ಮಡಿಕೇರಿ, ಜೂ. ೨೫: ಸುಮಾರು ೧೫ ದಿನಗಳಿಂದ ಆಕಾಶವಾಣಿಯಲ್ಲಿ ಹಾಗೂ ‘ಶಕ್ತಿ’ಯಲ್ಲಿ ಬ್ರೆöÊನರ್ ಎಂಬ ನಾಯಿ ಕಾಣೆಯಾಗಿರುವ ಸುದ್ದಿಯನ್ನು ಹೆಚ್ಚಿನವರು ಕೇಳಿರಬಹುದು, ಓದಿರಬಹುದು. ಈ ಬ್ರೆöÊನರ್ ಸುಮಾರು ೧೪ ದಿನಗಳಿಂದ ಕಾಣೆಯಾಗಿದ್ದು, ಇವನ ಸಾಕಿ ಸಲಹಿದವರು ಕಂಗಾಲಾಗಿದ್ದಾರಲ್ಲದೆ, ಪ್ರತಿನಿತ್ಯ ಅವನಿಗೋಸ್ಕರ ಹುಡುಕಾಡುತ್ತಿದ್ದಾರೆ. ಬ್ರೆöÊನರ್ನನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿದ್ದಾರೆ. ಜಾಹೀರಾತುಗಳನ್ನು ಓದುವಾಗ ಬ್ರೆöÊನರ್ನ ಹಾಗೂ ಅದರ ಮಾಲೀಕನ ಕಥೆ ಏನಾಗಿರಬಹುದು...? ಛೇ ಇನ್ನೂ ಕೂಡ ಬ್ರೆöÊನರ್ ಮನೆ ತಲುಪಲಿಲ್ಲವೆ...? ಎಂದೆಲ್ಲಾ ಭಾವನೆಗಳು ನಾಯಿ ಪ್ರೇಮಿಗಳಲ್ಲಿ ಮೂಡಿರಬಹುದು. ನಟ ರಕ್ಷಿತ್ ಶೆಟ್ಟಿಯ ಚಾರ್ಲಿಯಂತೆ, ಕೊಡಗಿನ ರೋಹಿತ್ ಅಯ್ಯಪ್ಪನವರ ಬ್ರೆöÊನರ್ ಕೂಡ...
ಮೂಲತಃ ಕೊಡಗಿನವರಾದ ರೋಹಿತ್ ಅಯ್ಯಪ್ಪ,
(ಮೊದಲ ಪುಟದಿಂದ) ಬೆಂಗಳೂರಿನಲ್ಲಿ ತಮ್ಮ ಅಮ್ಮನೊಂದಿಗೆ ವಾಸವಿದ್ದಾರೆ. ಬೆಂಗಳೂರಿನ ಇವರ ಮನೆಯಲ್ಲಿ ಬ್ರೆöÊನರ್ ಅಲ್ಲದೆ ಇನ್ನೂ ನಾಲ್ಕು ಸಾಕುನಾಯಿಗಳು ಹಾಗೂ ಬೆಕ್ಕುಗಳು ಅಮ್ಮ-ಮಗನೊಂದಿಗೆ ವಾಸವಿವೆೆ. ಅಮ್ಮ-ಮಗ ಎಲ್ಲಾದರೂ ಹೊರಗಿನ ಊರುಗಳಿಗೆ ಹೋಗುವ ಸಂದರ್ಭ ತಮ್ಮ ಮನೆಯ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಆರೈಕೆದಾರರನ್ನು ನೇಮಿಸುತ್ತಾರೆ.
ಆದರೆ, ಬ್ರೆöÊನರ್ ಮಾತ್ರ ಎಲ್ಲರಿಗಿಂತ ವಿಭಿನ್ನ... ಮನೆಯಲ್ಲಿ ಅಯ್ಯಪ್ಪ ಅಥವಾ ಅವರ ತಾಯಿ ಇಲ್ಲದಿದ್ದರೆ, ಜೋರಾಗಿ ಕೂಗಲಾರಂಭಿಸುತ್ತಾನೆ... ಅವರಿಬ್ಬರನ್ನು ಒಂದು ಗಂಟೆಯ ಕಾಲವೂ ನೋಡದೆ ಇರುವವನಲ್ಲ - ಕಂದು ಬಣ್ಣದ ಬ್ರೆöÊನರ್.
