ಸೋಮವಾರಪೇಟೆ, ಜೂ. ೨೨: ಕಳೆದ ೧೯೯೮ರಲ್ಲಿ ಲಯನ್ಸ್ ಕ್ಲಬ್‌ನಿಂದ ನಿರ್ಮಾಣಗೊಂಡಿದ್ದ ಇಲ್ಲಿನ ಚನ್ನಬಸಪ್ಪ ಸಭಾಂಗಣ ಸಮೀಪದ ಬಸ್ ನಿಲ್ದಾಣವನ್ನು ಇದೀಗ ಕ್ಲಬ್ ಆಶ್ರಯದಲ್ಲಿ ದುರಸ್ತಿ ಪಡಿಸಲಾಗಿದ್ದು, ನೂತನವಾಗಿ ಅಳವಡಿಸಿದ ನಾಮಫಲಕವನ್ನು ಅನಾವರಣ ಮಾಡಲಾಯಿತು.

ಈ ಸಂದರ್ಭ ಲಯನ್ಸ್ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ದಾನಿಗಳಾದ ಕೆ.ಡಿ. ವೀರಪ್ಪ, ಕಾರ್ಯದರ್ಶಿ ಜಿ.ಎಸ್. ರಾಜಾರಾಮ್, ಸದಸ್ಯರಾದ ಕೆ.ಎನ್. ತೇಜಸ್ವಿ, ಎಸ್.ಬಿ. ಲೀಲಾರಾಂ, ಸಿ.ಕೆ. ರೋಹಿತ್, ಬಿ.ಎನ್. ರಾಮಚಂದ್ರ, ಡಿ.ಟಿ. ರಾಜೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.