ನಾಪೋಕ್ಲು, ಜೂ. ೨೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ತಾಲೂಕು ವತಿಯಿಂದ ಯಂತ್ರಶ್ರೀ ತರಬೇತಿ ಕಾರ್ಯಕ್ರಮವನ್ನು ಬಿಟ್ಟಂಗಾಲದಲ್ಲಿ ಏರ್ಪಡಿಸಲಾಯಿತು.

ಸಿಹೆಚ್‌ಎಸ್‌ಸಿ ಸುಳ್ಯ ವಿಭಾಗದ ಯೋಜನಾಧಿಕಾರಿಗಳಾದ ಉಮೇಶ್ ಮಾತನಾಡಿ ಯಂತ್ರಶ್ರೀಯ ಮುಖ್ಯ ಉದ್ದೇಶಗಳು, ಯಾಂತ್ರಿಕೃತ ಬೇಸಾಯದಲ್ಲಿ ಬಳಕೆ ಮಾಡಬಹುದಾದ ಯಂತ್ರಗಳು, ಹಸಿರೆಲೆ ಗೊಬ್ಬರ, ಭೂಮಿ ತಯಾರಿ, ನರ್ಸರಿ ತಯಾರಿ, ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸಾಮಾನ್ಯ ಪದ್ಧತಿಗೂ ಹಾಗೂ ಯಂತ್ರಶ್ರೀ ಪದ್ಧತಿಗೂ ಇರುವ ವ್ಯತ್ಯಾಸ, ಯಂತ್ರಶ್ರೀ ನಾಟಿ ಹಾಗೂ ಕಳೆ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ಸಿಹೆಚ್‌ಎಸ್‌ಸಿ ಸುಳ್ಯ ವಿಭಾಗದ ಇಂಜಿನಿಯರ್ ತೇಜಸ್, ಒಕ್ಕೂಟದ ಅಧ್ಯಕ್ಷ ರಂಜನ್ ಪಿ.ಸಿ., ಸಿಹೆಚ್‌ಎಸ್‌ಸಿ ಪ್ರಬಂಧಕÀ ಸಚಿನ್, ಸೇವಾ ಪ್ರತಿನಿಧಿ ಪುಷ್ಪಾ, ಕೃಷಿ ಮೇಲ್ವಿಚಾರಕ ರಾಮ್‌ಕುಮಾರ್ ಉಪಸ್ಥಿತರಿದ್ದರು.