ಕೂಡಿಗೆ, ಜೂ.೨೩: ಭಾರತೀಯ ರೆಡ್ ಕ್ರಾಸ್ ಸಂಸೆಯ ಕುಶಾಲನಗರ ತಾಲೂಕು ಘಟಕದ ವತಿಯಿಂದ ತಾಲೂಕಿನ ವಿವಿಧ ಶಾಲಾ - ಕಾಲೇಜುಗಳಲ್ಲಿ ಕೋವಿಡ್ ತಡೆಯ ಜನಜಾಗೃತಿ ಅಭಿಯಾನದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಸ್ಕ್ ವಿತರಿಸಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಸಭಾಪತಿ ಎಸ್.ಕೆ.ಸತೀಶ್, ಮುಂದಿನ ದಿನಗಳಲ್ಲಿ ಕೋವಿಡ್ ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಕುಶಾಲನಗರ ತಾಲೂಕಿನ ಸರ್ಕಾರಿ ಇನ್ನಿತರ ಶಾಲಾ - ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ವಿದ್ಯಾರ್ಥಿಗಳು ಮತ್ತಿತರರಿಗೆ ೧ ಲಕ್ಷದಷ್ಟು ಮಾಸ್ಕ್ಗಳನ್ನು ವಿತರಿಸಲಾಗುವುದು ಎಂದರು.
ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಶಾಲಾ - ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಆರೋಗ್ಯ ರಕ್ಷಣೆ ಮತ್ತು ಕೋವಿಡ್ ತಡೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಾಲೆಯ ಪರವಾಗಿ ಮಾಸ್ಕ್ ಸ್ವೀಕರಿಸಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ಮಕ್ಕಳ ಆರೋಗ್ಯದ ಹಿನ್ನೆಲೆಯಲ್ಲಿ ಮಾಸ್ಕ್ ವಿತರಣೆ ಮೂಲಕ ಕೋವಿಡ್ ತಡೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಜಾಗೃತಿ ಅಭಿಯಾನವು ಶ್ಲಾಘನೀಯವಾದುದು ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಎಂ.ಡಿ.ರAಗಸ್ವಾಮಿ ಮಾತನಾಡಿ, ಭವಿಷ್ಯದಲ್ಲಿ ಕೋವಿಡ್ ನ ನಾಲ್ಕನೇ ಅಲೆ ಸಂಭವಿಸದAತೆ ನಾವು ಜಾಗ್ರತೆ ವಹಿಸಬೇಕಿದೆ ಎಂದರು. ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಪದಾಧಿಕಾರಿಗಳಾದ ಬಿ.ಅಮೃತ್ ರಾಜ್, ಚಂದ್ರು, ಶೋಭಾ ಸತೀಶ್, ಎನ್.ಕೆ.ಮೋಹನ್ ಕುಮಾರ್, ಓಬಲ್ ರೆಡ್ಡಿ, ಅಣ್ಣಯ್ಯ, ಸಂತೋಷ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನAದ ಪ್ರಕಾಶ್, ಎಸ್.ಎಂ.ಗೀತಾ, ಪಿ.ಅನಿತಾ ಕುಮಾರಿ, ಅನ್ಸಿಲಾ ರೇಖಾ, ಭೋಜಮ್ಮ ಇತರರು ಇದ್ದರು.
ಡಯಟ್‌ನಲ್ಲಿ ವಿತರಣೆ : ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ನಡೆದ ಕಾರ್ಯಕ್ರಮದ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸಭಾಪತಿ ಎಸ್.ಕೆ.ಸತೀಶ್ ಮಾಸ್ಕ್ ಗಳನ್ನು ಡಯಟ್ ಸಂಸ್ಥೆಯ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಸ್ವೀಕರಿಸಿದರು.
ಡಯಟ್ ಸಂಸ್ಥೆಯ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಆರೋಗ್ಯ ರಕ್ಷಣೆಯ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ನೀಡುತ್ತಿರುವುದು ಶ್ಲಾಘನೀಯವಾದುದು. ಕೋವಿಡ್ ಸಂದರ್ಭದಲ್ಲಿ ಕೋವಿಡ್ ತಡೆಗಟ್ಟಲು ಈ ಸಂಸ್ಥೆಯು ಕೈಗೊಂಡ ಸೇವಾ ಕಾರ್ಯ ಮಾದರಿಯಾದುದು ಎಂದರು.
ಡಯಟ್ ಉಪನ್ಯಾಸಕರಾದ ವಿಜಯ್, ನೀಲಕಂಠಪ್ಪ, ಶೇಖರ್,ಸಿದ್ದೇಶ್, ತಾಂತ್ರಿಕ ಅಧಿಕಾರಿ ಹರೀಶ್ ಇತರರು ಇದ್ದರು. ಕುಶಾಲನಗರ ಅನುಗ್ರಹ ಪಿಯೂ ಮತ್ತು ಪದವಿ ಕಾಲೇಜು ಸೇರಿದಂತೆ ಕೂಡಿಗೆ, ಮುಳ್ಳುಸೋಗೆ, ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಕೆ.ಇ.ಎಸ್.ಕಿಶೋರ ಕೇಂದ್ರ ಸೇರಿದಂತೆ ಕುಶಾಲನಗರ ಹಾಗೂ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಗೆ ಬುಧವಾರ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಲಾಯಿತು.