ವೀರಾಜಪೇಟೆ, ಜೂ. ೨೬: ವೀರಾಜಪೇಟೆಗೆ ನೂತನವಾಗಿ ಪೊಲೀಸ್ ಉಪಅಧೀಕ್ಷಕರಾಗಿ ಆಗಮಿಸಿರುವ ನಿರಂಜನ್ ರಾಜೇ ಅರಸ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು.

ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಮಾತನಾಡಿ, ಸಾರ್ವಜನಿಕರು ಏನಾದರೂ ಪೊಲೀಸ್ ಇಲಾಖೆಗೆ ಸಂಬAಧಿಸಿದAತೆ ಅಹವಾಲುಗಳಿದ್ದಲ್ಲಿ ಹೇಳಿಕೊಳ್ಳಬಹುದು. ನಾವೂ ನಿಮ್ಮ ಸಮಸ್ಯೆಗೆ ಸ್ಪಂದನ ನೀಡಲು ಯತ್ನಿಸುತ್ತೇವೆ ಎಂದರು.

ಆಟೋ ಚಾಲಕರ ಸಂಘದಿAದ ಡಿವೈಎಸ್ಪಿಯವರಿಗೆ ಖಾಸಗಿ ಬಸ್ ನಿಲ್ದಾಣದೊಳಕ್ಕೆ ಆಟೋ ರಿಕ್ಷಾಗಳನ್ನು ತೆಗೆದುಕೊಂಡು ಬರಲು ಅನುಮತಿ ಕೇಳಿ ಮನವಿ ಸಲ್ಲಿಸಿದರು. ಖಾಸಗಿ ಬಸ್ ನಿಲ್ದಾಣ ತುಂಬಾ ಚಿಕ್ಕದಿದ್ದು ಅಲ್ಲಿ ಆಟೋ ರಿಕ್ಷಾಗಳಿಗೆ ಪ್ರವೇಶ ಕಲ್ಪಿಸಿದರೆ ಟ್ರಾಫಿಕ್ ಸಮಸ್ಯೆಯಾಗುತ್ತದೆ. ಆದರಿಂದ ನಿಲ್ದಾಣದೊಳಕ್ಕೆ ತೀರಾ ವಯಸ್ಸಾದವರಿಗೆ, ವಿಶೇಷಚೇತನರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಿಡಲಾಗುತ್ತದೆ ಎಂದರು.

ನಾಗರಿಕರಾದ ರಚನ್ ಮಾತನಾಡಿ, ಬಸ್ ನಿಲ್ದಾಣ ಚೌಕಿಯಿಂದ ಮುಂದೆ ಇರುವುದರಿಂದ ಅಲ್ಲಿಯೆ ಬಸ್ ನಿಲ್ಲಲು ಸೂಚನೆ ಕೊಟ್ಟರೆ ಸಂಚಾರಕ್ಕೆ ಅಡಚಣೆಯಾಗುವುದಿಲ್ಲ ಎಂಬ ಸಲಹೆಕೊಟ್ಟರು. ಪೊಲೀಸರು ಸಲಹೆಯನ್ನು ಸ್ವೀಕರಿಸಿ ಬಸ್ ಶೆಲ್ಟರ್ ಬಳಿಯೇ ಬಸ್ ನಿಲ್ಲಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಪ.ಪಂ. ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ವೀರಾಜಪೇಟೆಯಲ್ಲಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಹಲವು ದರೋಡೆ ಪ್ರಕರಣಗಳು ನಡೆದಿವೆ. ಕಳವು ಪ್ರಕರಣಗಳನ್ನು ಪತ್ತೆ ಮಾಡಬೇಕು ಎಂದರು. ಅಲ್ಲದೇ ಒನ್ ವೇ ಇದ್ದಿದ್ದು ಇದ್ದಕಿದ್ದ ಹಾಗೇ ಟೂ ವೇ ಆಗುತ್ತದೆ. ಈ ದಿಢೀರ್ ಬದಲಾವಣೆಗಳು ಜನರಿಗೆ ಕಿರಿಕಿರಿ ಆಗುತ್ತವೆ ಎಂದರು.

