ಪೊನ್ನಂಪೇಟೆ, ಜೂ.೨೪: ಕರಾಟೆ ಇಂಡಿಯಾ ಆರ್ಗನೈಜೇಷನ್ ವತಿಯಿಂದ ನಡೆದ ರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡ ಮೂರು ಚಿನ್ನದ ಪದಕ ಸೇರಿದಂತೆ ಒಟ್ಟು ೮ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಮಹಾರಾಷ್ಟçದ ಪುಣೆಯಲ್ಲಿ ೪ ದಿನಗಳ ಕಾಲ ನಡೆದ ಪುರುಷ ಮತ್ತು ಮಹಿಳೆಯರ ಜೂನಿಯರ್ ಮತ್ತು ಸೀನಿಯರ್ ಮಟ್ಟದ ರಾಷ್ಟಿçÃಯ ಕರಾಟೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶರತ್ ಕುಮಾರ್ ನೇತೃತ್ವದ ತಂಡ ಈ ಸಾಧನೆಗೈದಿದ್ದು, ೩ ಚಿನ್ನ, ೩ ಬೆಳ್ಳಿ ಹಾಗೂ ೨ ಕಂಚಿನ ಪೊನ್ನಂಪೇಟೆ, ಜೂ.೨೪: ಕರಾಟೆ ಇಂಡಿಯಾ ಆರ್ಗನೈಜೇಷನ್ ವತಿಯಿಂದ ನಡೆದ ರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡ ಮೂರು ಚಿನ್ನದ ಪದಕ ಸೇರಿದಂತೆ ಒಟ್ಟು ೮ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಮಹಾರಾಷ್ಟçದ ಪುಣೆಯಲ್ಲಿ ೪ ದಿನಗಳ ಕಾಲ ನಡೆದ ಪುರುಷ ಮತ್ತು ಮಹಿಳೆಯರ ಜೂನಿಯರ್ ಮತ್ತು ಸೀನಿಯರ್ ಮಟ್ಟದ ರಾಷ್ಟಿçÃಯ ಕರಾಟೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶರತ್ ಕುಮಾರ್ ನೇತೃತ್ವದ ತಂಡ ಈ ಸಾಧನೆಗೈದಿದ್ದು, ೩ ಚಿನ್ನ, ೩ ಬೆಳ್ಳಿ ಹಾಗೂ ೨ ಕಂಚಿನ ಅಸ್ಸಾಂ ರೈಫಲ್ಸ್, ಐಟಿಬಿಪಿ, ಸೇನಾ ಪೊಲೀಸ್, ಸಿ.ಆರ್.ಪಿ.ಎಫ್. ತಂಡಗಳು ಈ ರಾಷ್ಟಿçÃಯ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದವು.
ಪ್ರಸಾದ್, ಶ್ರೀಧರ್, ಅಣ್ಣಪ್ಪ ಮರ್ಕಲ್ ಮತ್ತು ಥಾಮಸ್ ಕರ್ನಾಟಕ ತಂಡದ ತರಬೇತುದಾರರಾಗಿ ಪಾಲ್ಗೊಂಡಿದ್ದರು. ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ತೀರ್ಪುಗಾರರ ಮಂಡಳಿಯ ಸದಸ್ಯರಾದ ಜೋಸ್, ಶಿವದಾಸ್, ಶಂಕರ್, ಸೋಮಣ್ಣ ಮತ್ತು ಕೃಷ್ಣ ರಾಷ್ಟಿçÃಯ ಚಾಂಪಿಯನ್ಶಿಪ್ನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು ಎಂದು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆ. ಭಾರ್ಗವ ರೆಡ್ಡಿ ತಿಳಿಸಿದ್ದಾರೆ.
ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರು, ಕರಾಟೆ ಇಂಡಿಯಾ ಆರ್ಗನೈಜೇಷನ್ನ ಹಿರಿಯ ಉಪಾಧ್ಯಕ್ಷರೂ ಆಗಿರುವ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ, ಮಾಜಿ ಶಾಸಕ ಸಿ.ಎಸ್. ಅರುಣ್ ಮಾಚಯ್ಯ ಅವರ ಸಂಪೂರ್ಣ ಮೇಲುಸ್ತುವಾರಿಯಲ್ಲಿ ನಡೆದ ರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್ ಕರ್ನಾಟಕ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಯಿತು ಎಂದು ಭಾರ್ಗವ ರೆಡ್ಡಿ ಅವರು ತಿಳಿಸಿದ್ದಾರೆ.
ಕರ್ನಾಟಕ ತಂಡದ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು, ರಾಷ್ಟಿçÃಯ ಚಾಂಪಿಯನ್ಶಿಪ್ಗಾಗಿ ಕರ್ನಾಟಕವು ನಡೆಸಿದ ಹಲವು ತಿಂಗಳ ನಿರಂತರ ಪರಿಶ್ರಮ ಫಲ ನೀಡಿದೆ. ಎಂದಿನAತೆ ಕರ್ನಾಟಕ ತಂಡ ತನ್ನ ಘನತೆಯನ್ನು ರಾಷ್ಟçಮಟ್ಟದಲ್ಲಿ ಮೆರೆದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.