ಮಡಿಕೇರಿ, ಜೂ. ೨೩ : ಬೆಂಗಳೂರಿನ ನೆಹರು ತಾರಾಲಯದ ವತಿಯಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರೋತ್ಸಾಹಕ ಸೊಸೈಟಿಯ ಸಹಯೋಗ ಹಾಗೂ ಮೈಸೂರು ಸೈನ್ಸ್ ಫೌಂಡೇಶನ್‌ನ ಸಹಕಾರದೊಂದಿಗೆ ಸುವರ್ಣ ಅಮೃತ ಮಹೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜುಲೈ ೨೩ ರಂದು ಆನ್‌ಲೈನ್ ಮೂಲಕ ರಾಜ್ಯಮಟ್ಟದ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

ನಾಲ್ಕು ಹಂತಗಳಲ್ಲಿ ನಡೆಯುವ ರಸ ಸ್ಪರ್ಧೆಗೆ ಮುನ್ನ ತಾ. ೨೬ ರಂದು ಸ್ಪರ್ಧೆಯ ಕುರಿತು ಅಣಕು ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವುದು.

ಸ್ಪರ್ಧೆಗೆ ಗೂಗಲ್ ಫಾರಂ ಮೂಲಕ ಮೊಬೈಲ್‌ನಿಂದ ನೋಂದಾಯಿಸಲು ತಾ. ೨೪ ರಂದು (ಇಂದು) ಕೊನೆ ದಿನಾಂಕವಾಗಿದೆ.

ರಸಪ್ರಶ್ನೆ ಸ್ಪರ್ಧೆಗೆ ನೋಂದಾಯಿಸಲು ಈ ಕೆಳಗಿನ ಲಿಂಕ್ ಬಳಸಲು ತಿಳಿಸಿದೆ. hಣಣಠಿs://ಜಿoಡಿms.gಟe/೯ಆಘಿsoಕಿ೯೧s೩ಖಿಎಗಿv೨೮೬