ಮಡಿಕೇರಿ, ಜೂ.೨೩: ರಾಷ್ಟçದ ೪೩ ಗ್ರಾಮೀಣ ಬ್ಯಾಂಕ್ಗಳಲ್ಲಿ (ಆರ್ಆರ್ಬಿ) ಖಾಲೀ ಇರುವ ೮,೧೦೬ ಕಚೇರಿ ಸಹಾಯಕರು ಮತ್ತು ಆಫಿಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆ ಅಧಿಸೂಚನೆಯನ್ನು ಐಬಿಪಿಎಸ್ ಸಂಸ್ಥೆ ಪ್ರಕಟಿಸಿದ್ದು, ತಾ. ೨೭ ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಹೆಚ್ಚಿನ ಮಾಹಿತಿಗೆ hಣಣಠಿs://ತಿತಿತಿ.ibಠಿs.iಟಿ/ ವೀಕ್ಷಿಸಬಹುದಾಗಿದೆ. ಈ ಬ್ಯಾಂಕ್ ಪರೀಕ್ಷೆಗಳಿಗೆ ಮತ್ತು ಮುಂಬರುವ ಎಲ್ಲಾ ಬ್ಯಾಂಕ್ ಪರೀಕ್ಷೆಗಳಿಗೆ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿರುವ ಅನುಭವಿ ನುರಿತ ವಿಷಯ ತಜ್ಞರಿಂದ ಹಾಸನದ ಸಾಲಗಾಮೆ ರಸ್ತೆ ಬಳಿಯಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯಲ್ಲಿ ರಿಯಾಯಿತಿ ದರದಲ್ಲಿ ಆಫ್ಲೈನ್ ತರಬೇತಿ ಪ್ರಾರಂಭಿಸುತ್ತಿದ್ದು, ಆಸಕ್ತರು ತಾ. ೨೭ ರೊಳಗೆ ಮೊಬೈಲ್ ಸಂಖ್ಯೆ ೮೬೬೦೨೧೭೭೩೯ ಅಥವಾ ೦೮೧೭೨-೨೪೫೧೩೫ ಕ್ಕೆ ಕರೆ/ವಾಟ್ಸಾಪ್ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ ತಿಳಿಸಿದ್ದಾರೆ.