ಬ್ರೆöÊನರ್ ಬಹಳ ಬುದ್ಧಿವಂತನAತೆ. ದಿನಕ್ಕೆ ೪-೫ ಬಾರಿ ವಾಕಿಂಗ್ ಹೋಗುವದು ಅವನ ಹವ್ಯಾಸ. ಸಮಯಕ್ಕೆ ಸರಿಯಾಗಿ ಅವನನ್ನು ವಾಕಿಂಗ್ ಕರೆದುಕೊಂಡು ಹೋಗದಿದ್ದರೆ, ಅಥವಾ ಅವನಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡದಿದ್ದರೆ ತಕ್ಷಣ ತನ್ನ ಕೂಗಿನಿಂದ ಅವನು ಮನೆಯವರನ್ನು ಎಚ್ಚರಿಸುತ್ತಾನೆ. ಇನ್ನು, ವಾಕಿಂಗ್ ತೆರಳಿದ ಸಂದರ್ಭ ಬೇರೆ ಯಾವದಾದರು ನಾಯಿ ಅಪಾಯದಲ್ಲಿದ್ದಲ್ಲಿ, ಅವುಗಳನ್ನು ಬ್ರೆöÊನರ್ ರಕ್ಷಿಸುತ್ತಾನೆ. ಹೀಗೆ, ಬ್ರೆöÊನರ್ ತುಂಬಾ ಸಾಹಸ ಪ್ರಿಯ, ಪ್ರಯಾಣಿಕ ನಾಯಿ. ಬ್ರೆöÊನರ್ನಿಗೆ ಕಾಡು, ನಾಡು, ಹೊಳೆ, ಬೆಟ್ಟ, ಸಮುದ್ರ... ಎಲ್ಲವೂ ಪ್ರಿಯವಾದುದು. ಇವನ ಮಾಲೀಕ ಅಯ್ಯಪ್ಪನೊಂದಿಗೆ ಅನೇಕ ಕಡೆ ಸುತ್ತಾಡಿದ್ದಾನಲ್ಲದೆ ಗೋವಾದ ‘ಬೀಚ್’ಗಳಲ್ಲಿ ಸಹ ವಿಶ್ರಾಂತಿಸಿದ್ದಾನೆ.
ಜೂನ್ ೧೨ ರಂದು, ಅಯ್ಯಪ್ಪ ಹಾಗೂ ಅವರ ತಾಯಿ ಅಮ್ಮತ್ತಿಯ ಸಮೀಪ ಒಂದು ಮದುವೆ ಕಾರ್ಯಕ್ರಮಕ್ಕೆಂದು ಕೊಡಗಿಗೆ ಆಗಮಿಸಿದ ಸಂದರ್ಭ ಬ್ರೆöÊನರ್ನನ್ನೂ ಜೊತೆಗೆ ಕರೆತಂದಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭ, ಬ್ರೆöÊನರ್ ಬಿಳುಗುಂದದಲ್ಲಿ ಅಯ್ಯಪ್ಪರವರ ಸಂಬAಧಿಕರ ಮನೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದಾನೆ. ಸುಮಾರು ೧೪ ದಿನಗಳಿಂದ ಬ್ರೆöÊನರ್ಗೋಸ್ಕರ ಅವನ ಮನೆಯವರು ಎಲ್ಲೆಲ್ಲೂ ಹುಡುಕಾಡುತ್ತಿದ್ದಾರಲ್ಲದೆ, ಅವನನ್ನು ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ ೭ ರಿಂದ ರಾತ್ರಿ ೧೧ರ ತನಕ ಬ್ರೆöÊನರ್ಗೋಸ್ಕರ ಅಯ್ಯಪ್ಪ ಬಿಳುಗುಂದ, ಕಾವಾಡಿ, ಕಾರ್ಮಾಡು, ಐಮಂಗಲ, ಅಮ್ಮತ್ತಿ, ವೀರಾಜಪೇಟೆ... ಹೀಗೆ ಬಿಳುಗುಂದದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡುತ್ತಿದ್ದಾರೆ. ಅನೇಕರಿಗೆ ನಾಯಿ-ಮಾನವನ ಸಂಬAಧ ಅರ್ಥವಾಗದಿದ್ದರೂ, ಪ್ರಾಣಿಪ್ರಿಯರಿಗೆ ಅಯ್ಯಪ್ಪ ಹಾಗೂ ಬ್ರೆöÊನರ್ನ ಕಥೆ ಭಾವನಾತ್ಮಕವೆಂದನಿಸುತ್ತದೆ. ಯಾರಾದರೂ ಬ್ರೆöÊನರ್ನ್ನು ಕಂಡಲ್ಲಿ ಅಥವಾ ಕಟ್ಟಿಹಾಕಿದ್ದಲ್ಲಿ ಅವನನ್ನು ಅಯ್ಯಪ್ಪನವರಿಗೆ ಹಿಂದಿರುಗಿಸಿ... ಬರೀ ಚಲನಚಿತ್ರಗಳಲ್ಲಿ ಅಲ್ಲ, ನಿಜ ಬದುಕಲ್ಲೂ ‘ಹ್ಯಾಪಿ ಎಂಡಿAಗ್’ ಇರಲಿ...
ಬ್ರೆöÊನರ್ನ ಮಾಹಿತಿ ಇದ್ದಲ್ಲಿ ಸಂಪರ್ಕಿಸಿ: ೯೦೦೮೨೫೭೫೧೪; ೯೭೩೧೯೦೫೬೨೦. -ಪ್ರಜ್ಞಾ