್ಲೂ ಹೊಟೇಲ್ನಲ್ಲಿ ಬೀಡುಬಿಟ್ಟಿದೆ.
ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ
ಲಖಿAಪುರಖೇರಿ, ಜೂ. ೨೬: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಪ್ರಾಂಶುಪಾಲರೊಬ್ಬರು ಬೂಟಿನಿಂದ ಹೊಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ವೀಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಲಖಿಂಪುರಖೇರಿ ಜಿಲ್ಲೆಯ ಮಹಂಗು ಖೇರಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಶಾಲೆಗೆ ೧೦ ನಿಮಿಷ ತಡವಾಗಿ ಬಂದಿದ್ದಕ್ಕೆ ಪ್ರಾಂಶುಪಾಲ ಶಿಕ್ಷಕಿಗೆ ಬೂಟಿನಿಂದ ಹೊಡೆದಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಶಿಕ್ಷಕಿ ಶಾಲೆಗೆ ತಡವಾಗಿ ಬಂದಿದ್ದರಿAದ ಕುಪಿತಗೊಂಡ ಪ್ರಾಂಶುಪಾಲ ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಶಿಕ್ಷಕಿ ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ನಡೆದಿದ್ದು ನೋಡನೋಡುತ್ತಲೇ ಪ್ರಾಂಶುಪಾಲ ಶೂಗಳಿಂದ ಅವರನ್ನು ಥಳಿಸಿದ್ದಾರೆ. ಈ ಘಟನೆ ಕುರಿತು ಪ್ರಾಂಶಪಾಲರ ಮೇಲೆ ಶಿಕ್ಷಕಿ ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಂಶುಪಾಲರನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ.
ತೈಲ ಸೋರಿಕೆ ಭೀತಿ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ
ಮಂಗಳೂರು, ಜೂ. ೨೬: ಮಂಗಳೂರಿನ ಸಮುದ್ರದಲ್ಲಿ ಸರಕು ಸಾಗಾಣಿಕಾ ಹಡಗೊಂದು ಮುಳುಗಿದ ಪರಿಣಾಮ ತೈಲ ಸೋರಿಕೆ ಭೀತಿ ಎದುರಾಗಿದ್ದು, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರಿನ ಉಚ್ಛಿಲ ಭಟ್ಟಪಾಳಿ ಬಳಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಾಣೆ ಹಡಗಿನಿಂದ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ. ಜೂ. ೨೩ ರಂದು ಸಿರಿಯಾ ದೇಶದ ಎಂಬಿ ಪ್ರಿನ್ಸಸ್ ಮಿರಲ್ ವ್ಯಾಪಾರಿ ಹಡಗು ಮುಳುಗಿತ್ತು. ಹಡಗು ಚೀನಾದಿಂದ ಲೆಬನಾನ್ಗೆ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು. ೮ ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದಾಗ ಹಡಗಿನಲ್ಲಿ ತಾಂತ್ರಿಕ ದೋಷವುಂಟಾಗಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಭಾರತೀಯ ನೌಕಾಪಡೆ ೧೫ ಮಂದಿ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈಗ ಹಡಗಿನಲ್ಲಿ ತೈಲ ಸೋರಿಕೆಯಾಗುವ ಭೀತಿ ಎದುರಾಗಿದ್ದು, ಮೀನುಗಳಿಗೆ ಅಪಾಯವಾಗುವ ಭೀತಿ ಎದುರಾಗಿದೆ. ತೈಲ ಸೋರಿಕೆಯಾಗುವ ಆತಂಕದಿAದ ದಕ್ಷಿಣ ಕನ್ನಡ ಜಿಲ್ಲಾಡಳಿತ ನೌಕಾಪಡೆಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲೂ ಅರಳಿದ ಕಮಲ
ಲಖನೌ/ತ್ರಿಪುರ, ಜೂ. ೨೬: ಉತ್ತರ ಪ್ರದೇಶ ಮತ್ತು ತ್ರಿಪುರ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದಲ್ಲೂ ಕಮಲ ಅರಳಿದ್ದು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ಉತ್ತರ ಪ್ರದೇಶದ ರಾಮ್ಪುರ ಮತ್ತು ಅಜಂಗಢ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ದಿನೇಶ್ಲಾಲ್ ಯಾದವ್ ನಿರಾಹುವಾ ಅವರು ಅಜಂಗಢ ಕ್ಷೇತ್ರದಲ್ಲಿ ೮,೦೦೦ ಮತಗಳಿಂದ ಗೆದ್ದರೆ, ಘನಶ್ಯಾಮ್ ಸಿಂಗ್ ಲೋಧಿ ರಾಂಪುರ ಕ್ಷೇತ್ರವನ್ನು ಹೆಚ್ಚು ಅಂತರದಿAದ ಗೆದ್ದಿದ್ದಾರೆ. ಎರಡೂ ಸ್ಥಾನಗಳು ಅಖಿಲೇಶ್ ಯಾದವ್ ಪಕ್ಷದ ಭದ್ರಕೋಟೆಗಳಾಗಿದ್ದವು. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಅಜಂಗಢ್ ಸ್ಥಾನ ತೆರವಾಗಿದ್ದು, ರಾಂಪುರ ಸ್ಥಾನ ಪಕ್ಷದ ಮುಸ್ಲಿಂ ನಾಯಕ ಅಜಂಖಾನ್ ವಿಧಾನಸೌಧಕ್ಕೆ ಆಯ್ಕೆಯಾದ ನಂತರ ತೆರವಾಗಿತ್ತು. ಎಸ್ಪಿ ವಶದಲ್ಲಿದ್ದ ಈ ೨ ಸ್ಥಾನಗಳಲ್ಲಿ ಈಗ ಕಮಲ ಅರಳಿದೆ.