*ಗೋಣಿಕೊಪ್ಪ, ಜೂ. ೨೫: ೯೫ ಲಕ್ಷ ಅನುದಾನದಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಣಚ್ಚಿರ ಕಾಶಿ ಕಾರ್ಯಪ್ಪ ರಸ್ತೆ ಮೂಲಕ ಪಾಲದಳ ತಟ್ಟೆಕೆರೆ ಕಾಲೋನಿಗೆ ಸಂಪರ್ಕ ಬೆಸೆಯುವ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿಪೂಜೆ ನೆರವೇರಿಸಿದರು.

ಕಾಶಿ ಕಾರ್ಯಪ್ಪ ರಸ್ತೆ ಮಾರ್ಗದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿ ಕಾವೇರಿ ನೀರಾವರಿ ನಿಗಮದÀ ಅನುದಾನದಿಂದ ೧೩೫೦ ಮೀ. ಉದ್ದ ಮತ್ತು ೩ ಮೀ ಅಗಲದಲ್ಲಿ ಗಿರಿಜನ ಕಾಲೋನಿಗಳ ಸಂಪರ್ಕದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಕಾಲೋನಿಗಳ ಅಭಿವೃದ್ಧಿ ಮತ್ತು ಕಾಲೋನಿಗಳ ಸಂಪರ್ಕ ಬೆಸೆಯುವ ರಸ್ತೆಗಳ ಅಭಿವೃದ್ಧಿಯು ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ಇಲಾಖೆಯ ವತಿಯಿಂದ ಅನುದಾನವನ್ನು ಒದಗಿಸಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಂದಾಗ ಆಕ್ಷೇಪ ವ್ಯಕ್ತಪಡಿಸದೇ ಒಂದಷ್ಟು ಸ್ಥಳಗಳನ್ನು ತೋಟದ ಮಾಲೀಕರು ನೀಡಿ ಸಹಕಾರದ ಮನೋಭಾವ ವ್ಯಕ್ತಪಡಿಸಬೇಕಾಗಿದೆ. ಇದರಿಂದ ಸ್ಥಳೀಯ ಗ್ರಾಮದ ಅಭಿವೃದ್ಧಿಯು ಸಾಧ್ಯವಾಗಲಿದೆ ಎಂದರು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು, ಸದಸ್ಯರಾದ ಕಾಟಿಮಾಡ ಶರೀನ್‌ಮುತ್ತಣ್ಣ, ಅಳಮೇಂಗಡ ಆರ್. ಪವಿತಾ ವಿಜಯಲಕ್ಷಿ÷್ಮ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಅಕ್ರಮ ಸಕ್ರಮ ತಾಲೂಕು ಸಮಿತಿ ಸದಸ್ಯ ಮಾಪಂಗಡ ಯಮುನಾಚಂಗಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ರಸ್ತೆ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ತಾಣಚ್ಚಿರ ಲೆಹರ್‌ಬಿದ್ದಪ್ಪ, ಲೋಕೇಶ್ ಕುಟ್ಟಪ್ಪ ಸಹೋದರರು, ಗ್ರಾಮದ ಪ್ರಮುಖರುಗಳಾದ ಅಳಮೇಂಗಡ ಬಿದ್ದಪ್ಪ, ದೇವಯ್ಯ, ಮುಕ್ಕಾಟೀರ ಗಣೇಶ್ ಮತ್ತು ಗ್ರಾ.ಪಂ. ಸದಸ್ಯರುಗಳು ಇದ್ದರು.