ಇದಕ್ಕೆ ಉತ್ತರ ನೀಡಿದ ವೃತ್ತ ನಿರೀಕ್ಷಕ ಶಿವರುದ್ರಪ್ಪ, ಈ ಬಗ್ಗೆ ಟ್ರೆöÊ ಆಂಡ್ ಎರರ್ ನೋಡಿಯೇ ತೀರ್ಮಾನ ಮಾಡಲಾಗುವುದು ಎಂದರು. ಪತ್ರಕರ್ತ ಅಬ್ದುಲ್ ರೆಹಮಾನ್, ಮಟನ್ ಮಾರುಕಟ್ಟೆ ರಸ್ತೆ ಒನ್ ವೇ ಇರುವ ಎರಡು ಮೂರು ರಸ್ತೆಗಳಲ್ಲಿ ಜನರು ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದರು. ಈ ವಿಚಾರ ಗಮನವಹಿಸುತ್ತೇವೆ ಎಂದರು ಅಲ್ಲದೇ ಸಾರ್ವಜನಿಕರಿಗೂ ಈ ರಸ್ತೆಯಲ್ಲಿ ಸಂಚಾರ ಮಾಡಬಾರದು ಎನ್ನುವ ಜಾಗೃತಿ ಇರಬೇಕು ಎಂದರು.

ವೀರಭದ್ರ ಮಾಸ್ಟರ್ ಇತ್ತೀಚೆಗೆ ಗೋಣಿಕೊಪ್ಪ ಬಳಿಯ ಹಾತೂರು ರಸ್ತೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಕೇವಲ ಎಂಟು ಗÀಂಟೆಗಳ ಅವಧಿಯಲ್ಲಿ ಭೇಧಿಸಿದ ವೀರಾಜಪೇಟೆ ಹಾಗೂ ಗೋಣಿಕೊಪ್ಪ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

ಮಲೆತಿರಿಕೆ ಬೆಟ್ಟ ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರಾದ ಪ್ರಕಾಶ್ ಮಾತನಾಡಿ, ಮಲೆತಿರಿಕೆ ಬೆಟ್ಟದ ವ್ಯೂ ಪಾಯಿಂಟ್ ಬಳಿ ಬರುವ ಯುವಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅಲ್ಲದೇ ದೇವಾಲಯದ ಅರ್ಚಕರಿಗೂ ಹೋಗಿ ತೊಂದರೆ ಕೊಡುತ್ತಾರೆ. ಬೆಟ್ಟದ ಪಾವಿತ್ರ‍್ಯಕ್ಕೂ ಧಕ್ಕೆ ತರುತ್ತಿದ್ದಾರೆ ಇದರ ಬಗ್ಗೆ ಬೀಟ್ ಪೊಲೀಸರು ಗಮನ ಹರಿಸಬೇಕು ಎಂದು ಕೇಳಿಕೊಂಡರು.

ಆರ್ಜಿ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಅವರು ಖಂಡಮಕ್ಕಿ ರಸ್ತೆ, ಕಾವೇರಿ ಕಾಲೇಜು ರಸ್ತೆಯ ತಿರುವಿನಲ್ಲಿ ಯುವಕರು ಸಂಜೆ ವೇಳೆ ಅನೈತಿಕ ಚಟುವಟಿಕೆ ನಡೆಸುವ ಬಗ್ಗೆ ಪೊಲೀಸರು ಅಗತ್ಯ ಕ್ರಮ ವಹಿಸುವಂತೆ ಹೇಳಿದರು.

ದಸಂಸ ಸಂಘಟನೆಯ ಪ್ರಮುಖ ವೀರಾಜಪೇಟೆಯಲ್ಲಿ ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ತೊಂದರೆ ಕೊಡುವವರನ್ನು ನಿಯಂತ್ರಿಸಲು ಒತ್ತಾಯಿಸಿದರು. ವೃತ್ತ ನಿರೀಕ್ಷಕ ಶಿವರುದ್ರಪ್ಪ ಪೊಲೀಸ್ ಇಲಾಖೆ ಅಗತ್ಯ ಕರ್ತವ್ಯಗಳನ್ನು ನಿರ್ವಹಣೆ ಮಾಡುತ್ತಿದ್ದೆ. ಸಾರ್ವಜನಿಕರು ಹೇಳಿರುವ ಕುಂದು ಕೊರತೆಗಳನ್ನು ಪರಿಶೀಲಿಸಿ ಅನುಕೂಲವಾಗುವ ಸೇವೆಯನ್ನು ನೀಡುತ್ತೇವೆ ಎಂದರು.

ಸಭೆಯಲ್ಲಿ ಸಾರ್ವಜನಿಕರು, ಸಂಘಟನೆಯ ಪ್ರಮುಖರು, ಪ.ಪಂ. ಸದಸ್ಯರುಗಳು, ಸಿಬ್ಬಂದಿಗಳು ಹಾಜರಿದ್ದರು.