ಸಿದ್ದಾಪುರ, ಜೂ.೨೫: ಹುಲಿಯನ್ನು ಸೆರೆ ಹಿಡಿಯಲು ಸಿದ್ಧತೆ ನಡೆಸುತ್ತಿರುವ ಹುಲಿ ಕಾರ್ಯಾಚರಣೆ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಹಾಡಹಗಲೇ ಹುಲಿ ಗಬ್ಬದÀ ಹಸುವೊಂದರ ಮೇಲೆ ಧಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿಯಲ್ಲಿ ನಡೆದಿದೆ. ಕಳೆದೆರಡು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಹುಲಿಯ ಚಲನ-ವಲನವನ್ನು ಕಂಡು ಹಿಡಿಯಲು ಕಾಫಿ ತೋಟದ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಬೃಹತ್ ಗಾತ್ರದ ಹುಲಿಯ ಚಿತ್ರ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಳೆದೆರಡು ದಿನಗಳಿಂದ ಕೂಂಬಿAಗ್ ನಡೆಸುತ್ತಿದ್ದಾರೆ. ಈ ನಡುವೆ ಮಾರ್ಗೊಲ್ಲಿಯ ಹಳೆಯ ಶಾಲೆಯ ಸಮೀಪದಲ್ಲಿ ಹಾಡಹಗಲೇ ಮೇಯಲು ಬಿಟ್ಟಿದ್ದ ಗಬ್ಬದ ಹಸುವಿನ ಮೇಲೆ ದನ ಮೇಯಿಸುತ್ತಿದ್ದ ಕಾರ್ಮಿಕನ ಎದುರÀಲ್ಲೇ ಹುಲಿಯು ಧಾಳಿ ನಡೆಸಿ ಸಾಯಿಸಿರುವುದು ಆತಂಕ ಸೃಷ್ಟಿಸಿದೆ.

ಮಾರ್ಗೊಲ್ಲಿ ಕಾಫಿ ತೋಟದ ಚಾಲಕರಾದ ಪೂವಪ್ಪ ಎಂಬವರಿಗೆ ಸೇರಿದ ಗಬ್ಬದ ಹಸು ಹಾಗೂ ಅಲ್ಲಿನ ಸಿಬ್ಬಂದಿಯ

(ಮೊದಲ ಪುಟದಿಂದ) ಮತ್ತೊಂದು ಜಾನುವಾರನ್ನು ದನ ಕಾಯುವ ಕಾರ್ಮಿಕ ಸಾರಲಿ ಶೇಕ್ ಎಂಬಾತÀ ಎಂದಿನAತೆ ಮಾರ್ಗೊಲ್ಲಿ ಹಳೆಯ ಶಾಲೆಯ ಬಳಿ ಇರುವ ಗದ್ದೆಗೆ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ. ಶನಿವಾರದಂದು ಜಾನುವಾರುಗಳನ್ನು ಗದ್ದೆಯಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಗದ್ದೆಯ ಸಮೀಪದಲ್ಲಿದ್ದ ಪೊದೆಯೊಂದರಿAದ ಹಠಾತ್ತನೆ ಮಧ್ಯಾಹ್ನ ಅಂದಾಜು ೧೨.೩೦ ರ ಸಮಯಕ್ಕೆ ಹುಲಿಯೊಂದು ದನ ಕಾಯುವ ಕಾರ್ಮಿಕನ ಎದುರೇ ಗಬ್ಬದ ಹಸುವಿನ ಮೇಲೆ ಧಾಳಿ ನಡೆಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕಾರ್ಮಿಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ದನ ಮೇಯಿಸುತ್ತಿದ್ದ ಸಾರಲಿ ಶೇಕ್ ಭಯಗೊಂಡು ಕಿರುಚಿದ್ದು, ಈತನ ಬೊಬ್ಬೆ ಕೇಳಿದ ಸ್ಥಳೀಯ ಕಾರ್ಮಿಕರು ಬರುವಷ್ಟರಲ್ಲಿ ಹುಲಿಯು ಪರಾರಿಯಾಗಿದೆ. ಹಾಡುಹಗಲೇ ಹುಲಿ ಧಾಳಿ ನಡೆಸಿ ಸಾಯಿಸಿರುವ ಘಟನೆಯ ಬಗ್ಗೆ ತಿಳಿದು ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.

