ಮಡಿಕೇರಿ, ಜೂ.೨೫: ಪ್ರತಿಷ್ಠಿತ ಕೊಡವ ಸಮಾಜಗಳಲ್ಲಿ ಒಂದಾಗಿರುವ ಬೆಂಗಳೂರು ಹಾಗೂ ವೀರಾಜಪೇಟೆ ಕೊಡವ ಸಮಾಜಗಳಿಗೆ ತಾ. ೨೬ರಂದು (ಇಂದು) ಚುನಾವಣೆ ನಡೆಯಲಿದೆ.
ಎರಡು ಸಮಾಜಗಳಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿದೆ. ಬೆಂಗಳೂರು ಸಮಾಜದ ಆಡಳಿತ ಮಂಡಳಿಗೆ ಎರಡು ಗುಂಪುಗಳು ನೇರ ಸ್ಪರ್ಧೆಯಲ್ಲಿದ್ದು ಬೆಂಗಳೂರಿನಲ್ಲಿರುವ ಸಮಾಜದ ಸದಸ್ಯರು ಜನಾಂಗದವರು ಮಾತ್ರವಲ್ಲದೆ ಕೊಡಗಿನವರ ಗಮನವನ್ನೂ ಸೆಳೆದಿದೆ. ಬೆಂಗಳೂರಿನಲ್ಲಿ ಸುಮಾರು ೧೩ ಸಾವಿರ ಮತದಾರರಿದ್ದಾರೆ. ಎರಡು ಪ್ರಬಲ ಗುಂಪುಗಳ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯ ಬಗ್ಗೆ ಭಾರೀ ಪ್ರಚಾರ ನಡೆದಿದೆ. ಕರವಟ್ಟಿರ ಪೆಮ್ಮಯ್ಯ ಹಾಗೂ ಚೆನ್ನಪಂಡ ಸುಬ್ಬಯ್ಯ ನೇತೃತ್ವದ ಬಣಗಳು ಕಣದಲ್ಲಿವೆ.
ವೀರಾಜಪೇಟೆ
ವೀರಾಜಪೇಟೆ ಕೊಡವ ಸಮಾಜದಲ್ಲೂ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು ಈ ಚುನಾವಣೆ ವಿಚಾರ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಅಧ್ಯಕ್ಷ ಸ್ಥಾನಾಕಾಂಕ್ಷಿಯಾಗಿದ್ದ ನೆಲ್ಲಮಕ್ಕಡ ಪಿ. ಮುತ್ತಣ್ಣ (ಉಮೇಶ್) ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವರು ಚುನಾವಣೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಚುನಾವಣೆ ಗೊಂದಲದಲ್ಲಿತ್ತು. ಇದೀಗ ತಾ. ೨೪ರಂದು ಈ ಅರ್ಜಿ ತಿರಸ್ಕೃತಗೊಂಡಿದ್ದು ತಾ. ೨೬ರಂದು (ಇಂದು) ನಿಗದಿಯಂತೆ ಚುನಾವಣೆ ನಡೆಯಲಿದೆ. ಸ್ಪರ್ಧಿಗಳಿಗೆ ಪ್ರಚಾರಕ್ಕೆ ಕೊನೆಯ ಹಂತದಲ್ಲಿ ಗೊಂದಲ ನಿವಾರಣೆಯಾಗಿದ್ದು ತುಸು ಕ್ಲಿಷ್ಟಕರವಾಗಿದ್ದು ಇದೀಗ ಬಿರುಸು ಪಡೆದಿದೆ.
ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕುಂಬೇರ ಮನುಕುಮಾರ್, ಅಮ್ಮುಣಿಚಂಡ ರವಿ ಉತ್ತಪ್ಪ, ಚೆಂಬಾAಡ ಕರುಣ್ ಕಾಳಯ್ಯ ಕಣದಲ್ಲಿದ್ದಾರೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಮಾಳೇಟಿರ ಶ್ರೀನಿವಾಸ್ ಹಾಗೂ ಕನ್ನಂಬಿರ ಡಿ. ಚಿಣ್ಣಪ್ಪ,
(ಮೊದಲ ಪುಟದಿಂದ) ಮರಣನಿಧಿ ಕಾರ್ಯದರ್ಶಿ ಸ್ಥಾನಕ್ಕೆ ಮಾದೆಯಂಡ ಸಂಪಿ ಪೂಣಚ್ಚ ಮತ್ತು ಪಟ್ಟಡ ಸಿ. ಸುಬ್ಬಯ್ಯ, ಆಟೋಟ ಕಾರ್ಯದರ್ಶಿ ಸ್ಥಾನಕ್ಕೆ ಮಾದಂಡ ಪಿ. ತಿಮ್ಮಯ್ಯ ಹಾಗೂ ಅಮ್ಮುಣಿಚಂಡ ಸುಬ್ರಮಣಿ ಕಣದಲ್ಲಿದ್ದಾರೆ.
ಮಹಿಳಾ ನಿರ್ದೇಶಕಿಯರ ಸ್ಥಾನಕ್ಕೆ ಮುಲ್ಲೇಂಗಡ ಶೀಲಾ ಅಪ್ಪಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಮೇರಿಯಂಡ ಗಾಯತ್ರಿ ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು ೨೦೪೦ ಮಂದಿ ಮತದಾರರಾಗಿದ್ದಾರೆ.
ಅವಿರೋಧ ಆಯ್ಕೆ
ಸಮಾಜದ ಉಪಾಧ್ಯಕ್ಷರಾಗಿ ಕುಯಿಮಂಡ ಜೆ. ಕಿರಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಬಾಚಿರ ಜಿ. ಜಗದೀಶ್, ಕೂತಂಡ ಸಚಿನ್ ಕುಟ್ಟಯ್ಯ, ಪಟ್ಟಡ ಸಿ. ರಾಮಚಂದ್ರ, ಅಂಜಪರವAಡ ಅನಿಲ್ ಮಂದಣ್ಣ, ಪುಲಿಯಂಡ ಎ. ಪೊನ್ನಣ್ನ, ಚೇಮಿರ ಅರ್ಜುನ್, ತಾತಂಡ ಕಬೀರ್ ಗಣಪತಿ, ಚೋತಂಡ ಪುಷ್ಪಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.