ವೀರಾಜಪೇಟೆ, ಜೂ. ೨೬: ತಂತ್ರಜ್ಞಾನಗಳು ಕೃಷಿಗೆ ಪೂರಕವಾಗಿವೆ, ಅವುಗಳನ್ನು ಬಳಸಿ ರೈತರು ಸುಧಾರಿತ ಕೃಷಿ ಪದ್ಧತಿಗೆ ಮುಂದಾಗಬೇಕೆAದು ಸಹಾಯಕ ಕೃಷಿ ನಿರ್ದೇಶಕ ಮುತ್ತುರಾಜ್ ಕರೆ ನೀಡಿದರು.

ಪಬ್ಲಿಕ್ ಅಫೇಸೇ ಫೌಂಡೇಶನ್ ಬೆಂಗಳೂರು ಹಾಗೂ ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಕೃಷಿ ತಂತ್ರಜ್ಞಾನ, ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಹಲವು ಸವಾಲುಗಳಿವೆ, ಕೃಷಿಯ ಕಡೆ ಜನರ ಒಲವು ಕಡಿಮೆ ಆಗುತ್ತಿದೆ. ತಂತ್ರಜ್ಞಾನದ ಜೊತೆಗೆ ಕೃಷಿಯನ್ನು ಮಾಡಲು ರೈತರು ಮುಂದಾಗಬೇಕು ಎಂದರು. ಐಸಿಎಆರ್ ಕೊಡಗು ಹಿರಿಯ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸಾಜೂ ಜಾರ್ಜ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಫಿ, ಕರಿಮೆಣಸು ಮತ್ತು ಭತ್ತವನ್ನು ಬೆಳೆಯುತ್ತಾರೆ. ಇಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಾರೆ. ಹಣ್ಣುಗಳಿಂದ ವಿವಿಧ ಉತ್ಪನ್ನ ಗಳನ್ನು ತಯಾರಿಸುತ್ತಾರೆ. ಆದರೆ ಅದರ ಮಾರುಕಟ್ಟೆ ವ್ಯವಸ್ಥೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ತಂತ್ರಜ್ಞಾನ ಮಾರುಕಟ್ಟೆ ವ್ಯವಸ್ಥೆ ಪರಿಹಾರವಾಗಿದೆ ಎಂದರು.

ಮತ್ತೋರ್ವ ಅಥಿತಿಗಳಾದ ಕಾಫಿ ಮಂಡಳಿ ಉಪ ನಿರ್ದೇಶಕಿ ಡಾ. ಶ್ರೀದೇವಿ ಕೆ. ಮಾತನಾಡಿ, ಹೇಗೆ ತಂತ್ರಜ್ಞಾನವನ್ನು ಬಳಸಿ ಮುಂದುವರಿಯುತ್ತೇವೆ ಎಂಬುದು ಬಹಳ ಮುಖ್ಯ ವಿಚಾರವಾಗಿದೆ ಎಂದು ತಿಳಿಸಿದರು.

ಸಂಶೋಧನಾ ಇಂಜಿನಿಯರ್ ಹಾಗೂ ಕೃಷಿಕರಾದ ಶ್ರೀನಿವಾಸ ಪಾಟೀಲ- ಸರ್ವೋದಯ ಸಂಸ್ಥೆಯ ಕನ್ಸಲ್ಟೆಂಟ್ ಅವಿನಾಲಪ್ಪ ಹಟ್ಟಿ-ಹಾಗೂ ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು. ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾಗಿರುವ ರಮೇಶ್ ಬಾಬು ಮೊಬೈಲ್ ತಂತ್ರಜ್ಞಾನ ಬಳಸಿಕೊಂಡು ಸಣ್ಣ ರೈತರು ಕೂಡ ಅಭಿವೃದ್ಧಿ ಹೊಂದಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ ಜನ ‘ಸಮರ್ಥ್ ವೆಬ್ ಪೋರ್ಟಲ್ ‘ಅನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ರೈತರಿಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ ಅದನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು. ಅನ್ನಪೂರ್ಣ, ನಿರ್ದೇಶಕರು ಪಬ್ಲಿಕ್ ಅಫೇರ್ಸ್ ಫೌಂಡೇಶನ್ ಬೆಂಗಳೂರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು, ಹರೀಶ ಎ. ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿಯನ್ನು ಇಂದ್ರ ಪಿ. ವಹಿಸಿದ್ದರು. ತರಬೇತಿಯಲ್ಲಿ ೩೦ ರೈತರು ಭಾಗವಹಿಸಿದ್ದರು. ರೈತರಲ್ಲಿ ಹೆಚ್ಚಿನವರು ಮಹಿಳಾ ರೈತರೇ ಇದ್ದದ್ದು ವಿಶೇಷವಾಗಿತ್ತು.