ಹುಲಿ ಸೆರೆಗೆ ಸಜ್ಜು: ಬಾಡಗ ಬಾಣಂಗಾಲ ಗ್ರಾಮದ ಟಾಟಾ ಕಂಪೆನಿಗೆ ಸೇರಿದ ಮಾರ್ಗೊಲ್ಲಿ ಕಾಫಿ ತೋಟದ ಒಳಗೆ ಅರಣ್ಯ ಇಲಾಖೆಯ ವತಿಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಬೃಹತ್ ಗಾತ್ರದ ಹುಲಿಯ ಚಲನ-ವಲನ ಸೆರೆಯಾಗಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹುಲಿಯು ಕಾಡು ದನವನ್ನು ಕೊಂದಿದ್ದ ಸ್ಥಳದ ಬಳಿ ವೀಕ್ಷಣ ಗೋಪುರ ನಿರ್ಮಿಸಲಾಗಿದೆ. ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಮಳೆಯ ನಡುವೆ ಕಾಫಿ ತೋಟದ ಒಳಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಪ್ಪತ್ತೆöÊದಕ್ಕೂ ಅಧಿಕ ಮಂದಿ ಶನಿವಾರದಂದು ಬೆಳಗ್ಗಿನಿಂದಲೇ ಮಾಲ್ದಾರೆ ವ್ಯಾಪ್ತಿಯ ಬಾಡಗ ಬಾಣಂಗಾಲ, ಮಾರ್ಗೊಲ್ಲಿ ಹಾಗೂ ಬಿಬಿಟಿಸಿ ಸಂಸ್ಥೆಗೆ ಸೇರಿದ ಕಾಫಿ ತೋಟದ ಒಳಗೆ ಹುಡುಕಾಡಿದ್ದಾರೆ. ಅಲ್ಲದೇ ಹುಲಿಯನ್ನು ಸೆರೆ ಹಿಡಿಯಲು ಕಾಫಿ ತೋಟದ ಒಳಗೆ ಮೂರು ಬೋನ್‌ಗಳನ್ನು ಇರಿಸಲಾಗಿದ್ದು, ಬೋನ್‌ಗಳ ಒಳಗೆ ಹಂದಿಗಳನ್ನು ಇಡಲಾಗಿದೆ. ಅಲ್ಲದೇ ಬೋನ್‌ಗಳನ್ನು ಸೊಪ್ಪುಗಳಿಂದ ಮುಚ್ಚಿಟ್ಟು ಹುಲಿಯ ಸೆರೆಗೆ ತಂತ್ರ ರೂಪಿಸಿದ್ದಾರೆ.

ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸುತ್ತಿರುವ ಸಂದರ್ಭದಲ್ಲೇ ಹುಲಿಯು ಕಾರ್ಯಾಚರಣೆ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಮಾರ್ಗ ಬದಲಾಯಿಸಿ ಜಾನುವಾರನ್ನು ಸಾಯಿಸಿದೆ. ಹುಲಿಯ ಚಲನವಲನ ಕಂಡು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಬಾಡಗ ಬಾಣಂಗಾಲ ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಇದರಿಂದಾಗಿ ಹುಲಿಯ ಕಾರ್ಯಾಚರಣೆಗೆ ಕಾಡಾನೆಗಳ ಉಪಟಳದಿಂದ ಅಡಚಣೆ ಉಂಟಾಗುತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರವಳಿಕೆ ಔಷಧಿಗಳನ್ನು ತರಿಸಲಾಗಿದೆ. ಅಲ್ಲದೇ ಎಲ್ಲಾ ಸಿದ್ಧತೆಗಳನ್ನು ಅರಣ್ಯ ಅಧಿಕಾರಿಗಳು ಕೈಗೊಂಡಿದ್ದಾರೆ. ಕಾರ್ಯಾ ಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ಡಿಸಿಎಫ್ ಚಕ್ರಪಾಣಿ, ಎಸಿಎಫ್ ಉತ್ತಪ್ಪ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ್, ಕನ್ನಂಡ ರಂಜಿತ್, ಮೈಸೂರಿನ ಮೃಗಾಲಯದ ಡಾ. ಪ್ರಶಾಂತ್, ಕುಶಾಲನಗರದ ಡಾ.ಚಿಟ್ಟಿಯಪ್ಪ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಶನಿವಾರದಂದು ಹುಲಿ ಧಾಳಿ ನಡೆಸಿ ಹಸುವನ್ನು ಸಾಯಿಸಿದ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

-ಎ.ಎನ್.ವಾಸು