ಮಡಿಕೇರಿ, ಜೂ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಇ-ಆಡಳಿತ ವಿಭಾಗದ ಸಲಹೆಗಾರರಾಗಿರುವ ಬೇಳೂರು ಸುದರ್ಶನ ಅವರು ಡಿಜಿಟಲ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ವಹಿಸಲಿದ್ದು, ಅತಿಥಿಗಳಾಗಿ ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜ ಮೈಸೂರು ಇದರ ಅಧ್ಯಕ್ಷ ತೋಟಂಬೈಲು ಈ. ಮನೋಹರ್ ಪಾಲ್ಗೊಳ್ಳಲಿದ್ದಾರೆ.

ಅರೆಭಾಷೆ ಪುಸ್ತಕಗಳ ಡಿಜಿಟಲೀಕರಣ ಯೋಜನೆಯಡಿಯಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ೧೧ ಪುಸ್ತಕಗಳು, ಖಾಸಗಿಯಾಗಿ ಪ್ರಕಟಿಸಿದ ಅರೆಭಾಷೆಯ ೧೦ ಪುಸ್ತಕಗಳು, ಅರೆಭಾಷೆ ಸಂಸ್ಕೃತಿಗೆ ಸಂಬAಧಿಸಿ ಕನ್ನಡ ಭಾಷೆಯಲ್ಲಿರುವ ೧೩ ಪುಸ್ತಕಗಳು, ಪಟ್ಟಡ ಪ್ರಭಾಕರ ಅವರ ಸಂಪಾದಕತ್ವದಲ್ಲಿ ಹೊರತಂದ ಕೊಡಗು ಸಂಗಾತಿ ಪತ್ರಿಕೆ, ಅಕಾಡೆಮಿ ಪ್ರಕಟಿತ ತ್ರೆöÊಮಾಸಿಕ ಸಂಚಿಕೆಯಾದ ಹಿಂಗಾರ, ಸೂದನ ಈರಪ್ಪ ಅವರ ಸಂಪಾದಕತ್ವದಲ್ಲಿ ಹೊರ ಬಂದ ಗೌಡ ದೊನಿ, ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಪಿಹೆಚ್‌ಡಿ ಅಧ್ಯಯನ, ೧೯೭೦ರಲ್ಲಿ ಕೋಟಿ ಕುಶಾಲಪ್ಪ ಗೌಡ ಅವರು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಮೂಲಕ ಹೊರ ತಂದ ‘ಗೌಡ ಕನ್ನಡ ಪುಸ್ತಕ’, ೧೯೬೮ರಲ್ಲಿ ದ.ಕ. ಮತ್ತು ಕೊಡಗು ಗೌಡ ಸಮಾಜ ಬೆಂಗಳೂರು ಇವರು ಹೊರ ತಂದ ಗೌಡ ಸಂಸ್ಕೃತಿ ಪುಸ್ತಕಗಳು ಸೇರಿದಂತೆ ಹಲವಾರು ಅಧ್ಯಯನ ಯೋಗ್ಯ ಪುಸ್ತಕಗಳು ಎರಡನೇ ಹಂತದ ಡಿಜಿಟಲೀಕರಣ ಯೋಜನೆಯಲ್ಲಿ ಪೂರ್ಣಗೊಂಡಿವೆ.

ಅರೆಭಾಷೆ ಐಎಸ್‌ಓ ಸ್ಥಾನಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪುಸ್ತಕ ಡಿಜಿಟಲೀಕರಣ ಯೋಜನೆ ತುಂಬಾ ಮಹತ್ವವುಳ್ಳದ್ದಾಗಿದೆ. ಮುಂದಿನ ದಿವಸಗಳಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಅಧ್ಯಯನ ಮಾಡುವವರಿಗೆ ಕೂಡ ಇದು ತುಂಬಾ ಪ್ರಯೋಜನಕಾರಿಯಾಗಲಿದೆ. ಹಾಗೆಯೇ ಅರೆಭಾಷೆ ಜನಾಂಗದ ಸಂಸ್ಕೃತಿಯ ಬಗ್ಗೆ ಇರುವಂತಹ ಪುಸ್ತಕಗಳು ಜನಾಂಗದ ಜನರಿಗೆ ಶುಭ ಮತ್ತು ಅಶುಭ ಕಾರ್ಯ, ಹಬ್ಬ ಹರಿದಿನಗಳಲ್ಲಿ ಆಚರಣೆಯ ಸಂದರ್ಭದಲ್ಲಿ ಸಂಶಯ ಬಂದಾಗ ತಕ್ಷಣ ಮೊಬೈಲ್ ಮೂಲಕ ಶೋಧಿಸಿ ಮಾಹಿತಿ ಪಡೆದುಕೊಳ್ಳುವುದಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ಕಳೆದ ಸಾಲಿನಲ್ಲಿ ಹಾಗೂ ಪ್ರಸ್ತುತ ಸಾಲಿನಲ್ಲಿ ಸೇರಿದಂತೆ ಒಟ್ಟು ೧೪,೧೭೪ ಪುಟಗಳು ಡಿಜಿಟಲೀಕರಣಗೊಂಡಿದೆ ಎಂದು ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಅಗೋಳಿಕಜೆ ಧನಂಜಯ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಉಪಸ್ಥಿತರಿದ್ದರು.