ಮಡಿಕೇರಿ, ಜೂ.೨೩: ಭೋಪಾಲ್‌ನಲ್ಲಿ ನಡೆಯುತ್ತಿರುವ ರಾಷ್ಟಿçÃಯ ನಾಗರಿಕ ಸೇವಾ ಹಾಕಿ ಕ್ರೀಡಾಕೂಟದಲ್ಲಿ ಜಿಲ್ಲೆಯ ಎಂಟು ಮಂದಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಂದಾಯ ಇಲಾಖೆಯ ಪ್ರಕಾಶ್ ಪಳಂಗಪ್ಪ, ಪಶುಸಂಗೋಪನೆ ಇಲಾಖೆಯ ರಮೇಶ್, ಶಿಕ್ಷಣ ಇಲಾಖೆಯ ಲೋಕೇಶ್ ಆರ್.ಡಿ, ಮಹೇಶ್ ಆರ್.ಡಿ., ಕಂದಾಯ ಇಲಾಖೆಯ ಜಾಗೃತ್, ಮೋನ್ ಮೊಣ್ಣಪ್ಪ, ಸುಬ್ಬಯ್ಯ, ಮಾಚಯ್ಯ, ಆರೋಗ್ಯ ಇಲಾಖೆಯ ನವೀನ್ ಕುಮಾರ್, ತಂಡದ ಕೋಚ್ ಆಗಿ ಶಿಕ್ಷಣ ಇಲಾಖೆಯ ಪೂರ್ಣೇಶ್ ಹಾಕಿ ಪಂದ್ಯದಲ್ಲಿ ಭಾಗವಹಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಅವರು ತಿಳಿಸಿದ್ದಾರೆ.